ಭಾರತ ಪ್ರವಾಸಕ್ಕೆ ತಂಡ ಪ್ರಕಟಿಸಿದ ವಿಂಡೀಸ್- ಸ್ಟಾರ್ ಆಟಗಾರರು ಔಟ್!

By Web DeskFirst Published Aug 30, 2018, 5:25 PM IST
Highlights

ಭಾರತ ವಿರುದ್ಧ 2 ಟೆಸ್ಟ್ ಪಂದ್ಯದ ಸರಣಿಗೆ ವೆಸ್ಟ್ಇಂಡೀಸ್ ತಂಡವನ್ನ ಪ್ರಕಟಿಸಲಾಗಿದೆ. ಆದರೆ ವಿಂಡೀಸ್ ತಂಡದ ಹಿರಿಯ ಹಾಗೂ ಸ್ಟಾರ್ ಆಟಗಾರರನ್ನ ಕೈಬಿಡಲಾಗಿದೆ. ಹಾಗಾದರೆ ಭಾರತ ಪ್ರವಾಸಕ್ಕೆ ಸ್ಥಾನ ಪಡೆದ ಆಟಗಾರರು ಯಾರು?

ಕಿಂಗ್ಸಸ್ಟನ್(ಆ.30): ಭಾರತ ವಿರುದ್ದದ 2 ಟೆಸ್ಟ್ ಪಂದ್ಯಗಳ ಸರಣಿಗೆ ವೆಸ್ಟ್ಇಂಡೀಸ್ ತಂಡವನ್ನ ಪ್ರಕಟಿಸಲಾಗಿದೆ. ಭಾರತ ಇಂಗ್ಲೆಂಡ್ ಪ್ರವಾಸದ ಬಳಿಕ  ಆಕ್ಟೋಬರ್ 4 ರಿಂದ ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದೆ.

ವೆಸ್ಟ್ಇಂಡೀಸ್ ಸ್ಟಾರ್ ಆಟಗಾರರಿಗೆ ಕೊಕ್ ನೀಡಿದ ಯುವ ಕ್ರಿಕೆಟಿಗರಿಗೆ ಸ್ಥಾನ ನೀಡಲಾಗಿದೆ. ಜೇಸನ್ ಹೋಲ್ಡರ್ ನಾಯಕರಾಗಿದ್ದರೆ, ಅಲ್ಜಾರಿ ಜೋಸೆಫ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಹಿರಿಯ ಸ್ಪಿನ್ನರ್ ದೇವೇಂದ್ರ ಬಿಶೂ ಕೂಡ ತಂಡ ಸೇರಿಕೊಂಡಿದ್ದಾರೆ.

ಕ್ರೈಗ್ ಬ್ರಾಥ್ವೈಟ್ ಹಾಗೂ ರೋಶ್ಟನ್ ಚೇಸ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎಡಗೈ ಬ್ಯಾಟ್ಸ್‌ಮನ್ ಡೆವೋನ್ ಸ್ಮಿತ್ ಬದಲು ಸುನಿಲ್ ಅಂಬ್ರಿಸ್‌ಗೆ ಸ್ಥಾನ ನೀಡಲಾಗಿದೆ.  

ವೆಸ್ಟ್ಇಂಡೀಸ್ ತಂಡ:  ಜೇಸನ್ ಹೋಲ್ಡರ್(ನಾಯಕ), ಸುನಿಲ್ ಅಂಬ್ರಿಸ್, ದೇವೇಂದ್ರ ಬಿಶು, ಕ್ರೈಗ್ ಬ್ರಾಥ್ವೈಟ್, ರೋಶ್ಟನ್ ಚೇಸ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಜಹ್ಮರ್ ಹ್ಯಾಮಿಲ್ಟನ್, ಶಿಮ್ರೋನ್ ಹೆಟ್ಮೆಯರ್, ಶೈ ಹೋಪ್, ಅಲ್ಜಾರಿ ಜೋಸೆಫ್, ಕೀಮೋ ಪೌಲ್, ಕೀರನ್ ಪೊವೆಲ್, ಕೆಮರ್ ರೋಚ್, ಜೋಮೆಲ್ ವಾರಿಕನ್

click me!