ವಾರ್ನ್ ’ನೋ ಸ್ಪಿನ್’ ಆತ್ಮಚರಿತ್ರೆ ಬಿಡುಗಡೆಗೆ ಡೇಟ್ ಫಿಕ್ಸ್

By Web DeskFirst Published Aug 21, 2018, 4:05 PM IST
Highlights

ವಾರ್ನ್ ಅವರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಕುರಿತ ಹಲವು ಕೌತುಕ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ಆತ್ಮಚರಿತ್ರೆಯ ಪ್ರಕಾಶಕರು ತಿಳಿಸಿದ್ದಾರೆ. ಈ ಪುಸ್ತಕ ಶೇನ್ ವಾರ್ನ್ ಅವರ ನಿಜವಾದ ದನಿಯಾಗಿದ್ದು, ಇದುವರೆಗೂ ಯಾರಿಗೂ ತಿಳಿಯದ ಅವರ ಜೀವನದ ಮತ್ತೊಂದು ಮುಖದ ದರ್ಶನ ಮಾಡಿಸಲಿದೆ ಎಂದಿದ್ದಾರೆ. 

ನವದೆಹಲಿ[ಆ.21]: ಸ್ಪಿನ್ ದಿಗ್ಗಜ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಅವರ ಆತ್ಮಚರಿತ್ರೆ ‘ನೋ ಸ್ಪಿನ್’ ಅ. 4ರಂದು ಬಿಡುಗಡೆಯಾಗಲಿದೆ. 

ವಾರ್ನ್ ಅವರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಕುರಿತ ಹಲವು ಕೌತುಕ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ ಎಂದು ಆತ್ಮಚರಿತ್ರೆಯ ಪ್ರಕಾಶಕರು ತಿಳಿಸಿದ್ದಾರೆ. ಈ ಪುಸ್ತಕ ಶೇನ್ ವಾರ್ನ್ ಅವರ ನಿಜವಾದ ದನಿಯಾಗಿದ್ದು, ಇದುವರೆಗೂ ಯಾರಿಗೂ ತಿಳಿಯದ ಅವರ ಜೀವನದ ಮತ್ತೊಂದು ಮುಖದ ದರ್ಶನ ಮಾಡಿಸಲಿದೆ ಎಂದಿದ್ದಾರೆ. 

ಸೆಪ್ಟೆಂಬರ್ 13, 1969ರಲ್ಲಿ ಜನಿಸಿದ ವಾರ್ನ್ ಕ್ರಿಕೆಟ್ ಜಗತ್ತು ಕಂಡ ಮಾಂತ್ರಿಕ ಸ್ಪಿನ್ನರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ[ಏಕದಿನ ಹಾಗೂ ಟೆಸ್ಟ್] ಸಾವಿರಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಅಲ್ಲದೇ ಟೆಸ್ಟ್’ನಲ್ಲಿ 3000 ಸಾವಿರಕ್ಕೂ ಹೆಚ್ಚು ಬಾರಿಸಿದ್ದಾರೆ.

click me!