ಭಾರತದ ದಾಳಿಗೆ ವೆಸ್ಟ್ ಇಂಡೀಸ್ 3ನೇ ವಿಕೆಟ್ ಪತನ!

By Web DeskFirst Published Oct 21, 2018, 2:54 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಆರಂಭಗೊಂಡಿದೆ. ಗುವಹಾಟಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಗುವಹಾಟಿ(ಅ.21):  ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಉತ್ತಮ ಹೋರಾಟ ನೀಡುತ್ತಿದೆ. ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿಂಡೀಸ್ ಇದೀಗ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ ಅಷ್ಟೇ ವೇಗದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ಇಂಡೀಸ್ 19 ರನ್ ಸಿಡಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಚಂದ್ರಪಾಲ್ ಹೆಮ್ರಾಜ್ 9 ರನ್ ಸಿಡಿಸಿ ಔಟಾದರು. ಕೀರನ್ ಪೊವೆಲ್ ಹಾಗೂ ಶೈ ಹೋಪ್ ಜೊತೆಯಾಟದಿಂದ ವಿಂಡೀಸ್ ಚೇತರಿಸಿಕೊಂಡಿತು.

ಪೊವೆಲ್ ಹಾಗೂ ಹೋಪ್ 65 ರನ್ ಜೊತೆಯಾಟ ನೀಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪೊವೆಲ್ ಅರ್ಧಶತಕ ಸಿಡಿಸಿದರು. ಆದರೆ ಪೊವೆಲ್ 51 ರನ್ ಸಿಡಿಸಿ ನಿರ್ಗಮಿಸಿದರು. ಕೀರನ್ ಪೊವೆಲ್ ಬೆನ್ನಲ್ಲೇ, ಮರ್ಲಾನ್ ಸ್ಯಾಮ್ಯುಯೆಲ್ಸ್ ಪೆವಿಲಿಯನ್ ಸೇರಿದರು. ಈ ಮೂಲಕ ವೆಸ್ಟ್ ಇಂಡೀಸ್ 86 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಷಬ್ ಪಂತ್ ಇದೀಗ ಏಕದಿನಕ್ಕೂ ಪಾದಾರ್ಪಣೆ ಮಾಡಿದ್ದಾರೆ.

 

Proud moment for as he receives his ODI cap from 👏👏🙌 pic.twitter.com/NPb26PJY0B

— BCCI (@BCCI)

 

click me!