
ತೈಪೆ(ಜೂ.23): ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಇಲ್ಲಿ ನಡೆಯುತ್ತಿರುವ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಭಾರತ ಪುರುಷರ ವಿಭಾಗದ ಅಗ್ರಶ್ರೇಯಾಂಕಿತ ಬ್ಯಾಡ್ಮಿಂಟನ್ ಪಟು ಎಚ್.ಎಸ್.ಪ್ರಣಯ್, ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ನೇರ ಸುತ್ತಿನಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಗುರುವಾರ ನಡೆದ ಪ್ರಿ ಕ್ವಾರ್ಟರಲ್ಲಿ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ 21-9, 21-17 ಗೇಮ್‌ಗಳಲ್ಲಿ ಗೆದ್ದರು. ಕೇವಲ 36 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ ಪ್ರಣಯ್ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ವಿಶ್ವ ನಂ.9 ಆಟಗಾರ ಕ್ವಾರ್ಟರ್ ಫೈನಲಲ್ಲಿ ಹಾಂಕಾಂಗ್‌ನ ಆ್ಯಂಗುಸ್ ಕಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ.
ಎಚ್ ಎಸ್ ಪ್ರಣಯ್ ಇತ್ತೀಚಿಗೆ ಉತ್ತಮ ಲಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕಳೆದ ತಿಂಗಳು ನಡೆದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 300 ಟೂರ್ನಿಯಲ್ಲಿ ಪ್ರಣಯ್ ಬಲಾಢ್ಯ ಆಟಗಾರರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಯೂ ಪ್ರಣಯ್ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಸಮೀಸ್‌ನಲ್ಲಿ ವಿಶ್ವದ ನಂ.1 ಶಟ್ಲರ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸೆನ್ ಎದುರು ಮುಗ್ಗರಿಸಿದ್ದರು.
ಪ್ರತಿಭಟನೆಯಲ್ಲಿ ತೊಡಗಿದ್ದ 6 ಕುಸ್ತಿಪಟುಗಳಿಗೆ ಸ್ಪೆಷಲ್ ಎಂಟ್ರಿ?
ಇದೇ ವೇಳೆ ಕಾಮನ್‌ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ಪ್ರಿ ಕ್ವಾರ್ಟರಲ್ಲಿ ಸ್ಥಳೀಯ ಆಟಗಾರ ಸು ಲಿ ಯಾಂಗ್ ವಿರುದ್ಧ 16-21, 17-21ರಲ್ಲಿ ಪರಾಭವಗೊಂಡರು. ಇನ್ನು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಜೋಡಿಯಾದ ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಜೋಡಿ ತೈಪೆಯ ಜೋಡಿ ಎದುರು 13-21, 18-21 ಅಂತರದಲ್ಲಿ ಸೋಲು ಕಾಣುವ ಮೂಲಕ ಹೋರಾಟ ಮುಗಿಸಿದೆ.
ಏಷ್ಯನ್ ಚಾಂಪಿಯನ್ಶಿಪ್: ರಾಜ್ಯದ ನಾಲ್ವರು ಆಯ್ಕೆ
ನವದೆಹಲಿ: ಜು.12-16ರ ವರೆಗೂ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ 54 ಸದಸ್ಯರ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ನಾಲ್ವರು ಆಯ್ಕೆಯಾಗಿದ್ದಾರೆ. ಫೆಡರೇಶನ್ ಕಪ್ ಪ್ರದರ್ಶನವನ್ನು ಪರಿಗಣಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ. ರಿಲೇ ತಂಡದಲ್ಲಿ ನಿಹಾಲ್ ಜೋಯೆಲ್, ಮಿಜೋ ಚಾಕೋ, 400 ಮೀ. ಹರ್ಡಲ್ಸ್‌ಗೆ ಯಶಸ್, ಜಾವೆಲಿನ್ ಥ್ರೋನಲ್ಲಿ ಡಿ.ಪಿ.ಮನು ಆಯ್ಕೆಯಾಗಿದ್ದಾರೆ.
ವಾಟರ್‌ಪೋಲೋ: ರಾಜ್ಯ ವನಿತಾ ತಂಡಕ್ಕೆ 2ನೇ ಜಯ
ಬೆಂಗಳೂರು: 76ನೇ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನ ವಾಟರ್‌ಪೋಲೋ ಸ್ಪರ್ಧೆಯಲ್ಲಿ ಕರ್ನಾಟಕ ಮಹಿಳಾ ತಂಡ ಸತತ 2ನೇ ಗೆಲುವು ಸಾಧಿಸಿದೆ. ಗುರುವಾರ ನಡೆದ 2ನೇ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 19-0 ಅಂಕಗಳಲ್ಲಿ ಜಯಿಸಿತು. ಮೊದಲ ಪಂದ್ಯದಲ್ಲಿ ಹರಾರಯಣವನ್ನು ಸೋಲಿಸಿತ್ತು. ಇದೇ ವೇಳೆ ಕರ್ನಾಟಕ ಪುರುಷರ ತಂಡ ಸತತ 2ನೇ ಸೋಲು ಕಂಡಿತು. ಸರ್ವಿಸಸ್ ವಿರುದ್ಧ 4-9 ಅಂಕಗಳಲ್ಲಿ ಸೋಲುಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.