ವಿಂಡೀಸ್ ಟೆಸ್ಟ್ ಸರಣಿಗೂ ಮುನ್ನಾ ಕೊಹ್ಲಿಗೆ ಟೆನ್ಷನ್...!

Oct 3, 2018, 2:04 PM IST

ಬೆಂಗಳೂರು[ಅ.03]: ವೆಸ್ಟ್’ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಭಾರತಕ್ಕೆ ಆರಂಭದಲ್ಲೇ ವಿಘ್ನವೊಂದು ಎದುರಾಗಿದೆ. ಇತ್ತೀಚೆಗಷ್ಟೇ ಏಷ್ಯಾಕಪ್ ಸಾಮ್ರಾಟನಾಗಿ ಹೊರಹೊಮ್ಮಿದ ಭಾರತ ಇದೀಗ ಅಕ್ಟೋಬರ್ 4ರಿಂದ ರಾಜ್’ಕೋಟ್’ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಾಡಲು ಸಜ್ಜಾಗಿದೆ.

ಈ ಟೆಸ್ಟ್ ಆರಂಭಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿಗೆ ಟೆನ್ಷನ್’ವೊಂದು ಆರಂಭವಾಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ವಿಫಲರಾಗಿದ್ದ ಶಿಖರ್ ಧವನ್ ಹಾಗೂ ಮುರುಳಿ ವಿಜಯ್ ಕೈಬಿಟ್ಟಿರುವುದರಿಂದ ರಾಹುಲ್ ಜತೆಗೆ ಯಾರು ಇನ್ನಿಂಗ್ಸ್ ಆರಂಭಿಸುವುದು ಎನ್ನುವುದೇ ಕೊಹ್ಲಿಗೆ ದೊಡ್ಡ ತಲೆನೋವಾಗಿದೆ. ಕರ್ನಾಟಕದ ಪ್ರತಿಭೆ, ದೇಶಿ ಕ್ರಿಕೆಟ್ ಹೀರೋ ಮಯಾಂಕ್ ಅಗರ್’ವಾಲ್’ಗೆ ಸ್ಥಾನ ಸಿಗುತ್ತೋ, ಇಲ್ಲಾ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುತ್ತಾರೋ ಎನ್ನುವ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ...