ಇಂಗ್ಲೆಂಡ್‌ನಲ್ಲಿ ಶೀಘ್ರದಲ್ಲೇ ಕ್ರೀಡಾಂಗಣಕ್ಕೆ ಪ್ರೇಕ್ಷ​ಕ​ರು

By Suvarna NewsFirst Published Jul 18, 2020, 12:15 PM IST
Highlights

ಮುಂದಿನ ವಾರದಿಂದ ಆಯ್ದ ಕ್ರೀಡೆಗಳ ಪಂದ್ಯ​ಗ​ಳಿಗೆ ಸೀಮಿತ ಪ್ರೇಕ್ಷ​ಕ​ರಿಗೆ ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅವ​ಕಾಶ ನೀಡು​ವು​ದಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶುಕ್ರವಾರ ಹೇಳಿ​ದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್(ಜು.18)‌: ಕೊರೋನಾ ವೈರಸ್‌ ಜತೆಗೆ ಬದು​ಕುವುದನ್ನು ಕಲಿ​ಯ​ಬೇಕು ಎನ್ನುವ ಸಿದ್ಧಾಂತವನ್ನು ಅಳ​ವ​ಡಿ​ಸಿ​ಕೊ​ಳ್ಳು​ತ್ತಿ​ರುವ ಇಂಗ್ಲೆಂಡ್‌, ಅಕ್ಟೋ​ಬರ್‌ನಲ್ಲಿ ಕ್ರೀಡಾಂಗಣಗಳಿಗೆ ಪ್ರೇಕ್ಷ​ಕ​ರನ್ನು ಪೂರ್ಣ ಪ್ರಮಾಣದಲ್ಲಿ ಬಿಡಲು ಯೋಜನೆ ರೂಪಿಸು​ತ್ತಿದೆ. 

ಈ ಯೋಜನೆಯ ಅಂಗ​ವಾಗಿ, ಮುಂದಿನ ವಾರದಿಂದ ಆಯ್ದ ಕ್ರೀಡೆಗಳ ಪಂದ್ಯ​ಗ​ಳಿಗೆ ಸೀಮಿತ ಪ್ರೇಕ್ಷ​ಕ​ರಿಗೆ ಕ್ರೀಡಾಂಗಣಗಳಿಗೆ ಪ್ರವೇಶಿಸಲು ಅವ​ಕಾಶ ನೀಡು​ವು​ದಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶುಕ್ರವಾರ ಹೇಳಿ​ದ್ದಾರೆ. ಜು.26ರಿಂದ ದೇಸಿ ಕ್ರಿಕೆಟ್‌ ಋುತು ಆರಂಭ​ಗೊಳ್ಳಲಿದ್ದು, ಕೊರೋನಾ ನಂತರ ಮೊದಲ ಬಾರಿಗೆ ಅಭಿ​ಮಾ​ನಿ​ಗ​ಳಿಗೆ ಕ್ರೀಡಾಂಗಣಕ್ಕೆ ಪ್ರವೇ​ಶಿ​ಸಲು ಅವ​ಕಾಶ ಸಿಗ​ಲಿದೆ. ಜು.31ರಿಂದ ವಿಶ್ವ ಸ್ನೂಕರ್‌ ಚಾಂಪಿ​ಯನ್‌ಶಿಪ್‌ ನಡೆ​ಯ​ಲಿ​ದ್ದು, ಪ್ರೇಕ್ಷಕರಿಗೆ ಪ್ರವೇಶ ಸಿಗ​ಲಿದೆ.

ಸ್ಟೋಕ್ಸ್‌, ಸಿಬ್ಲಿ ಶತಕ: ಬೃಹತ್ ಮೊತ್ತ ದಾಖಲಿಸಿದ ಇಂಗ್ಲೆಂಡ್‌

ಈಗಾಗಲೇ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಯಶಸ್ವಿಯಾಗಿ ಆರಂಭವಾಗಿವೆ. ಕೊರೋನಾ ಹಾಗೂ ಲಾಕ್‌ಡೌನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯವಹಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆ ಇಂಗ್ಲೆಂಡ್ ಭಾಜನವಾಗಿದೆ. ಇದೀಗ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಸಾಗುತ್ತಿದ್ದು, ಖಾಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ನಡೆಯುತ್ತಿದೆ. ಆಟಗಾರರಿಗೆ ಬಯೋ ಸೆಕ್ಯೂರ್ ಝೋನ್ ಏರ್ಪಡಿಸಲಾಗಿದ್ದು, ಮೈದಾನ ಹಾಗೂ ಹೋಟೆಲ್‌ನೊಳಗೆ ಇರಬೇಕಾಗಿದೆ. ಬಯೋ ಸೆಕ್ಯೂರ್ ಪ್ರೋಟೋಕಾಲ್ ಉಲ್ಲಂಘಿಸಿದ ತಪ್ಪಿಗಾಗಿ ಜೋಫ್ರಾ ಆರ್ಚರ್ ಅವರನ್ನು ಎರಡನೇ ಪಂದ್ಯದಿಂದ ಕಿಕೌಟ್ ಮಾಡಲಾಗಿದೆ.
 

click me!