ವಿಂಡೀಸ್ ಪ್ರದರ್ಶನ ಗೇಲಿ ಮಾಡಿದ ಹರ್ಭಜನ್‌ಗೆ ಅಭಿಮಾನಿಗಳಿಂದ ತರಾಟೆ!

Published : Oct 05, 2018, 07:55 PM IST
ವಿಂಡೀಸ್ ಪ್ರದರ್ಶನ ಗೇಲಿ ಮಾಡಿದ ಹರ್ಭಜನ್‌ಗೆ ಅಭಿಮಾನಿಗಳಿಂದ ತರಾಟೆ!

ಸಾರಾಂಶ

ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡದ ಪ್ರದರ್ಶನವನ್ನ ಕಾಲೆಳೆದ ಹರ್ಭಜನ್ ಸಿಂಗ್‌ಗೆ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಭಜ್ಜಿಗೆ ಪ್ರಶ್ನೆಗಳನ್ನ ಸುರಿಮಳೆಗೈದಿದ್ದಾರೆ. ಇಲ್ಲಿದೆ ಹರ್ಭಜನ್ ಹಾಗೂ ಅಭಿಮಾನಿಗಳ ಟ್ವೀಟ್.

ರಾಜ್‌ಕೋಟ್(ಅ.05): ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡ ಹೀನಾಯ ಪ್ರದರ್ಶನ ನೀಡಿದೆ. ಮೊದಲು ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ ವಿಂಡೀಸ್ ಇದೀಗ ಬ್ಯಾಟಿಂಗ್‌ನಲ್ಲೂ ಕಳಪೆ ಪ್ರದರ್ಶನ ನೀಡಿದೆ.

ವೆಸ್ಟ್ಇಂಡೀಸ್ ಬೌಲಿಂಗ್ ವಿರುದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 649 ರನ್ ಸಿಡಿಸಿತ್ತು. ಪೃಥ್ವಿ ಶಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಸೆಂಚುರಿ ಸಿಡಿಸಿದ್ದರು. ಬಳಿಕ ಭಾರತ ಬೌಲಿಂಗ್ ದಾಳಿಗೆ 94 ರನ್‌ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡಿದೆ. ಇಷ್ಟೇ ಅಲ್ಲ 3ನೇ ದಿನಕ್ಕೆ ಪಂದ್ಯದ ಫಲಿತಾಂಶ ಹೊರಬೀಳು ಸಾಧ್ಯತೆ ಇದೆ.

ವೆಸ್ಟ್ಇಂಡೀಸ್ ತಂಡ ಕಳಪೆ ಪ್ರದರ್ಶನಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೇಲಿ ಮಾಡಿದ್ದಾರೆ. ಈ ತಂಡ ರಣಜಿ ಕ್ವಾರ್ಟರ್ ಪಂದ್ಯಕ್ಕೂ ಅರ್ಹತೆ ಪಡೆಯಲ್ಲ. ಇಷ್ಟೇ ಪ್ಲೇಟ್ ಗ್ರೂಪ್ ಹಂತಕ್ಕೂ ಪ್ರವೇಶ ಪಡೆಯೋದು ಡೌಟ್ ಎಂದು ಟ್ವೀಟ್ ಮಾಡಿದ್ದರು.

 

;

 

ಹರ್ಭಜನ್ ಸಿಂಗ್ ಟ್ವೀಟ್‌ಗೆ ಅಭಿಮಾನಿಗಳು ಗರಂ ಆಗಿದ್ದಾರೆ. 2011 ಮತ್ತು 2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಮಾಡಿದಾಗ ಇದೇ ಪರಿಸ್ಥಿತಿ ಇತ್ತು ಎಂದು ಟ್ವೀಟ್ ಮಾಡಿದ್ದಾರೆ. 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!