ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ದಾಖಲೆಗೆ ಸಜ್ಜಾದ ಕೊಹ್ಲಿ

By Suvarna NewsFirst Published Aug 1, 2018, 2:35 PM IST
Highlights

ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ 1000 ಟೆಸ್ಟ್ ಪಂದ್ಯದ ಸಾಧನೆ ಮಾಡಿದರೆ, ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ

ಎಡ್ಜ್‌ಬಾಸ್ಟನ್(ಆ.01): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಇಂಗ್ಲೆಂಡ್ 1000ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದರೆ, ಇತ್ತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಐತಿಹಾಸಿಕ ಸಾಧನೆಗೆ ಸಜ್ಜಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ 977 ರನ್ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 1000 ರನ್ ಪೂರೈಸಿಲು ಕೊಹ್ಲಿಗೆ ಇನ್ನು 23 ರನ್‌ಗಳ ಅವಶ್ಯಕತೆ ಇದೆ. ಮೊದಲ ಪಂದ್ಯದಲ್ಲೇ ಕೊಹ್ಲಿ ಈ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದರೆ, ಇಂಗ್ಲೆಂಡ್ ವಿರುದ್ಧ 1000 ರನ್ ಪೂರೈಸಿದ 12 ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮೊದಲ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಲಂಕರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ 2535 ರನ್ ಸಿಡಿಸಿದ್ದಾರೆ. ಇಷ್ಟೇ 7 ಶತಕ ಹಾಗೂ 13 ಅರ್ಧಶತಕ ಬಾರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಕೊಹ್ಲಿ 9 ಹಾಗೂ ಇಂಗ್ಲೆಂಡ್ ನೆಲದಲ್ಲಿ 5 ಪಂದ್ಯಗಳನ್ನಾಡಿದ್ದಾರೆ. ಆದರೆ ಇಂಗ್ಲೆಂಡ್ ನೆಲದಲ್ಲಿ ಕೊಹ್ಲಿ ಯಶಸ್ಸು ಸಾಧಿಸಿಲ್ಲ. 5 ಪಂದ್ಯಗಳಿಂದ ಕೊಹ್ಲಿ 134 ರನ್ ಬಾರಿಸಿದ್ದಾರೆ. ಆದರೆ ಭಾರತ ನೆಲದಲ್ಲಿ ಕೊಹ್ಲಿ 9 ಪಂದ್ಯಗಳಿಂದ 843 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 2 ಅರ್ಧಶತಕ ದಾಖಲಾಗಿದೆ.

ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಭಾರತೀಯರು:

ಸಚಿನ್ ತೆಂಡೂಲ್ಕರ್ 2535
ಸುನಿಲ್ ಗವಾಸ್ಕರ್ 2483
ರಾಹುಲ್ ದ್ರಾವಿಡ್ 1950
ಗುಂಡಪ್ಪ ವಿಶ್ವನಾಥ್ 1880
ದಿಲೀಪ್ ವೆಂಗಸರ್ಕರ್ 1589
ಕಪಿಲ್ ದೇವ್ 1355
ಮೊಹಮ್ಮದ್ ಅಜರುದ್ದೀನ್ 1278
ವಿಜಯ್ ಮಂಜ್ರೇಕರ್ 1181
ಎಂ ಎಸ್ ಧೋನಿ 1157
ಫಾರುಖ್ ಇಂಜಿನಿಯರ್ 1113
ಚೇತೇಶ್ವರ್ ಪೂಜಾರ 1061
ರವಿ ಶಾಸ್ತ್ರಿ 1026

 

click me!