ಶ್ರೀಮಂತ ಮಹಿಳಾ ಅಥ್ಲೀಟ್ಸ್‌ ಪಟ್ಟಿಯಲ್ಲಿ ಸಿಂಧುಗೆ 16ನೇ ಸ್ಥಾನ..!

By Kannadaprabha NewsFirst Published Dec 23, 2023, 12:16 PM IST
Highlights

ಫೋರ್ಬ್ಸ್‌ ಪ್ರಕಾರ ಸಿಂಧು 2023ರಲ್ಲಿ 7.1 ಮಿಲಿಯನ್‌ ಯುಎಸ್‌ ಡಾಲರ್‌(ಸುಮಾರು 59 ಕೋಟಿ ರು.) ಸಂಭಾವನೆ ಪಡೆದಿದ್ದಾರೆ. ಕಳೆದ ವರ್ಷ ಸಿಂಧು 12ನೇ ಸ್ಥಾನದಲ್ಲಿದ್ದರು. 2018ರಲ್ಲಿ ಸಿಂಧು ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು 7ನೇ ಸ್ಥಾನಿಯಾಗಿ ಗಮನ ಸೆಳೆದಿದ್ದರು.

ನ್ಯೂಯಾರ್ಕ್(ಡಿ.23): ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಫೋರ್ಬ್ಸ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸಿಂಧು 16ನೇ ಸ್ಥಾನದಲ್ಲಿದ್ದು, ಪೋಲೆಂಡ್‌ನ ಟೆನಿಸ್‌ ತಾರೆ ಇಗಾ ಸ್ವಿಯಾಟೆಕ್‌ ಅಗ್ರಸ್ಥಾನದಲ್ಲಿದ್ದಾರೆ. 

ಫೋರ್ಬ್ಸ್‌ ಪ್ರಕಾರ ಸಿಂಧು 2023ರಲ್ಲಿ 7.1 ಮಿಲಿಯನ್‌ ಯುಎಸ್‌ ಡಾಲರ್‌(ಸುಮಾರು 59 ಕೋಟಿ ರು.) ಸಂಭಾವನೆ ಪಡೆದಿದ್ದಾರೆ. ಕಳೆದ ವರ್ಷ ಸಿಂಧು 12ನೇ ಸ್ಥಾನದಲ್ಲಿದ್ದರು. 2018ರಲ್ಲಿ ಸಿಂಧು ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಅವರು 7ನೇ ಸ್ಥಾನಿಯಾಗಿ ಗಮನ ಸೆಳೆದಿದ್ದರು. ಈ ಬಾರಿ ಅಗ್ರಸ್ಥಾನದಲ್ಲಿರುವ ಇಗಾ 23.9 ಮಿಲಿಯನ್‌ ಯುಎಸ್‌ ಡಾಲರ್‌(ಸುಮಾರು 198 ಕೋಟಿ ರು.) ಸಂಭಾವನೆ ಪಡೆದಿದ್ದಾರೆ.

ಬ್ಯಾನ್ ಹಿಂಪಡೆಯುವಂತೆ ಜಾಗತಿಕ ಒಕ್ಕೂಟಕ್ಕೆ WFI ಮೊರೆ..!

ಕೈರೋದ ಶೂಟಿಂಗ್‌ ವಿಶ್ವಕಪ್‌ನಲ್ಲಿ ಈ ಬಾರಿ ಭಾರತೀಯರ ಸ್ಪರ್ಧೆ ಇಲ್ಲ

ನವದೆಹಲಿ: ಜ.24ರಿಂದ ಕೈರೋದಲ್ಲಿ ಆರಂಭಗೊಳ್ಳಲಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಈ ಬಾರಿ ಭಾರತೀಯರು ಸ್ಪರ್ಧಿಸುವುದಿಲ್ಲ. ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಶೂಟರ್‌ಗಳಿಗೆ ವಿಶ್ರಾಂತಿ ಅಗತ್ಯವಿರುವ ಕಾರಣಕ್ಕೆ ಈ ಬಾರಿ ವಿಶ್ವಕಪ್‌ಗೆ ಭಾರತೀಯರನ್ನು ಕಳುಹಿಸುತ್ತಿಲ್ಲ ಎಂದು ರಾಷ್ಟ್ರೀಯ ರೈಫಲ್‌ ಸಂಸ್ಥೆ ತಿಳಿಸಿದೆ. ಆದರೆ ಫೆಡರೇಷನ್‌ ನಿರ್ಧಾರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. 

ಕೂಟಕ್ಕೆ ಕಠಿಣ ಅಭ್ಯಾಸ ನಡೆಸಿದ್ದರೂ, ಕೊನೆ ಕ್ಷಣದಲ್ಲಿ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತನ್ನ ನಿರ್ಧಾರ ಸಮರ್ಥಿಸಿಕೊಂಡಿರುವ ಸಂಸ್ಥೆ, ಕೋಚ್‌ಗಳು, ಕ್ರೀಡಾಪಟುಗಳ ಜೊತೆ ಚರ್ಚಿಸಿದ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ. ಕೂಟದಲ್ಲಿ ಪಿಸ್ತೂಲ್‌, ರೈಫಲ್‌, ಶಾಟ್‌ಗನ್‌ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

Pro Kabaddi League: ಸೋಲಿನ ಸರಪಳಿ ಕಳಚಿ ಗೆದ್ದ ತೆಲುಗು ಟೈಟಾನ್ಸ್

ರಾಷ್ಟ್ರೀಯ ಬ್ಯಾಡ್ಮಿಂಟನ್‌: ರಾಜ್ಯದ ಆಯುಶ್‌ಗೆ ಜಯ

ಗುವಾಹಟಿ: ಇಲ್ಲಿ ನಡೆಯುತ್ತಿರುವ 85ನೇ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಆಯುಶ್‌ ಶೆಟ್ಟಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ ಪದಕ ವಿಜೇತ ಆಯುಶ್‌ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನೀರ್‌ ನೆಹ್ವಾಲ್‌ ವಿರುದ್ಧ 23-25, 21-18, 21-12ರಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೇರಿದರು. ಇದೇ ವೇಳೆ ಲಕ್ಷ್ಯ ಸೇನ್‌ ಹಾಗೂ ಆಕರ್ಷಿ ಕಶ್ಯಪ್‌ ಕೂಡಾ 3ನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸೇನ್‌, ಟಿ.ಸಿದ್ಧಾರ್ಥ್‌ ವಿರುದ್ಧ 21-8, 21-5 ಅಂತರದಲ್ಲಿ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ರಿತುಪರ್ಣ ದಾಸ್‌ ವಿರುದ್ಧ ಕಶ್ಯಪ್‌ 21-18, 21-11ರಲ್ಲಿ ಜಯಭೇರಿ ಬಾರಿಸಿದರು.
 

click me!