ಕೊರೋನಾ ನಡುವೆ ರಾಜ್ಯದಲ್ಲಿ ಹೆಚ್ಚಾಗಿದೆ ಕಣ್ಣಿನ ಸೋಂಕು ಪ್ರಕರಣ!

By Kannadaprabha NewsFirst Published May 16, 2020, 7:52 AM IST
Highlights

ಕೊರೋನಾ ನಡುವೆ ‘ಮದ್ರಾಸ್‌ ಐ’ ಕಾಟ!| ಬಿಸಿಲಿನ ಬೇಗೆಗೆ ನಗರದಲ್ಲಿ ಕಣ್ಣಿನ ಸೋಂಕು ಪ್ರಕರಣ ಹೆಚ್ಚಳ| ನಿತ್ಯ 8ರಿಂದ 10 ಪ್ರಕರಣ ದಾಖಲು

ಬೆಂಗಳೂರು(ಮೇ.16): ಕೊರೋನಾ ವೈರಸ್‌ ಜನರನ್ನು ಬಾಧಿಸುತ್ತಿರುವ ಬೆನ್ನಲ್ಲೇ ಬಿಸಿಲಿನ ಬೇಗೆಗೆ ನಗರದಲ್ಲಿ ‘ಮದ್ರಾಸ್‌ ಐ’ ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರುತ್ತಿದ್ದು, ಕಳೆದ ಕೆಲ ದಿನಗಳಿಂದ ಮದ್ರಾಸ್‌ ಐ (ಕಾಂಜಂಕ್ಟಿವಿಟಿಸ್‌) ರೋಗಿಗಳು ಹೆಚ್ಚಾಗುತ್ತಿದ್ದಾರೆ. ಪ್ರತಿದಿನ 8ರಿಂದ 10 ಪಿಂಕ್‌ ಐ ಪ್ರಕರಣಗಳು ದಾಖಲಾಗುತ್ತಿವೆ.

ಈ ಕಾಂಜಂಕ್ಟಿವಿಟಿಸ್‌ ವೈರಲ್‌ ಅಥವಾ ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌, ಕಣ್ಣಿನ ಗುಡ್ಡೆಯ ಮೇಲ್ಮೈನಲ್ಲಿರುವ ಭಾಗ (ಮೆಂಬ್ರೇನ್‌) ಮುಚ್ಚುವಂತೆ ಮಾಡುತ್ತದೆ. ಆದರೆ, ಎಲ್ಲಾ ಕಾಂಜಂಕ್ಟಿವಿಟಿಸ್‌ ಸೋಂಕಿನಿಂದ ಕೂಡಿರುವುದಿಲ್ಲ. ಅಲರ್ಜಿಕ್‌ ಕಾಂಜಂಕ್ಟಿವಿಟಿಸ್‌ ಧೂಳು ಅಥವಾ ಪುಷ್ಪರೇಣುನಿಂದ ಉಂಟಾಗುತ್ತವೆ. ಶೇ.90ರಷ್ಟುಕಾಂಜಂಕ್ಟಿವಿಟಿಸ್‌ ಅಡೆನೋವೈರಸ್‌ನಿಂದ ಬರುತ್ತವೆ.

ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!

ದೃಷ್ಟಿ ಮಸುಕು:

ಕಣ್ಣಿನ ಕಪ್ಪು ಭಾಗದ ಮೇಲಿನ ಪದರವಾದ ಕಾರ್ನಿಯಾಗೆ ಸೋಂಕು ತಗುಲಿದ್ದರೆ, ದೃಷ್ಟಿ ಮಸುಕಾಗಲಿದೆ. ಅಪರೂಪದ (ಅಕ್ಯೂಟ್‌ ಹೆಮರ್ಹೇಜಿಕ್‌ ಕಾಂಜಂಕ್ಟಿವಿಟಿಸ್‌) ಪ್ರಕರಣಗಳಲ್ಲಿ ಊತವಾದ ಕಣ್ಣುಗಳಿಂದ ರಕ್ತ ಸೋರುತ್ತದೆ .

ಬೆಂಗಳೂರಿನ ಡಾ.ಅಗರ್‌ವಾಲ್ಸ್‌ ಆಸ್ಪತ್ರೆಯ ಕೆಟರಾರ‍ಯಕ್ಟ್, ಕಾರ್ನಿಯಾ ರಿಫ್ರಾಕ್ಟಿವ್‌ ಸರ್ಜರಿಯ ಸೀನಿಯರ್‌ ಕನ್ಸಲ್ಟೆಂಟ್‌ ಡಾ.ಅರ್ಚನಾ ಎಸ್‌., ಕಾಂಜಂಕ್ಟಿವಿಟಿಸ್‌ ಸೋಂಕಿಗೆ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದರೆ ದೊಡ್ಡ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತದೆ. ಜನರು ಇಂತಹ ಸಮಸ್ಯೆಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಇದಕ್ಕೆ ಬದಲಾಗಿ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದು ಹೇಳುತ್ತಾರೆ.

ಕೆಲವರಲ್ಲಿ ಈ ಸೋಂಕು ವ್ಯಕ್ತಿಯ ಎರಡನೇ ಕಣ್ಣಿಗೂ ವೇಗವಾಗಿ ಹರಡುತ್ತದೆ. ಪ್ರತಿದಿನ ಮದ್ರಾಸ್‌ ಐ ಪ್ರಕರಣಗಳ್ಳುಳ್ಳ ಕನಿಷ್ಠ ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕು ವೈರಸ್‌ನಿಂದ ಬರುವುದರಿಂದ ಆಂಟಿಬಯೋಟಿಕ್‌ ಔಷಧ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅವರು ವಿವರಿಸುತ್ತಾರೆ.

10 ಕೋಟಿ ಕಾರು, 1.5 ಲಕ್ಷ ರುಪಾಯಿ ಸಂಬಳ ಕೈಬಿಟ್ಟ ರಾಷ್ಟ್ರಪತಿ!

ಈ ಲಕ್ಷಣಗಳಿದ್ದರೆ ಎಚ್ಚರ

ಕಣ್ಣಿನಲ್ಲಿ ತುರಿಕೆ, ನೀರು ಬರುವುದು, ಕಣ್ಣುಗಳು ಕೆಂಪಾಗುವುದು, ಪಿಸುರು ಸೋರುವುದು ಮತ್ತು ಬೆಳಕಿಗೆ ಕಣ್ಣೊಡ್ಡಲು ಸಾಧ್ಯವಾಗದಿರುವುದು ‘ಮದ್ರಾಸ್‌ ಐ’ ಲಕ್ಷಣಗಳಾಗಿವೆ.

ಮುನ್ನೆಚ್ಚರಿಕೆ ಕ್ರಮಗಳೇನು?

ಈ ಸೋಂಕು ಬಹುಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಬಳಸಿದ ಟವೆಲ್‌, ಪಿಲ್ಲೋ ಕವರ್‌ ಸೇರಿದಂತೆ ರೋಗಿ ಬಳಸುವ ವಸ್ತುಗಳನ್ನು ಮತ್ತೊಬ್ಬರು ಬಳಸಬಾರದು. ರೋಗಿಗಳು ಕಣ್ಣುಗಳಿಂದ ಸೋರುವ ನೀರು, ಇತರೆ ಅಂಶಗಳನ್ನು ಪೇಪರ್‌ ನ್ಯಾಪ್‌ಕಿನ್‌ಗಳನ್ನು ಮಾತ್ರ ಬಳಸಬೇಕು. ಪೇಪರ್‌ ನ್ಯಾಪ್‌ಕಿನ್‌ಗಳನ್ನು ಮರು ಬಳಕೆ ಮಾಡಬಾರದು. ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು. ಕಣ್ಣುಗಳಿಂದ ನೀರು ಸೋರಿಕೆ ನಿಲ್ಲುವವರೆಗೆ ಸೋಂಕು ಪೀಡಿತರು ಶಾಲೆಗಳು, ಕಚೇರಿಗಳು ಅಥವಾ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

click me!