ಕ್ರಿಕೆಟಿಗ ಮನೋಜ್‌ ಗುರಂಗ್‌ಗೆ 2 ವರ್ಷ ನಿಷೇಧ-ಕಠಿಣ ಶಿಕ್ಷೆ ಪ್ರಕಟಿಸಿದ ಬಿಸಿಸಿಐ

By Web DeskFirst Published Oct 3, 2018, 6:33 PM IST
Highlights

ಕ್ರಿಕೆಟರ್ ಮನೋಜ್ ಗುರಂಗ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಸುಳ್ಳು ಜನನ ಪ್ರಮಾಣ ಪತ್ರ ನೀಡಿದ ಸಿಕ್ಕಿಂ ಕ್ರಿಕೆಟಿಗ ಮನೋಜ್ ಹಾಗೂ ಪುದುಚೇರಿಯ 8 ಕ್ರಿಕೆಟಿಗರ ವಿರುದ್ಧ ಬಿಸಿಸಿಐ ಶಿಕ್ಷೆ ಪ್ರಕಟಿಸಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ.

ಸಿಕ್ಕಿಂ(ಅ.03): ಸುಳ್ಳು  ಜನನ ಪ್ರಮಾಣ ಪತ್ರವನ್ನ ನೀಡಿದ ಸಿಕ್ಕಿಂ ಅಂಡರ್-19 ಕ್ರಿಕೆಟ್ ತಂಡದ  ಮನೋಜ್ ಗುರಂಗ್‌ಗೆ ಬಿಸಿಸಿಐ 2 ವರ್ಷ ನಿಷೇಧ ಹೇರಿದೆ. ಇಷ್ಟೇ ಅಲ್ಲ ಪುದುಚೇರಿಯ 8 ಕ್ರಿಕೆಟಿಗರ ನೋಂದಣಿಯನ್ನ ಬಿಸಿಸಿಐ ವಜಾಗೊಳಿಸಿದೆ.

2014ರ ಕೂಚ್ ಬೆಹರ್ ಟ್ರೋಫಿಗೆ ಸಲ್ಲಿಸಿದ್ದ ಜನನ ಪ್ರಮಾಣ ಪತ್ರದಲ್ಲಿ ಮನೋಜ್ 1997ರಲ್ಲಿ ಹುಟ್ಟಿದ ದಿನಾಂಕದ ಪ್ರಮಾಣ ಪತ್ರ ನೀಡಿದ್ದರು. ಇದೀಗ 2000 ದಲ್ಲಿ ಹುಟ್ಟಿರೋದಾಗಿ ಪ್ರಮಾಣ ಪತ್ರ ನೀಡಿದ್ದಾರೆ. ಹೀಗಾಗಿ ತನಿಖೆ ನಡೆಸಿದ ಬಿಸಿಸಿಐ ಮನೋಜ್ ಜನನ ಪ್ರಮಾಣ ಪತ್ರವನ್ನ ತಿರುಚಿರುವುದು ಸ್ಪಷ್ಟವಾಗಿದೆ. 

ಮನೋಜ್ ಸುಳ್ಳು ಜನನ ಪ್ರಮಾಣ ಪತ್ರ ನೀಡಿರುವುದು ಸಾಬೀತಾಗುತ್ತಿದ್ದಂತೆ, ಬಿಸಿಸಿಐ ಸಿಕ್ಕಿಂ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದೆ. ಇಷ್ಟೇ ಅಲ್ಲ ಮನೋಜ್ ಗುರಂಗ್‌ಗೆ 2 ವರ್ಷ ನಿಷೇಧ ಹೇರುವಂತೆ ಸೂಚಿಸಿದೆ. ಇಷ್ಟೇ ಅಲ್ಲ ಸುಳ್ಳು ಜನನ ಪ್ರಮಾಣ ಪತ್ರ  ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

click me!