ತಡರಾತ್ರಿ ತಂದೆಯ ಸಾವು-ಬೆಳಗ್ಗೆ ರಣಜಿ ಪಂದ್ಯ-ಸಂಕಷ್ಟದ ದಿನ ನೆನಪಿಸಿದ ಕೊಹ್ಲಿ!

By Web DeskFirst Published Sep 24, 2018, 3:00 PM IST
Highlights

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಪಯಣ ಎಲ್ಲರಿಗೂ ಸ್ಪೂರ್ತಿ. ಸಾಧಿಸೋ ಛಲ, ಗುರಿ ಹಾಗೂ ಇಚ್ಚಾಶಕ್ತಿ ಇದ್ದರೆ ಅದೆಷ್ಟೇ ಅಡೆತಡೆ ಬಂದರೂ ಗುರಿ ಮುಟ್ಟಬಹುದು ಅನ್ನೋದನ್ನ ಕೊಹ್ಲಿ ತೋರಿಸಿದ್ದಾರೆ. ವಿಶೇಷ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಸಂಕಷ್ಟದ ದಿನ ನೆನಪಿಸಿಕೊಂಡಿದ್ದಾರೆ. ಇಲ್ಲಿದೆ ಕೊಹ್ಲಿಯ ಕಷ್ಟಕರ ದಿನದ ವಿವರ.

ನವದೆಹಲಿ(ಸೆ.24): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂಬರ್ 1 ಬ್ಯಾಟ್ಸ್‌ಮನ್. ದೆಹಲಿ ಕ್ರಿಕೆಟ್‌ನಿಂದ ಟೀಂ ಇಂಡಿಯಾ ನಾಯಕನವರೆಗೆ ಕೊಹ್ಲಿ ಕ್ರಿಕೆಟ್ ಜರ್ನಿ ರೋಚಕ ಹಾಗೂ ಅಷ್ಟೆ ಸ್ಫೂರ್ತಿದಾಯಕ.

ಕೊಹ್ಲಿ ಆತ್ಮವಿಶ್ವಾಸ, ಒತ್ತಡದ ಸಂದರ್ಭ ಎದುರಿಸೋ ಸಮಾರ್ಥ್ಯ, ಕಠಿಣ ಅಭ್ಯಾಸ ಕೊಹ್ಲಿಯನ್ನ ಈ ಮಟ್ಟಕ್ಕೆ ತಂದು ನಿಲ್ಲಿದೆ. 2006ರಲ್ಲೇ ಕೊಹ್ಲಿಯ ಮೆಂಟಲಿ ಫುಲ್ ಸ್ಟ್ರಾಂಗ್ ಆಗಿದ್ದರು. ಹೀಗಾಗಿಯೇ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

2006ರಲ್ಲಿ ಕೊಹ್ಲಿ ದೆಹಲಿ ರಣಜಿ ತಂಡದ ಸದಸ್ಯ. ದಹೆಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಕೊಹ್ಲಿ ಭವಿಷ್ಯ ಕೂಡ ಅದೇ ಟೂರ್ನಿಯಲ್ಲಿತ್ತು. ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಅಜೇಯ 40 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಮರುದಿನಕ್ಕೆ ಮಾನಸಿಕವಾಗಿ ಸಿದ್ದವಾಗಿದ್ದ ಕೊಹ್ಲಿಗೆ ಬೆಳ್ಳಂಬೆಳಗ್ಗೆ ಆಘಾತ ಕಾದಿತ್ತು. 

ಮುಂಜಾನೆ 3 ಗಂಟೆ ಕೊಹ್ಲಿ ತಂದೆ ಅಸ್ವಸ್ಥರಾಗಿದ್ದರು. ಸಹಾಯಕ್ಕೆ ಹತ್ತಿರದವರನ್ನ ಕೂಗಿದರು. ಸಮಯಕ್ಕೆ ಸರಿಯಾಗಿ ಯಾರಿಂದಲೂ ಸಹಾಯ ಸಿಗಲಿಲ್ಲ. ಕೊನೆಗೆ ಅಂಬ್ಯುಲೆನ್ಸ್ ಬರೋ ಹೊತ್ತಿಗೆ ಕೊಹ್ಲಿ ತಂದೆ ಸಾವನ್ನಪ್ಪಿದ್ದರು. ಕೊಹ್ಲಿಗೆ ದಿಕ್ಕೇ ತೋಚದಂತಾಯಿತು. ಬೆಳಗ್ಗೆ 9 ಗಂಟೆಗೆ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಬೇಕು. ಇತ್ತ ತಂದೆಯ ಸಾವು. ಅತ್ತ ರಣಜಿ ಪಂದ್ಯ. ಈ ಸಂದರ್ಭವನ್ನ ಎದುರಿಸದ ಕೊಹ್ಲಿಗೆ ಇದೀಗ ಯಾವುದೇ ಒತ್ತಡವನ್ನ ನಿಭಾಯಿಸೋ ಶಕ್ತಿ ಇದೆ.

ತಂದೆಯ ಸಾವಿನ ನಡುವೆಯೂ ಕೊಹ್ಲಿ ಬ್ಯಾಟಿಂಗ ಮುಂದುವರಿಸಿದ್ದರು. ಈ ಕ್ಷಣಗಳನ್ನ ಕೊಹ್ಲಿ ನ್ಯಾಶನಲ್ ಜಿಯೋಗ್ರಫಿ ನಡಿಸದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಕೊಹ್ಲಿ ಕುರಿತು ಸಂದರ್ಶನ ಜಿಯೋಗ್ರಫಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
 

click me!