ಬಿಸಿಸಿಐ ಆಟಗಾರರಿಗೆ ಬಂಪರ್ ಸಂಭಾವನೆ...!

By Web DeskFirst Published Aug 10, 2018, 10:59 AM IST
Highlights

ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವೇತನವನ್ನು ವರ್ಷಕ್ಕೆ ₹80 ಲಕ್ಷದಿಂದ ₹1 ಕೋಟಿ, ಆಯ್ಕೆ ಸಮಿತಿಯ ಇನ್ನುಳಿದ ಸದಸ್ಯರ ವೇತನವನ್ನು ₹60ರಿಂದ ₹90 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರರ್ಥ ಸದ್ಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಎಂ.ಎಸ್.ಕೆ.ಪ್ರಸಾದ್ ವರ್ಷಕ್ಕೆ ₹1 ಕೋಟಿ ವೇತನ ಪಡೆಯಲಿದ್ದಾರೆ.

ನವದೆಹಲಿ[ಆ.10]: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ವಿವಿಧ ರಾಷ್ಟ್ರೀಯ ತಂಡಗಳ ಆಯ್ಕೆ ಸಮಿತಿ ಸದಸ್ಯರ ವೇತನವನ್ನು ಭರ್ಜರಿಯಾಗಿ ಏರಿಕೆ ಮಾಡಿದ್ದು, ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿಯ ಒಪ್ಪಿಗೆ ಸಹ ಪಡೆದಿದೆ ಎನ್ನಲಾಗಿದೆ.

ಹಿರಿಯ ಪುರುಷರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವೇತನವನ್ನು ವರ್ಷಕ್ಕೆ ₹80 ಲಕ್ಷದಿಂದ ₹1 ಕೋಟಿ, ಆಯ್ಕೆ ಸಮಿತಿಯ ಇನ್ನುಳಿದ ಸದಸ್ಯರ ವೇತನವನ್ನು ₹60ರಿಂದ ₹90 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರರ್ಥ ಸದ್ಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಎಂ.ಎಸ್.ಕೆ.ಪ್ರಸಾದ್ ವರ್ಷಕ್ಕೆ ₹1 ಕೋಟಿ ವೇತನ ಪಡೆಯಲಿದ್ದಾರೆ. ಇದೇ ವೇಳೆ ಕಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವಾರ್ಷಿಕ ವೇತನ ₹65 ಲಕ್ಷ ಹಾಗೂ ಸದಸ್ಯರ ವೇತನವನ್ನು ₹60 ಲಕ್ಷಕ್ಕೆ ಏರಿಸಲಾಗಿದೆ. ಮಹಿಳಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವೇತನವನ್ನು ₹30 ಲಕ್ಷ ಹಾಗೂ ಸದಸ್ಯರ ವೇತನವನ್ನು ₹25 ಲಕ್ಷಕ್ಕೆ ಏರಿಸಲಾಗಿದೆ.

ಪ್ರಸಾದ್ ತಂಡದ ಅವಧಿ ಮುಕ್ತಾಯ?:

ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಕಾರ್ಯಾವಧಿಯನ್ನು ಬಿಸಿಸಿಐ ವಿಸ್ತರಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ, ಸದ್ಯ ಇರುವ ಸದಸ್ಯರು ಆಯ್ಕೆ ಸಮಿತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ . ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಳ್ಳುವವರು ಕನಿಷ್ಠ 7 ಟೆಸ್ಟ್, 10 ಏಕದಿನ ಇಲ್ಲವೇ 30 ಪ್ರಥಮ ದರ್ಜೆ
ಪಂದ್ಯಗಳನ್ನು ಆಡಿರಬೇಕು ಎನ್ನುವ ನೂತನ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಹಿರಿಯರ ಪುರುಷರ ತಂಡ

ಪ್ರಧಾನ ಆಯ್ಕೆಗಾರರ ವೇತನ ₹80 ಲಕ್ಷದಿಂದ ₹1 ಕೋಟಿಗೆ ಏರಿಕೆ 
ಸದಸ್ಯರ ವೇತನ ₹60ರಿಂದ ₹90 ಲಕ್ಷಕ್ಕೆ ಏರಿಕೆ

ಕಿರಿಯರ ತಂಡ 
ಆಯ್ಕೆಗಾರರ ವೇತನ ₹65 ಲಕ್ಷಕ್ಕೆ ಏರಿಕೆ

ಮಹಿಳಾ ತಂಡ
ಆಯ್ಕೆಗಾರರ ವೇತನ ₹30 ಲಕ್ಷಕ್ಕೆ ಏರಿಕೆ

click me!