ಭಾರತ-ಇಂಗ್ಲೆಂಡ್ ಟೆಸ್ಟ್: ಟೀಂ ಇಂಡಿಯಾ ಗೆಲುವಿಗೆ ಇನ್ನು 6 ಮೆಟ್ಟಿಲು

By Web DeskFirst Published Aug 21, 2018, 5:04 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಈ ಮೂಲಕ  ಕಳೆದೆರಡು ಟೆಸ್ಟ್ ಪಂದ್ಯದ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಸಜ್ಜಾಗಿದೆ.

ನಾಟಿಂಗ್‌ಹ್ಯಾಮ್(ಆ.21): 3ನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 521 ರನ್ ಟಾರ್ಗೆಟ್ ಪಡೆದಿರುವ ಇಂಗ್ಲೆಂಡ್ ಇದೀಗ ವಿಕೆಟ್ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ದಿನದಾಟದ ಆರಂಭದಲ್ಲೇ ಅನುಭವಿಸಿದ ಆಘಾತದಿಂದ ಇಂಗ್ಲೆಂಡ್ ಚೇತರಿಸಿಕೊಳ್ಳಲು, ಭಾರತ ಅವಕಾಶ ನೀಡಿಲ್ಲ. 

3ನೇ ದಿನದಾಟ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 23 ರನ್‌ಗಳಿಸಿದ್ದ ಇಂಗ್ಲೆಂಡ್, ಇಂದು ಆರಂಭದಲ್ಲೇ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.  ಅಲಿಸ್ಟೈರ್ ಕುಕ್ 17 ರನ್ ಸಿಡಿಸಿ ಔಟಾಗಿದರು. ನಾಯಕ ಜೋ ರೂಟ್ ಹಾಗೂ ಒಲ್ಲಿ ಪೋಪ್ ಜೊತೆಯಾಟ ನೀಡಲು ಹೋರಾಟ ನಡೆಸಿದರು.

ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಜೋ ರೂಟ್ ಹಾಗೂ ಒಲ್ಲಿ ಪೋಪ್ ವಿಕೆಟ್ ಕಳೆದುಕೊಂಡಿದೆ. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ  84 ರನ್‌ಗಳಿಸಿದೆ. ಇಂಗ್ಲೆಂಡ್ ತಂಡದ ಗೆಲುವಿಗೆ ಇನ್ನು 437 ರನ್ ಬೇಕಿದೆ.  ಪಂದ್ಯವನ್ನ ಡ್ರಾ ಮಾಡಿಕೊಳ್ಳಬೇಕಾದರೆ ಇಂಗ್ಲೆಂಡ್ ನಾಳೆವರೆಗೂ ಬ್ಯಾಟಿಂಗ್ ಮುಂದುವರಿಸಬೇಕಿದೆ. ಆದರೆ ಭಾರತದ ಗೆಲುವಿಗೆ ಇನ್ನು 6 ವಿಕೆಟ್ ಅವಶ್ಯಕತೆ ಇದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 161 ರನ್‌ಗಳಿಗೆ ಆಲೌಟ್ ಆಗೋ ಮೂಲಕ 168 ರನ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿ ಡೆಕ್ಲೇರ್ ಮಾಡಿಕೊಂಡಿತ್ತು.

click me!