ಆಂಡರ್ಸನ್ 400 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್ ಪರವಾಗಿ ಆಡಿದ್ದು, ವಿವಿಧ ಮಾದರಿಗಳ ಕ್ರಿಕೆಟ್‌ನಿಂದ 987 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಲಂಡನ್ (ಮೇ.11): ಇಂಗ್ಲೆಂಡ್‌ನ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ ತಮ್ಮ ಟೆಸ್ಟ್ ಕ್ರಿಕೆಟ್ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಮುಂಬರುವ ಬೇಸಿಗೆ ಟೆಸ್ಟ್ ಋತುವಿನ ಮೊದಲ ಪಂದ್ಯದ ಮೂಲಕವೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೊಂದುವುದಾಗಿ ಖಚಿತಪಡಿಸಿದ್ದಾರೆ. ಈ ವರ್ಷ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ನ ತನ್ನ ಟೆಸ್ಟ್ ಪಂದ್ಯ ಆಡಲಿದ್ದು, ಇದೇ ಪಂದ್ಯ ತಮ್ಮ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯವಾಗಿರಲಿದೆ ಎಂದು 41 ವರ್ಷದ ವೇಗಿ ಹೇಳಿದ್ದಾರೆ. "ಎಲ್ಲರಿಗೂ ನಮಸ್ಕಾರ. ಲಾರ್ಡ್ಸ್‌ನಲ್ಲಿ ಬೇಸಿಗೆ ಋತುವಿನ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಇಚ್ಛೆಪಡುತ್ತೇನೆ" ಎಂದು ಆಂಡರ್ಸನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೇಶವನ್ನು ಪ್ರತಿನಿಧಿ 20 ಅದ್ಭುತ ವರ್ಷಗಳನ್ನು ಕಳೆದಿದ್ದೇನೆ. ಬಾಲ್ಯದಿಂದಲೂ ನನ್ನಿಷ್ಟದ ಈ ಗೇಮ್‌ಅನ್ನು ಆಡುತ್ತಿದ್ದೆ ಹಾಗೂ ಅಷ್ಟೇ ಪ್ರೀತಿಸುತ್ತಿದ್ದೆ. ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯೋದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಸಮಯವು ನಾನು ಪಕ್ಕಕ್ಕೆ ಸರಿಯಲು ಮತ್ತು ನಾನು ಪಡೆದಂತೆಯೇ ಇತರರು ಅವರ ಕನಸುಗಳನ್ನು ನನಸಾಗಿಸಲು ಇದು ಸರಿಯಾದ ಸಮಯ ಎಂದನಿಸಿದೆ. ಇದಕ್ಕಿಂತ ಹೆಚ್ಚಿನ ಭಾವನೆ ನನ್ನಲ್ಲಿಲ್ಲ' ಎಂದು ಬರೆದುಕೊಂಡಿದ್ದಾರೆ.
ತಮ್ಮ ಇಡೀ ವೃತ್ತಿಜೀವನದ ವೇಳೆ ಅಚಲ ಬೆಂಬಲ ನೀಡಿದ ತಮ್ಮ ಕುಟುಂಬಕ್ಕೂ ಆಂಡರ್ಸನ್ ಈ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ. "ಡೇನಿಯೆಲ್ಲಾ, ಲೋಲಾ, ರೂಬಿ ಮತ್ತು ನನ್ನ ಹೆತ್ತವರ ಪ್ರೀತಿ ಮತ್ತು ಬೆಂಬಲವಿಲ್ಲದೆ ನಾನು ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ತುಂಬಾ ಧನ್ಯವಾದಗಳು. ಅಲ್ಲದೆ, ಇದನ್ನು ವಿಶ್ವದ ಅತ್ಯುತ್ತಮ ಕೆಲಸವನ್ನು ಮಾಡಿದ ಆಟಗಾರರು ಮತ್ತು ತರಬೇತುದಾರರಿಗೆ ಧನ್ಯವಾದಗಳು ಎಂದಿದ್ದಾರೆ. "ಮುಂದೆ ಇರುವ ಹೊಸ ಸವಾಲುಗಳಿಗಾಗಿ ನಾನು ಉತ್ಸುಕನಾಗಿದ್ದೇನೆ, ಜೊತೆಗೆ ನನ್ನ ದಿನಗಳನ್ನು ಇನ್ನಷ್ಟು ಗಾಲ್ಫ್‌ನಿಂದ ತುಂಬಿಸುತ್ತೇನೆ. ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
BREAKING: RCB ಎದುರಿನ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಗ್ ಶಾಕ್..! ರಿಷಭ್ ಪಂತ್ ಬ್ಯಾನ್
ಆಂಡರ್ಸನ್ 400 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ವಿವಿಧ ಸ್ವರೂಪಗಳಲ್ಲಿ 987 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲಿ ಅವರನ್ನು ಪ್ರಮುಖ ಸೀಮರ್ ಎಂದೇ ಗುರುತಿಸಲಾಗಿತ್ತು. 2015 ರ ವಿಶ್ವಕಪ್‌ನಲ್ಲಿ ಅವರು ತಮ್ಮ ಕೊನೆಯ ಏಕದಿನ ಅಂತರರಾಷ್ಟ್ರೀಯ (ODI) ಪಂದ್ಯವನ್ನು ಆಡಿದ್ದರೂ, ಆಂಡರ್ಸನ್ ಇನ್ನೂ 269 ವಿಕೆಟ್‌ಗಳೊಂದಿಗೆ ಇಂಗ್ಲೆಂಡ್‌ನ ದಾಖಲೆಯನ್ನು ಹೊಂದಿದ್ದಾರೆ.
4 ವರ್ಷದ ಹಿಂದೆ 2.5 ಕೋಟಿಗೆ ವಿರುಷ್ಕಾ ಖರೀದಿಸಿದ ಷೇರು ಬೆಲೆ ಈಗ 9 ಕೋಟಿ!