ಕೋಚಿಂಗ್ ಅಥವಾ ಕಮ್‌ಬ್ಯಾಕ್? ಎಬಿ ಡಿವಿಲಿಯರ್ಸ್ ನಿರ್ಧಾರವೇನು?

By Web DeskFirst Published Oct 21, 2018, 3:44 PM IST
Highlights

ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಮುಂದಿನ ನಿರ್ಧಾರ ಪ್ರಕಟಿಸಿದ್ದಾರೆ. ಎಬಿಡಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡ್ತಾರ? ಇಲ್ಲಾ ಕೋಚಿಂಗ್ ಹಾದಿ ಹಿಡಿಯುತ್ತಾರ? ಇಲ್ಲಿದೆ

ಕೇಪ್‌ಟೌನ್(ಅ.21): ಸೌತ್ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ನಿವೃತ್ತಿ ಹೇಳಿ 5 ತಿಂಗಳುಗಳೇ ಉರುಳಿದೆ. ಆದರೆ ಅಭಿಮಾನಿಗಳಿಗೆ ಎಬಿಡಿ ನಿರ್ಧಾರವನ್ನ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಎಬಿ ಡಿವಿಲಿಯರ್ಸ್ ತಮ್ಮ ಮುಂದಿನ ನಿರ್ಧಾರವನ್ನ ಬಹಿರಂಗ ಪಡಿಸಿದ್ದಾರೆ.

ಎಬಿ ಡಿವಿಲಿಯರ್ಸ್ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ ಎಬಿಡಿ ತಮ್ಮ ನಿರ್ಧಾರ ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟ್ ಕೋಚಿಂಗ್ ಆಸಕ್ತಿ ಇಲ್ಲ ಎಂದಿರುವ ಎಬಿಡಿ, ಮತ್ತೆ ಸೌತ್ಆಫ್ರಿಕಾ ತಂಡಕ್ಕ ಕಮ್‌ಬ್ಯಾಕ್ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಭವಿಷ್ಯದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲೀಗ್ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಾಸ್ಸಾಗೋ ಊಹಾಪೋಹಗಳಿಗೆ ತೆರೆ ಬಿದ್ದಿದೆ.

click me!