ಐಎಸ್‌ಎಲ್‌: ಅಗ್ರ ಸ್ಥಾನಕ್ಕೇರಿದ ಬೆಂಗಳೂರು ಎಫ್‌ಸಿ

By Web DeskFirst Published Jan 31, 2019, 9:00 AM IST
Highlights

ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ತಂಡ ಐಎಸ್‌ಎಲ್ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ಥ್ ಈಸ್ಟ್ ತಂಡವನ್ನ ಸೋಲಿಸಿದ ಬೆಂಗಳೂರು ಈ ಸಾಧನೆ ಮಾಡಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಜ.31): ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಲ್ಲಿ 9ನೇ ಗೆಲುವು ಸಾಧಿಸಿದ ಬೆಂಗಳೂರು ಎಫ್‌ಸಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ. ಬುಧವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ, ನಾರ್ಥ್ ಈಸ್ಟ್‌ ಯುನೈಟೆಡ್‌ ತಂಡವನ್ನು 2-1 ಗೋಲುಗಳಿಂದ ಸೋಲಿಸಿ, 3 ಅಂಕಗಳನ್ನು ಪಡೆಯಿತು.

ಇದನ್ನೂ ಓದಿ: ತನ್ನ ಜಾಕೆಟ್ ಮೇಲೆ ಸಹಿ ಮಾಡಿ ಅಭಿಮಾನಿಗೆ ನೀಡಿದ ಜೋಕೋವಿಚ್

ಬಿಎಫ್‌ಸಿ ಪರ ಚೆಂಚೊ ಗೆಲ್ಟ್‌ಶೆನ್‌ 71ನೇ ನಿಮಿಷದಲ್ಲಿ ಗೋಲು ಬಾರಿಸಿ, ತಂಡದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ನಾರ್ಥ್ ಈಸ್ಟ್‌ ಯುನೈಟೆಡ್‌ನ ಮಿಸ್ಲಾವ್‌ ಕೊಮೊಸ್ರ್ಕಿ(14ನೇ ನಿಮಿಷ), ಸ್ವಯಂ ಗೋಲು ಬಾರಿಸಿ ಬಿಎಫ್‌ಸಿ ಮುನ್ನಡೆ ಒದಗಿಸಿದರು. ಯುನೈಟೆಡ್‌ ಪರ ಫ್ರೆಡ್ರಿಕೊ ಗಲ್ಲೆಗೋ(60ನೇ ನಿಮಿಷ) ಗೋಲು ಬಾರಿಸಿದರು.

ಇದನ್ನೂ ಓದಿ: 2020 ಟಿ20 ವಿಶ್ವಕಪ್: ಗುಂಪು ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ!

ಐಎಸ್ಎಲ್ ಟೂರ್ನಿ ಈ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ 13 ಪಂದ್ಯಗಳಲ್ಲಿ 9 ಗೆಲುವು 3 ಡ್ರಾ ಹಾಗೂ 1 ಸೋಲು ಅನುಭವಿಸಿದೆ. ಈ ಮೂಲಕ 30 ಅಂಕಗಳಿಸಿರುವ ಬಿಎಫ್‌ಸಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಸಿಟಿ ಎಫ್‌ಸಿ 27 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

click me!