ಭಾರತ-ಇಂಗ್ಲೆಂಡ್ ಟೆಸ್ಟ್: ಖಾತೆ ತೆರೆದ ಬೆನ್ನಲ್ಲೇ ಆಂಗ್ಲರ ವಿಕೆಟ್ ಪತನ

By Web DeskFirst Published Aug 30, 2018, 3:47 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಆರಂಭಿಕ ಹಂತದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡ  ಮೊದಲ ವಿಕೆಟ್ ಕಬಳಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್ 

ಸೌತಾಂಪ್ಟನ್(ಆ.30): ಭಾರತ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದೆ. ರನ್ ಖಾತೆ ತೆರೆದ ಬೆನ್ನಲ್ಲೇ ಕೆಟನ್ ಜೆನ್ನಿಂಗ್ಸ್ ಪೆಲಿಯನ್ ಸೇರಿದರು.

 

4th Test. 2.1: WICKET! K Jennings (0) is out, lbw Jasprit Bumrah, 1/1 https://t.co/0H7QgsePBK

— BCCI (@BCCI)

 

ಜಸ್‌ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಕೆಟನ್ ಜೆನ್ನಿಂಗ್ಸ್ ಶೂನ್ಯಕ್ಕೆ ಔಟಾದರು. ಈ ಮೂಲಕ ಇಂಗ್ಲೆಂಡ್ 1 ರನ್ ಗಳಿಸುವಷ್ಟರಲ್ಲೇ 1 ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಸರಣಿಯಲ್ಲಿ ಮತ್ತೆ ಇಂಗ್ಲೆಂಡ್ ಆರಂಭಿಕರು ಜೊತೆಯಾಟ ನೀಡುವಲ್ಲಿ ವಿಫಲವಾಗಿದೆ.

4ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂಗ್ಲೆಂಡ್ ಕ್ರಿಸ್ ವೋಕ್ಸ್ ಬದಲು ಸ್ಯಾಮ್ ಕುರ್ರನ್ ಹಾಗೂ ಒಲ್ಲಿ ಪೋಪ್ ಬದಲು ಮೊಯಿನ್ ಆಲಿಗೆ ಅವಕಾಶ ನೀಡಿದೆ.
 

click me!