ಆಟದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಫುಟ್ಬಾಲಿಗನ ಸಾವು! ವಿಡಿಯೋ ವೈರಲ್

By Naveen KodaseFirst Published Nov 5, 2024, 11:15 AM IST
Highlights

 ಪೆರು ದೇಶದ ಸ್ಥಳೀಯ ಫುಟ್ಬಾಲ್‌ ಟೂರ್ನಿ ವೇಳೆ ಫುಟ್ಬಾಲಿಗನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಲಿಮಾ(ಪೆರು): ಪೆರು ದೇಶದ ಸ್ಥಳೀಯ ಫುಟ್ಬಾಲ್‌ ಟೂರ್ನಿ ವೇಳೆ ಮೈದಾನಕ್ಕೆ ಸಿಡಿಲು ಬಡಿದ ಕಾರಣ ಓರ್ವ ಆಟಗಾರ ಮೃತಪಟ್ಟಿದ್ದು, ಇತರ ಐವರು ತೀವ್ರ ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ. ಮೃತ ಫುಟ್ಬಾಲಿಗರನ್ನು 39 ವರ್ಷದ ಜೋಸ್‌ ಹ್ಯುಗೊ ಡೆ ಎಂದು ಗುರುತಿಸಲಾಗಿದೆ. 

ಆಟಗಾರರು ಮೈದಾನದಲ್ಲಿದ್ದಾಗ ಸಿಡಿಲು ಬಡಿದಿದ್ದು, ಜೋಸ್‌ ಸೇರಿ ಹಲವು ಆಟಗಾರರು ಕುಸಿದು ಬಿದ್ದಿದ್ದಾರೆ. ಗಾಯಗೊಂಡ ಆಟಗಾರರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲು ಬಡಿದು ಆಟಗಾರರು ಕುಸಿದು ಬೀಳುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

In Peru, a soccer player died after being struck by lightning during a match

The tragedy occurred on November 3 during a match between clubs Juventud Bellavista and Familia Chocca, held in the Peruvian city of Huancayo.

During the game, a heavy downpour began and the referee… pic.twitter.com/yOqMUmkxaJ

— NEXTA (@nexta_tv)

Latest Videos

ಕರ್ನಾಟಕದ ಮಹಿಳಾ ಕ್ರಿಕೆಟಿಗರಿಗೆ ಬೆಂಗ್ಳೂರಲ್ಲಿ ನ.10ಕ್ಕೆ ಆಯ್ಕೆ ಟ್ರಯಲ್ಸ್‌

ಸಿಡಿಲಿನ ಶಾಕಕ್ಕೆ ತೀವ್ರ ಗಾಯಗೊಂಡರವನ್ನು ಎರಿಕ್ ಎಸ್ಟಿವಿನ್, ಜೋಸೆಫ್ ಗುಸ್ಟಾವೊ ಹಾಗೂ ಕ್ರಿಸ್ಟಿಯಾನ್ ಸೀಸರ್ ಎಂದು ಗುರುತಿಸಲಾಗಿದೆ.  ಈ ಎಲ್ಲರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ. ಇನ್ನು ಸ್ಥಳೀಯ ವರದಿಯ ಪ್ರಕಾರ ಗೋಲ್ ಕೀಪರ್ ಜಾನ್ ಚೊಚ್ಚಾ ಲಾಕ್ಟ ಅವರ ಪರಿಸ್ಥಿತಿ ಗಂಭೀರವಾಗಿದ್ದು, ವೈದ್ಯ ಅವಿರತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.

ಫಿಕ್ಸಿಂಗ್: ಮಿಜೋರಾಂನ 24 ಫುಟ್ಬಾಲಿಗರು, 3 ಕ್ಲಬ್, 3 ಅಧಿಕಾರಿಗಳು ಬ್ಯಾನ್!

ನವದೆಹಲಿ: ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಿಜೋರಾಂ ಫುಟ್ಬಾಲ್ ಸಂಸ್ಥೆ (ಎಂಎಫ್‌) ಮೂರು ಕ್ಲಬ್, 24 ಆಟಗಾರರು ಹಾಗೂ ಮೂವರು ಅಧಿಕಾರಿಗಳಿಗೆ ನಿಷೇಧ ಹೇರಿದೆ. ಸಿಹಫಿ‌ ವೆಂಘುಲನ್ ಎಫ್‌ಸಿ, ಬೆಥೆಲ್‌ ಹೆಮ್ ಎಫ್‌ಸಿ, ರಾಮ್ ಲುನ್ ಅಥ್ಲೆಟಿಕ್ಸ್‌ ಎಫ್‌ಸಿ ಮೂರು ವರ್ಷ ನಿಷೇಧಕ್ಕೊಳ ಗಾದ ಕ್ಲಬ್‌ಗಳು. ಇಬ್ಬರು ಆಟಗಾರರಿಗೆ ಆಜೀವ ನಿಷೇಧ ಸೇರಿ 24 ಆಟಗಾರರಿಗೆ ಶಿಕ್ಷೆವಿಧಿಸಲಾಗಿದೆ. 

ಕಿವೀಸ್‌ ಎದುರು ಭಾರತ ವೈಟ್‌ವಾಶ್‌: ಎದ್ದಿವೆ ಗಂಭೀರ ಪ್ರಶ್ನೆಗಳು!

ಇತ್ತೀಚೆಗೆ ಕೊನೆಗೊಂಡ ಮಿಜೋರಾಂ ಪ್ರೀಮಿಯರ್ ಲೀಗ್‌ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆಸಿದ ಕಾರಣಕ್ಕೆ ಎಂಎಫ್‌ಎ ಈ ಕ್ರಮ ಕೈಗೊಂಡಿದೆ.

click me!