ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮಾಜಿ ನಾಯಕನೇ ಇನ್ಮುಂದೆ ಕೋಚ್?

By Web DeskFirst Published Aug 24, 2018, 3:51 PM IST
Highlights

ನಿಷೇಧ ಶಿಕ್ಷೆ ಮುಗಿಸಿ ಕಳೆದ ವರ್ಷ ಐಪಿಎಲ್ ಟೂರ್ನಿಗೆ ವಾಪಾಸ್ಸಾದ ರಾಜಸ್ಥಾನ ರಾಯಲ್ಸ್ ತಂಡ ಇದೀಗ ಕೋಚ್ ಆಯ್ಕೆಗೆ ಮುಂದಾಗಿದೆ. 2019ರ ಐಪಿಎಲ್ ಟೂರ್ನಿಗೆ ಮಾಜಿ ನಾಯಕನನ್ನೇ ಕೋಚ್ ಆಗಿ ಆಯ್ಕೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ. ಇಲ್ಲಿದೆ ನೂತನ ಕೋಚ್  ವಿವರ.

ಜೈಪುರ(ಆ.24): 2 ವರ್ಷಗಳ ನಿಷೇಧ ಮುಗಿಸಿ 11ನೇ ಆವೃತ್ತಿ ಐಪಿಎಲ್ ಟೂರ್ನಿಗೆ ವಾಪಾಸ್ಸಾದ  ರಾಜಸ್ಥಾನ ರಾಯಲ್ಸ್ ತಂಡ ಪ್ಲೇ ಆಫ್ ಹಂತಕ್ಕೇರಿದ ಸಾಧನೆ ಮಾಡಿತ್ತು. ಇದೀಗ ಮುಂದಿನ ಐಪಿಲ್ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

2018ರ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡಕ್ಕೆ, ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ನಾಯಕ ಶೇನ್ ವಾರ್ನ್ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು.  ಆದರೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ವಾರ್ನ್ ಕೋಚ್ ಆಗಿ ಬಡ್ತಿ ಪಡೆಯೋ ಸಾಧ್ಯತೆ ಇದೆ.

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡ ಶೇನ್ ವಾರ್ನ್ ಅವರನ್ನ ಕೋಚ್ ಆಗಿ ನೇಮಕಲ ಮಾಡಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ. ವಾರ್ನ್ ಕೂಡ ಕೋಚ್ ಜವಾಬ್ದಾರಿ ನಿರ್ವಹಿಸಲು ರೆಡಿಯಾಗಿದ್ದಾರೆ. ಶೀಘ್ರದಲ್ಲೇ ರಾಜಸ್ಥಾನ ರಾಯಲ್ಸ್ ಅಧೀಕೃತ ಹೇಳಿಕೆ ಬಿಡುಗಡೆ ಮಾಡಲಿದೆ.

click me!