
ನ್ಯೂಯಾರ್ಕ್(ಏ.13): ಬಾಸ್ಕೆಟ್ಬಾಲ್ ದಿಗ್ಗಜ ಮೈಕಲ್ ಜೋರ್ಡಾನ್ 1998ರ ಎನ್ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13’ ಶೂ ಹರಾಜಿನಲ್ಲಿ ದಾಖಲೆಯ 2.2 ಮಿಲಿಯನ್ ಡಾಲರ್(ಸುಮಾರು 18 ಕೋಟಿ ರುಪಾಯಿ)ಗೆ ಮಾರಾಟವಾಗಿದೆ. ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎನಿಸಿಕೊಂಡಿದೆ.
1998ರಲ್ಲಿ ಎನ್ಬಿಎ ಫೈನಲ್ ಗೇಮ್ 2 ಸರಣಿಯಲ್ಲಿ ಚಿಕಾಗೋ ಬುಲ್ಸ್ ಪರ ಜೋರ್ಡಾನ್ ಕೊನೆ ಪಂದ್ಯವಾಡಿದ್ದರು. ಆ ಪಂದ್ಯವನ್ನು ಲಾಸ್ಟ್ ಡ್ಯಾನ್ಸ್ ಎಂದೇ ಕರೆಯಲಾಗುತ್ತದೆ. ಈ ಮೊದಲು 2021ರಲ್ಲಿ ಅಮೆರಿಕದ ರಾರಯಪರ್ ಕಾನ್ಯೆ ವೆಸ್ಟ್ ಅವರ ಶೂ 1.8 ಮಿಲಿಯನ್ ಡಾಲರ್ಗೆ ಹರಾಜಾಗಿದ್ದು ದಾಖಲೆಯಾಗಿತ್ತು.
ಭಾರೀ ದಂಡ ಪ್ರಶ್ನಿಸಿ ಬ್ಲಾಸ್ಟರ್ಸ್ ಮೇಲ್ಮನವಿ
ನವದೆಹಲಿ: ಬೆಂಗಳೂರು ಎಫ್‌ಸಿ ವಿರುದ್ಧದ ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದಕ್ಕೆ 4 ಕೋಟಿ ರು. ದಂಡ ವಿಧಿಸಿರುವುದನ್ನು ಪ್ರಶ್ನಿಸಿ ಕೇರಳ ಬ್ಲಾಸ್ಟರ್ ತಂಡ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್ಎಫ್)ಗೆ ಮೇಲ್ಮನವಿ ಸಲ್ಲಿಸಿದೆ. ಇತ್ತೀಚೆಗೆ ಎಐಎಫ್ಎಫ್ ಶಿಸ್ತು ಸಮಿತಿ ಕೇರಳಕ್ಕೆ 4 ಕೋಟಿ ರುಪಾಯಿ ದಂಡ ವಿಧಿಸಿ ಬಹಿರಂಗ ಕ್ಷಮೆಯಾಚಿಸುವಂತೆ ಆದೇಶಿಸಿತ್ತು.
ಈಗಾಗಲೇ ಈ ಬಗ್ಗೆ ತಂಡ ವಿಷಾದ ವ್ಯಕ್ತಪಡಿಸಿದ್ದರೂ ದಂಡದ ಬಗ್ಗೆ ಮೇಲ್ಮನವಿ ಸಲ್ಲಿಸಿದೆ. ಮಾರ್ಚ್ 3ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿಯ ಸುನಿಲ್ ಚೆಟ್ರಿ ಬಾರಿಸಿದ ಫ್ರೀ ಕಿಕ್ ಗೋಲನ್ನು ವಿರೋಧಿಸಿ ಕೇರಳ ಆಟಗಾರರು ಅರ್ಧದಲ್ಲೇ ಆಟ ನಿಲ್ಲಿಸಿ ಮೈದಾನ ತೊರೆದಿದ್ದರು.
ಏಷ್ಯನ್ ಕುಸ್ತಿ ಕೂಟ: ಅಂತಿಮ್ ಫೈನಲ್ಗೆ
ಅಸ್ತಾನ(ಕಜಕಸ್ತಾನ): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಖಚಿತವಾಗಿದೆ. ಬುಧವಾರ ಮಹಿಳೆಯರ 53 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅಂತಿಮ್ ಪಂಘಾಲ್ ಫೈನಲ್ ಪ್ರವೇಶಿಸಿದರು. ಕಳೆದ ವರ್ಷ ಅಂಡರ್-20 ವಿಶ್ವ ಚಾಂಪಿಯನ್ ಆಗಿದ್ದ 18 ವರ್ಷದ ಪಂಘಾಲ್ ಸೆಮಿಫೈನಲ್ನಲ್ಲಿ ಉಜ್ಬೇಕಿಸ್ತಾನದ ಆಕ್ಟೆಂಗೆ ವಿರುದ್ಧ 8-1 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದರು.
IPL 2023: ಬರೋಬ್ಬರಿ 15 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ತಂಡವನ್ನು ಮಣಿಸಿದ ರಾಜಸ್ಥಾನ!
ಫೈನಲ್ನಲ್ಲಿ ಅವರು ಜಪಾನ್ನ ಅಕಾರಿ ಫುಜಿನಮಿ ವಿರುದ್ಧ ಸೆಣಸಾಡಲಿದ್ದಾರೆ. ಇದೇ ವೇಳೆ 57 ಕೆ.ಜಿ. ವಿಭಾಗದಲ್ಲಿ ಅನ್ಶು ಮಲಿಕ್, 65 ಕೆ.ಜಿ. ಸ್ಪರ್ಧೆಯಲ್ಲಿ ಮನಿಶಾ, 72 ಕೆ.ಜಿ. ವಿಭಾಗದಲ್ಲಿ ರಿತಿಕಾ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದ್ದಾರೆ. ಈವರೆಗೆ ಭಾರತ ಟೂರ್ನಿಯಲ್ಲಿ 6 ಪದಕಗಳನ್ನು ಬಾಚಿಕೊಂಡಿದೆ.
ಮಹಿಳಾ ಟೆನಿಸ್: ಸತತ 2ನೇ ಪಂದ್ಯ ಗೆದ್ದ ಭಾರತ
ತಾಷ್ಕೆಂಟ್(ಉಜ್ಬೇಕಿಸ್ತಾನ): ವಿಶ್ವ ಮಹಿಳಾ ತಂಡಗಳ ಟೆನಿಸ್ ಚಾಂಪಿಯನ್‌ಶಿಪ್(ಬಿಲ್ಲಿ ಜೀನ್ ಕಿಂಗ್ ಕಪ್)ನ ಏಷ್ಯಾ-ಓಷಿಯಾನಿಯಾ ಗುಂಪು-1ರಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 2-1 ಜಯಗಳಿಸಿದ್ದ ಭಾರತ ಬುಧವಾರ ಉಜ್ಬೇಕಿಸ್ತಾನ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು.
ಮೊದಲ ಸಿಂಗಲ್ಸ್ನಲ್ಲಿ ಋುತುಜಾ ಬೋಸಲೆ, ಸಬ್ರೀನಾ ವಿರುದ್ಧ ಗೆದ್ದರೆ, 2ನೇ ಸಿಂಗಲ್ಸ್ ಪಂದ್ಯದಲ್ಲಿ ಅಂಕಿತಾ ರಾಣಾ ಅವರು ಸೆವಿಲ್‌ರನ್ನು ಸೋಲಿಸಿದರು. ಬಳಿಕ ನಡೆದ ಡಬಲ್ಸ್ ಪಂದ್ಯದಲ್ಲಿ ಶ್ರೀವಳ್ಳಿ ರಶ್ಮಿಕಾ-ವೈದೇಹಿ ಚೌಧರಿ ಗೆಲುವು ಸಾಧಿಸಿದರು. ಭಾರತ ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆವ ತಂಡಗಳು ವಿಶ್ವ ಗುಂಪು ಪ್ಲೇ-ಆಫ್‌್ಸಗೆ ಪ್ರವೇಶಿಸಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.