ಏಷ್ಯಾಕಪ್ 2018: ಶ್ರೀಲಂಕಾ ಗೆಲುವಿಗೆ 262 ರನ್ ಟಾರ್ಗೆಟ್ ನೀಡಿದ ಬಾಂಗ್ಲಾ

By Web DeskFirst Published Sep 15, 2018, 9:12 PM IST
Highlights

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್‌ಡೇಟ್ಸ್

ದುಬೈ(ಸೆ.15): ಏಷ್ಯಾಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ 261 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಲಂಕಾ ಗೆಲುವಿಗೆ 262 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ, ಲಂಕಾ ವೇಗಿ ಲಸಿತ್ ಮಲಿಂಗಾ ದಾಳಿಗೆ ತತ್ತರಿಸಿತು. ಲಿಟ್ಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಶೂನ್ಯಕ್ಕೆ ಔಟಾದರು. ಈ ಮೂಲಕ ಬಾಂಗ್ಲಾದೇಶ 1 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು.

ಆರಂಭದಲ್ಲೇ ಹಿನ್ನಡೆ ಅನುಭವಿಸಿದ ತಂಡಕ್ಕೆ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದ್ ಮಿಥುನ್ ಆಸರೆಯಾದರು. ಇಬ್ಬರು ಅರ್ಧಶತಕ ಸಿಡಿಸಿದರು. ಈ ಜೊತೆಯಾಟಕ್ಕೆ ಮಲಿಂಗ ಬ್ರೇಕ್ ನೀಡಿದರು.

ಮಿಥುನ್ 63 ರನ್ ಸಿಡಿಸಿ ಔಟಾದರು. ಇನ್ನು ಮಹಮ್ಮದುಲ್ಲಾ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಆದರೆ ರಹೀಮ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ರಹೀಮ್ ಶತಕ ಸಿಡಿಸಿ ಮಿಂಚಿದರು.  ರಹೀಮ್ 144 ರನ್ ಸಿಡಿಸಿ ಔಟಾಗುತ್ತಿದ್ದಂತೆ ಬಾಂಗ್ಲಾದೇಶ 49.3 ಓವರ್‌ಗಳಲ್ಲಿ 261ರನ್‌ಗಳಿಗೆ ಆಲೌಟ್ ಆಯಿತು. ಲಂಕಾ ಪರ ಲಸಿತ್ ಮಲಿಂಗಾ 4 ವಿಕೆಟ್ ಕಬಳಿಸಿ ಮಿಂಚಿದರು.

click me!