ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ, ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ಮಾರ್ಗಸೂಚಿ ಪ್ರಕಟ!

By Suvarna News  |  First Published May 11, 2024, 8:24 PM IST

ಭಾನುವಾರ ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ. ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಇದರ ನಡುವೆ ಬೆಂಗಳೂರು ಸಂಚಾರ ಪೊಲೀಸ್ ಇದೀಗ ಮಾರ್ಗಸೂಚಿ ಪ್ರಕಟಿಸಿದೆ.ಸಂಚಾರ ದಟ್ಟಣೆ ಮಾರ್ಗಗಳಿಂದ ದೂರವಿರಲು ಸೂಚಿಸಿದೆ. ಇದೇ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಪಾರ್ಕಿಂಗ್ ಸ್ಥಳದ ಕುರಿತು ಮಾರ್ಗಸೂಚಿ ಪ್ರಕಟಿಸಿದೆ.
 


ಬೆಂಗಳೂರು(ಮೇ.11) ಐಪಿಎಲ್ 2024 ಟೂರ್ನಿಯಲ್ಲಿ ಅಂತಿಮ ಹಂತದಲ್ಲಿ ರೋಚಕ ಹೋರಾಟದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಆರ್‌ಸಿಬಿ ಇದೀಗ ಪ್ಲೇ ಆಫ್ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಗೆಲುವಿನ ಅಲೆಯಲ್ಲಿರುವ ಆರ್‌ಸಿಬಿ ಮೇ 12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಖಾಡಕ್ಕಿಳಿಯುತ್ತಿದೆ.  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಹೋರಾಟ ನಡೆಸಿದೆ. ಪ್ಲೇ ಆಫ್ ಸ್ಥಾನಕ್ಕೇರಲು ಈ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು ಅನಿವಾರ್ಯವಾಗಿದೆ. ಭಾನುವಾರದ ಪಂದ್ಯಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.  ಪಂದ್ಯಕ್ಕೂ ಮುನ್ನ ಬೆಂಗಳೂರು ಸಂಚಾರು ಪೊಲೀಸ್ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಸಂಚಾರ ದಟ್ಟಣೆ ಮಾರ್ಗ ಬದಲಿಸಲೂ ಸೂಚಿಸಿದ್ದಾರೆ.

ಮೇ.12ರ ಸಂಜೆ 7.30ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಹೀಗಾಗಿ 3 ಗಂಟೆಯಿಂದ 11 ಗಂಟೆ ವರೆಗೆ ನಿರ್ಬಂಧ, ಸಂಚಾರ ದಟ್ಟಣೆ ಇರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪ್ರಕಟಣ ಬಿಡುಗಡೆ ಮಾಡಲಾಗಿದ್ದು, ವಾಹನ ಸವಾರರಿಗ ಸೂಚನೆ ನೀಡಲಾಗಿದೆ

Latest Videos

undefined

CSK ಸೋಲುತ್ತಿದ್ದಂತೆಯೇ RCB ಪ್ಲೇ ಆಫ್ ಕನಸಿಗೆ ಆನೆ ಬಲ..! ಇಲ್ಲಿದೆ ನೋಡಿ ಬೆಂಗಳೂರು ತಂಡಕ್ಕೆ 5 ರೀತಿ ಅವಕಾಶ

ಪಾರ್ಕಿಂಗ್ ನಿಷೇಧಿಸಿರುವ ಸ್ಥಳ
ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಎಂಜಿ ರಸ್ತೆಯಿಂ ಕಬ್ಬನ್ ರಸ್ತೆ ಹಾಗೂ ರಾಜಭನ ರಸ್ತೆ
ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರಸ್ತೆ
ಕಸ್ತೂರ್ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ ಲ್ಯಾವೆಲ್ಲಿ ರಸ್ತೆ
ವಿಠಲ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ, ನೃಪತುಂಗ ರಸ್ತೆ

ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಿರುವ ಸ್ಥಳಗಳು
ಸೆಂಟ್ ಜೊಸೆಫ್ ಇಂಡಿಯನ್ ಸ್ಕೂಲ್ ಮೈದಾನ
ಯುಬಿ ಸಿಟಿ ಪಾರ್ಕಿಂಗ್ ಸ್ಥಳ
ಬಿಎಂಟಿಸಿ ಬಸ್ ನಿಲ್ದಾಣದ ಮೊದಲನೇ ಮಹಡಿ ಹಾಗೂ ಕೆಜಿಐಡಿ ಬಿಲ್ಡಿಂಗ್
ಕಿಂಗ್ಸ್ ರಸ್ತೆ(ಕಬ್ಬನ್ ಪಾರ್ಕ್ ಒಳಭಾಗ)

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತುಮುತ್ತಲಿನ ರಸ್ತೆಗಳಲ್ಲಿ ಸಂಚಾರದಿಂದ ದೂರ ಉಳಿಯಲು ಪೊಲೀಸರು ಸೂಚಿಸಿದ್ದಾರೆ. ಈ ಮೂಲಕ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕದಂತೆ ಎಚ್ಚರವಹಿಸಲು ಕೋರಲಾಗಿದೆ.

4 ವರ್ಷದ ಹಿಂದೆ 2.5 ಕೋಟಿಗೆ ವಿರುಷ್ಕಾ ಖರೀದಿಸಿದ ಷೇರು ಬೆಲೆ ಈಗ 9 ಕೋಟಿ!

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಸತತ ಗೆಲುವಿನಿಂದ 7ನೇ ಸ್ಥಾನಕ್ಕೇರಿದೆ. ಆರ್‌ಸಿಬಿ ಪ್ಲೇ ಆಫ್ ಆಸೆ ಜೀವಂತವಾಗಿದೆ. ಇನ್ನುಳಿದ 2 ಪಂದ್ಯದಲ್ಲಿ ಅತ್ಯುತ್ತಮ ನೆಟ್‌ರನ್‌ ರೇಟ್‌ನೊಂದಿಗೆ ಗೆಲುವು ಸಾಧಿಸಲು ಆರ್‌ಸಿಬಿ ಪ್ರಯತ್ನಿಸಲಿದೆ. ದಿಟ್ಟ ಹೋರಾಟ ನೀಡುತ್ತಿರುವ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಲಿದೆ.

click me!