ಪಾಕ್ ವಿರುದ್ಧದ ಸರಣಿಗೆ ಆಸೀಸ್ ತಂಡ ಪ್ರಕಟ

By Web DeskFirst Published 11, Sep 2018, 2:10 PM IST
Highlights

ಪಾಕಿಸ್ತಾನ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಸರಣಿಗೆ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ನಿರ್ಧಾರ ಎಂಬಂತೆ ದೇಸಿ ಟೂರ್ನಿಯಲ್ಲಿ 50ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ ಕಲೆಹಾಕಿರುವ ಗ್ಲೇನ್ ಮ್ಯಾಕ್ಸ್’ವೆಲ್ ಅವರನ್ನು ಕೈಬಿಡಲಾಗಿದೆ.

ಸಿಡ್ನಿ[ಸೆ.11]: ಮುಂಬರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಸುಮಾರು 2 ವರ್ಷಗಳ ಬಳಿಕ ಪೀಟರ್ ಸಿಡ್ಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಟಿಮ್ ಪೈನೆ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.  

ಪಾಕಿಸ್ತಾನ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳ ಸರಣಿಗೆ 15 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ನಿರ್ಧಾರ ಎಂಬಂತೆ ದೇಸಿ ಟೂರ್ನಿಯಲ್ಲಿ 50ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್ ಕಲೆಹಾಕಿರುವ ಗ್ಲೇನ್ ಮ್ಯಾಕ್ಸ್’ವೆಲ್ ಅವರನ್ನು ಕೈಬಿಡಲಾಗಿದೆ. ಇದರ ಜತೆಗೆ ಬಾಲ್ ಟ್ಯಾಂಪರಿಂಗ್ ನಿಷೇಧದ ಅವಧಿ ಪೂರ್ಣಗೊಳಿಸಿರುವ ಪೀಟರ್ ಹ್ಯಾಂಡ್ಸ್’ಕಂಬ್ ಅವರಿಗೂ ತಂಡದಲ್ಲಿ ಸ್ಥಾನ ದಕ್ಕಿಲ್ಲ.

ಇನ್ನು ಮೂರು ಹೊಸ ಮುಖಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ ಮಣೆ ಹಾಕಿದ್ದು ಒಟ್ಟು 5 ಆಟಗಾರರು ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮರ್ನಸ್ ಲ್ಯಾಬ್ಸ್’ಚಾಗ್ನೆ ಹಾಗೂ ವೇಗದ ಬೌಲರ್’ಗಳಾದ ಮಿಚೆಲ್ ನೇಸೆರ್ ಹಾಗೂ ಬ್ರೆಂಡನ್ ಡಾಗೆಟ್ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. 

ದುಬೈನಲ್ಲಿ ಅಕ್ಟೋಬರ್ 07ರಂದು ಮೊದಲ ಟೆಸ್ಟ್ ನಡೆದರೆ, ಎರಡನೇ ಟೆಸ್ಟ್ ಅಬುದಾಬಿಯಲ್ಲಿ ಅಕ್ಟೋಬರ್ 16ರಂದು ಜರುಗಲಿದೆ. 

ಆಸ್ಟ್ರೇಲಿಯಾ ತಂಡ ಹೀಗಿದೆ:

 

 

Last Updated 19, Sep 2018, 9:22 AM IST