ಬೆಂಗಳೂರಿನಲ್ಲಿ ನಡೆಯುವ ಆರ್‌ಸಿಬಿ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ನುಗ್ಗುವುದಾಗಿ ಹೇಳಿದ್ದ ಯುವಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಮೇ 18): ಇಂಡಿಯನ್ ಪ್ರೀಯಮಿರ್ ಲೀಗ್ 2024ರ (Indian Premier league 2024) ಪ್ರಮುಖ ಪಂದ್ಯಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುವುದಾಗಿ ಹೇಳಿ ವಿಡಿಯೋ ಹಂಚಿಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಈ ಹಿಂದೆ ನಡೆಸಿದ್ದ ಐಪಿಎಲ್ ಪಂದ್ಯದ (Bengaluru IPL Match) ವೇಳೆ ಉತ್ತರ ಕರ್ನಾಟಕದ ಒಬ್ಬ ಯುವಕ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ನುಗ್ಗಿ ವಿರಾಟ್ ಕೊಹ್ಲಿ (virat Kohli) ಕಾಲಿಗೆ ಬಿದ್ದು, ಅಪ್ಪಿಕೊಂಡು ಬಂದಿದ್ದನು. ಇದರಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ (Bengaluru Young Man) ಕೂಡ ತಾನು ಆರ್‌ಸಿಬಿ-ಸಿಎಸ್‌ಕೆ ಪಂದ್ಯದ (RCB CSK Match) ವೇಳೆ ಮೈದಾನಕ್ಕೆ ನುಗ್ಗುತ್ತೇನೆ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದನು. ಆದರೆ, ಇದರಿಂದ ಪಂದ್ಯಾಟಕ್ಕೆ ಸಮಸ್ಯೆ ಆಗಬಹುದು ಎಂದು ಚಿನ್ನಸ್ವಾಮಿ ಕ್ರೀಡಾಂಗಣದ (Bengaluru Chinnaswamy stadium) ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಚೆನ್ನೈ ಎದುರಿನ ಬಿಗ್ ಮ್ಯಾಚ್‌ನಲ್ಲಿ RCB ಕೈಹಿಡಿತಾರಾ ದಿನೇಶ್ ಕಾರ್ತಿಕ್..? ಡಿಕೆ ಅಬ್ಬರಿಸಿದ್ರೆ ಗೆಲುವು ಫಿಕ್ಸ್
ಈ ಬಗ್ಗೆ ಪೊಲೀಸರು ಕೂಡ ನಿಗಾವಹಿಸಿ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೋ ಶೇರ್ ಮಾಡಿಕೊಂಡಿದ್ದ ಯುವಕ ಟಿಕೆಟ್ ಪಡೆದು ಪಂದ್ಯವನ್ನು ನೋಡಲು ಆಗಮಿಸಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Social Media Post) ಮಾಡಿಕೊಂಡ ಯುವಕನನ್ನು ನಿತಿನ್ (24) ಎಂದು ಗುರುತಿಸಲಾಗಿದೆ. ಈತನ ವೀಡಿಯೋ ವೈರಲ್ ಆಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಬ್ಬನ್ ಪಾರ್ಕ್ ಠಾಣೆಯ (Cobbon Park Police station) ಪೊಲೀಸರು ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ.