Wimbledon 2023: ಕಾರ್ಲೊಸ್ ಆಲ್ಕರಜ್‌ ಮೂರನೇ ಸುತ್ತಿಗೆ ಲಗ್ಗೆ..!

By Kannadaprabha NewsFirst Published Jul 8, 2023, 6:51 AM IST
Highlights

ವಿಶ್ವ ನಂ.1 ಟೆನಿಸಿಗ ಕಾರ್ಲೊಸ್ ಆಲ್ಕರಜ್‌ ಅವರ ಮಿಂಚಿನ ಆಟ
ಮೂರನೇ ಸುತ್ತು ಪ್ರವೇಶಿಸಿದ ಸ್ಪೇನ್‌ನ ಆಲ್ಕರಜ್‌
ಜರ್ಮನಿಯ ಅಲೆಕ್ಸಾಂಡರ್ ಜ್ವರೆವ್ ಕೂಡಾ ಮೂರನೇ ಸುತ್ತಿಗೆ ಲಗ್ಗೆ

ಲಂಡನ್(ಜು.08): ವಿಶ್ವ ನಂ.1 ಟೆನಿಸಿಗ, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್‌, ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ 20ರ ಹರೆಯದ ಆಲ್ಕರಜ್‌, ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ದ 6-4, 7-6(7/2), 6-3 ನೇರ ಸೆಟ್‌ಗಳಲ್ಲಿ ಜಯಿಸಿದರು. ಇನ್ನು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಡೆನ್ಮಾರ್ಕ್‌ನ ಹೋಲ್ಗರ್ ರುನೆ 3ನೇ ಸುತ್ತಿಗೇರಿದರು.

ರಬೈಕೆನಾ, ಸಬಲೆಂಕಾಗೆ ಜಯ: 

ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌, ಕಜಕಿಸ್ತಾನದ ಎಲೆನಾ ರಬೈಕೆನಾ 2ನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲೈಸ್ ಕಾರ್ನೆಟ್ ವಿರುದ್ದ 6-2, 7-6(7-2) ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿದರು. ಇನ್ನು ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ವಿಶ್ವ ನಂ.2 ಶ್ರೇಯಾಂಕಿತ ಆಟಗಾರ್ತಿ ಅರೈನಾ ಸಬಲೆಂಕಾ ಕೂಡಾ ಮೂರನೇ ಸುತ್ತಿಗೇರಿದರು. ಇನ್ನು ಇದೇ ವೇಳೆ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ 4ನೇ ಸುತ್ತಿಗೆ ಪ್ರವೇಶ ಪಡೆದರು.

ಸಿಂಧು, ಲಕ್ಷ್ಯ ಸೇನ್‌ ಕೆನಡಾ ಓಪನ್‌ ಕ್ವಾರ್ಟ​ರ್‌ ಫೈನ​ಲ್‌​ಗೆ

ಕ್ಯಾಲ್ಗ​ರಿ: ಈ ವರ್ಷದ ಚೊಚ್ಚಲ ಚಿನ್ನದ ಪದ​ಕದ ಮೇಲೆ ಕಣ್ಣಿ​ಟ್ಟಿ​ರುವ ಭಾರ​ತದ ತಾರಾ ಶಟ್ಲರ್‌​ಗ​ಳಾದ ಪಿ.ವಿ.​ಸಿಂಧು ಹಾಗೂ ಲಕ್ಷ್ಯ ಸೇನ್‌ ಕೆನಡಾ ಓಪನ್‌ ಸೂಪರ್‌ 500 ಟೂರ್ನಿ​ಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾ​ರೆ. ಗುರು​ವಾರ ರಾತ್ರಿ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯ​ದಲ್ಲಿ ಸಿಂಧು, ಜಪಾ​ನ್‌ನ ನಾಟ್ಸುಕಿ ನಿದೈರಾ ವಿರುದ್ಧ ಸೆಣ​ಸ​ಬೇ​ಕಿ​ತ್ತು. ಆದರೆ ನಾಟ್ಸುಕಿ ಗಾಯ​ಗೊಂಡು ಟೂರ್ನಿ​ಯಿಂದ ಹೊರ​ಬಿದ್ದ ಕಾರಣ ಸಿಂಧು ವಾಕ್‌​ಓ​ವರ್‌ ಮೂಲಕ ಕ್ವಾರ್ಟ​ರ್‌​ಗೇ​ರಿ​ದರು. 

Wimbledon 2023: ನೋವಾಕ್ ಜೋಕೋವಿಚ್‌ 3ನೇ ಸುತ್ತಿಗೆ ಲಗ್ಗೆ

ಪುರು​ಷರ ಸಿಂಗಲ್ಸ್‌ 2ನೇ ಸುತ್ತಿ​ನಲ್ಲಿ ಲಕ್ಷ್ಯ ಸೇನ್‌ ಬ್ರೆಜಿ​ಲ್‌ನ ಯೊಗೋರ್‌ ಕೊಯೆಲ್ಹೊ ಅವ​ರನ್ನು 21-15, 21-11 ಅಂತ​ರ​ದಲ್ಲಿ ಮಣಿಸಿ ಅಂತಿಮ 4ರ ಘಟ್ಟಪ್ರವೇ​ಶಿ​ಸಿ​ದರು. ಆದರೆ ಪುರು​ಷರ ಡಬ​ಲ್ಸ್‌​ನಲ್ಲಿ ವಿಷ್ಣು​ವ​ರ್ಧ​ನ್‌-ಕೃಷ್ಣ​ಪ್ರ​ಸಾದ್‌ ಜೋಡಿ ಸೋತು ಹೊರ​ಬಿ​ತ್ತು.

ಕಿರು​ಕುಳ ಕೇಸ್‌: ಬ್ರಿಜ್‌​ಗೆ ದೆಹಲಿ ಕೋರ್ಚ್‌ ಸಮ​ನ್ಸ್‌

ನವ​ದೆ​ಹ​ಲಿ: ಕುಸ್ತಿ​ಪ​ಟು​ಗ​ಳಿಗೆ ಲೈಂಗಿಕ ಕಿರು​ಕುಳ ನೀಡಿದ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ನಿರ್ಗ​ಮಿತ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ಗೆ ಶುಕ್ರ​ವಾರ ದೆಹಲಿ ಮ್ಯಾಜಿ​ಸ್ಪ್ರೇಟ್‌ ಕೋರ್ಚ್‌ ಸಮನ್ಸ್‌ ಜಾರಿ​ಗೊ​ಳಿ​ಸಿದೆ. ಬ್ರಿಜ್‌ ವಿರುದ್ಧ ದೆಹ​ಲಿ ಪೊಲೀ​ಸರು ಸಲ್ಲಿ​ಸಿದ್ದ ಜಾರ್ಜ್‌​ಶೀ​ಟ್‌ಗೆ ಸಂಬಂಧಿ​ಸಿ​ದಂತೆ ಶುಕ್ರ​ವಾರ ವಿಚಾ​ರಣೆ ನಡೆ​ಸಿದ ನ್ಯಾ.ಹ​ರ್ಜೀತ್‌ ಸಿಂಗ್‌ ಜಸ್ಪಾಲ್‌ ಅವರು ಜುಲೈ 18ರಂದು ನ್ಯಾಯಾ​ಧೀ​ಶರ ಮುಂದೆ ಹಾಜ​ರಾ​ಗು​ವಂತೆ ಬ್ರಿಜ್‌ಭೂಷಣ್‌ ಹಾಗೂ ಡ​ಬ್ಲ್ಯು​ಎ​ಫ್‌​ಐನ ಮಾಜಿ ಸಹ ಕಾರ‍್ಯ​ದರ್ಶಿ ನಿತಿನ್‌ ತೋಮ​ರ್‌ಗೆ ಸೂಚನೆ ನೀಡಿದೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ..! ಕಾರು ಅಪ್ಪಚ್ಚಿ

ಬಂಗಲೆ ಮುಂದೆ ಕೃತಕಕೆರೆ ನಿರ್ಮಿಸಿದ ನೇಯ್ಮರ್‌ಗೆ 27 ಕೋಟಿ ರುಪಾಯಿ ದಂಡ!

ಸಾವೊ ಪಾಲೊ(ಬ್ರೆಜಿಲ್‌): ಪರಿಸರ ನಿಯಮಗಳನ್ನು ಉಲ್ಲಂಘಿಸಿ ರಿಯೋ ಡಿ ಜನೆರಿಯೋದಲ್ಲಿರುವ ತಮ್ಮ ನಿವಾಸದ ಮುಂದೆ 10764 ಚದರ ಅಡಿ ಅಳತೆಯ ಕೃತಕ ಕೆರೆ ನಿರ್ಮಾಣ ಮಾಡಿದ್ದಕ್ಕೆ ಬ್ರೆಜಿಲ್‌ನ ತಾರಾ ಫುಟ್ಬಾಲಿಗ ನೇಯ್ಮರ್‌ಗೆ ಸ್ಥಳೀಯ ನಗರಾಡಳಿತವು ಬರೋಬ್ಬರಿ 3.3 ಮಿಲಿಯನ್‌ ಅಮೆರಿಕನ್‌ ಡಾಲರ್‌(ಅಂದಾಜು 27.05 ಕೋಟಿ ರು.) ದಂಡ ವಿಧಿಸಿದೆ.

click me!