ಕ್ರಿಕೆಟ್ ಸೀಕ್ರೆಟ್ಸ್: ನೆನಪಿದೆಯಾ ಪಾಕಿಸ್ತಾನ ವಿರುದ್ಧ ಬೌಲ್- ಔಟ್ ಗೆಲುವು!

By Web DeskFirst Published Sep 14, 2018, 6:21 PM IST
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಸೆಪ್ಟೆಂಬರ್ 14ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಸೆ.14): ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸೆಪ್ಟೆಂಬರ್ 14, 2007 ವಿಶೇಷ ದಿನ. ಇದೇ ದಿನ ಟೀಂ ಇಂಡಿಯಾ ಬದ್ಧವೈರಿ ಪಾಕಿಸ್ತಾನ ತಂಡವನ್ನ ಮಣಿಸಿ ಗೆಲುವಿನ ಸಂಭ್ರಮ ಆಚರಿಸಿತ್ತು.

2007 ಟಿ20 ವಿಶ್ವಕಪ್ ಟೂರ್ನಿಯ 10 ಲೀಗ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 141 ರನ್ ಸಿಡಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 141 ರನ್ ಸಿಡಿಸಿ ಪಂದ್ಯವನ್ನ ಟೈ ಮಾಡಿಕೊಂಡಿತು. ಈ ಮೂಲಕ ಅಭಿಮಾನಿಗಳ ಎದೆಬಡಿತ ಮತ್ತಷ್ಟು  ಹೆಚ್ಚಾಯಿತು.

 






❌ in 2007 India v Pakistan at finished in a tie… and India won the bowl-out! pic.twitter.com/sN2dZMyLN2

— ICC (@ICC)

 

ಪಂದ್ಯ ಟೈ ಆದ ಕಾರಣ , ಬೌಲ್ ಔಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಭಾರತದ ಪರ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ ಬೌಲಿಂಗ್ ಮಾಡಿ ವಿಕೆಟ್‌ಗೆ ಗುರಿಯಿಟ್ಟರು. ಆದರೆ ಪಾಕಿಸ್ತಾನದ ಆರಾಫತ್, ಉಮರ್ ಗುಲ್ ಹಾಗೂ ಶಾಹಿದ್ ಅಫ್ರಿದಿ ವಿಕೆಟ್‌ಗೆ ಗುರಿಯಿಡಲು ವಿಫಲರಾದರು. ಈ ಮೂಲಕ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತು.

ಲೀಗ್ ಹಂತದಲ್ಲಿ ಪಾಕಿಸ್ತಾನವನ್ನ ಮಣಿಸಿದ ಭಾರತ, ಫೈನಲ್ ಪಂದ್ಯದಲ್ಲೂ ಪಾಕ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿ ಚೊಚ್ಚಲ ಟಿ20 ಪ್ರಶಸ್ತಿ ಗೆದ್ದುಕೊಂಡಿತು.
 

click me!