ವಿಶ್ವಚಾಂಪಿಯನ್ ಮೇರಿ ಕೋಮ್ ಜೊತೆ ಕೇಂದ್ರ ಕ್ರೀಡಾ ಸಚಿವರ ಬಾಕ್ಸಿಂಗ್!

Nov 1, 2018, 8:20 PM IST

ನವದೆಹಲಿ(ನ.01): ಬಾಕ್ಸಿಂಗ್‌ನಲ್ಲಿ 5 ಬಾರಿ ವಿಶ್ವಚಾಂಪಿಯನ್ ಹಾಗೂ ಒಲಿಂಪಿಕ್ ಕಂಚಿನ ಪದಕ ವಿಜೇತ ಮಹಿಳಾ ಬಾಕ್ಸರ್ ಮೇರಿ ಕೋಮ್ ಹಾಗೂ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ವಿಜೇತ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಬಾಕ್ಸಿಂಗ್ ಭಾರಿ ಸದ್ದು ಮಾಡಿದೆ. ನವೆಂಬರ್ 15 ರಿಂದ ಆರಂಭಗೊಳ್ಳಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಗೆ ಅಭ್ಯಾಸ ನಡೆಸುತ್ತಿರುವ ಮೇರಿ ಕೋಮ್ ಜೊತೆ ರಾಜ್ಯವರ್ಧನ್ ಕೆಲ ಹೊತ್ತು ಅಭ್ಯಾಸ ನಡೆಸಿ ಮೇರಿ ಕೋಮ್ ಸೇರಿದಂತೆ ಇತರ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು. ಇಲ್ಲಿದೆ ವೀಡಿಯೋ.