ಅಂಡರ್ 20 ವಿಶ್ವ ಕುಸ್ತಿ: ಭಾರತದ ಅಂತಿಮ್‌ಗೆ ಐತಿಹಾಸಿಕ ಚಿನ್ನ..!

By Naveen KodaseFirst Published Aug 21, 2022, 10:43 AM IST
Highlights

ಅಂಡರ್‌-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಅಂತಿಮ್
ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 17 ವರ್ಷದ ಅಂತಿಮ್‌ಗೆ ಒಲಿದ ಚಿನ್ನ
ಅಂಡರ್‌-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಕೀರ್ತಿ

ನವದೆಹಲಿ(ಆ.21): ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಅಂಡರ್‌-20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಭಾರತದ ಅಂತಿಮ್‌ ಪಂಘಾಲ್‌ ಇತಿಹಾಸ ಬರೆದಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 17 ವರ್ಷದ ಅಂತಿಮ್‌ ಕಜಕಸ್ತಾನದ ಅಟ್ಲಿನ್‌ ಶಗಾಯೆವಾ ವಿರುದ್ಧ 8-0 ಅಂತರದಲ್ಲಿ ಗೆದ್ದು ಚಿನ್ನ ಪಡೆದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ.

ಅಂತಿಮ್‌ ಹೆಸರಿನ ಗುಟ್ಟೇನು?

ಹರಾರ‍ಯಣದ ಹಿಸ್ಸಾರ್‌ ಜಿಲ್ಲೆಯ ಬಘಾನ ಎನ್ನುವ ಹಳ್ಳಿಯ ರಾಮ್‌ ನಿವಾಸ್‌ ಮತ್ತು ಕೃಷ್ಣಕುಮಾರಿ ಅವರಿಗೆ 4 ಹೆಣ್ಣು ಮಕ್ಕಳು. 4ನೇ ಮಗಳೇ ಅಂತಿಮ್‌. ಇದೇ ಕೊನೆಯ ಹೆಣ್ಣು ಮಗುವಾಗಲಿ ಎನ್ನುವ ಕಾರಣಕ್ಕೆ ಆಕೆಗೆ ‘ಅಂತಿಮ್‌’(ಕೊನೆ) ಎಂದು ಹೆಸರಿಟ್ಟಿದ್ದರು ಎನ್ನುವ ಆಸಕ್ತಿದಾಯಕ ಸಂಗತಿಯನ್ನು ಕುಸ್ತಿಪಟುವಿನ ಪೋಷಕರು ಬಹಿರಂಗಪಡಿಸಿದ್ದಾರೆ.

Proud moment🥇

Congratulations to Antim Panghal for creating history and becoming the first Indian girl to win a Gold medal at the U-20 World Championships.

India salutes your hard work and commitment. Best wishes for your bright future, keep shining. pic.twitter.com/8crrzejfLt

— Amit Shah (@AmitShah)

ಅ-19 ವಾಲಿಬಾಲ್‌ ವಿಶ್ವ ಕೂಟಕ್ಕೆ ಭಾರತ ಅರ್ಹತೆ

ಟೆಹ್ರಾನ್‌(ಇರಾನ್‌): 2023ರಲ್ಲಿ ನಡೆಯಲಿರುವ ಅಂಡರ್‌-19 ವಾಲಿಬಾಲ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ. ಇರಾನ್‌ನ ಇಸ್ಫಹಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಅಂಡರ್‌-18 ಬಾಲಕರ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಭಾರತ ಸೆಮಿಫೈನಲ್‌ ಪ್ರವೇಶಿಸಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಚೈನೀಸ್‌ ತೈಪೆಯನ್ನು 3-1 ಅಂತರದಲ್ಲಿ ಸೋಲಿಸಿ ಸೆಮೀಸ್‌ಗೇರಿದ ಭಾರತ, ವಿಶ್ವ ಕೂಟಕ್ಕೂ ಅರ್ಹತೆ ಪಡೆಯಿತು. 2003ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದಿದ್ದ ಏಷ್ಯನ್‌ ಅಂಡರ್‌-18 ಕೂಟದಲ್ಲಿ ಚೊಚ್ಚಲ ಚಾಂಪಿಯನ್‌ ಆಗಿದ್ದ ಭಾರತ, 2010ರಲ್ಲಿ ಕೊನೆ ಬಾರಿ ಕೂಟದಲ್ಲಿ ಸೆಮೀಸ್‌ ಪ್ರವೇಶಿಸಿತ್ತು.

ಸೆಪ್ಟೆಂಬರ್ 5ರಿಂದ ಬೆಂಗ್ಳೂರಲ್ಲಿ ಏಷ್ಯನ್‌ ಕಪ್‌ ಬಾಸ್ಕೆಟ್‌ಬಾಲ್‌

ಬೆಂಗಳೂರು: ಫಿಬಾ ಅಂಡರ್‌-18 ಮಹಿಳಾ ಏಷ್ಯನ್‌ ಚಾಂಪಿಯನ್‌ಶಿಪ್‌ ಬಾಸ್ಕೆಟ್‌ಬಾಲ್‌ ಟೂರ್ನಿಯು ಸೆ.5ರಿಂದ 11ರ ವರೆಗೂ ಬೆಂಗಳೂರಲ್ಲಿ ನಡೆಯಲಿದೆ ಎಂದು ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್‌(ಬಿಎಫ್‌ಐ) ಅಧ್ಯಕ್ಷ ಡಾ.ಕೆ.ಗೋವಿಂದರಾಜು ಘೋಷಿಸಿದರು. ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. 

ಭಾರತೀಯ ಫುಟ್ಬಾಲ್‌ ಅಧ್ಯಕ್ಷ ಸ್ಥಾನಕ್ಕೆ ಬೈಚುಂಗ್‌ ಭುಟಿಯಾ ಸ್ಪರ್ಧೆ

ಕಂಠೀರವ ಒಳಾಂಗಣ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಈ ಟೂರ್ನಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು 2023ರ ಸೆ.15ರಿಂದ 23ರ ವರೆಗೂ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಅಂಡರ್‌-19 ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ದಿಗ್ಗಜ ಫುಟ್ಬಾಲ್‌ ಆಟಗಾರ ಸಮರ್‌ ಬ್ಯಾನರ್ಜಿ ನಿಧನ

ಕೋಲ್ಕತಾ: 1956ರ ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಫುಟ್ಬಾಲ್‌ ತಂಡವನ್ನು ಮುನ್ನಡೆಸಿದ್ದ ಸಮರ್‌ ಬದ್ರು ಬ್ಯಾನರ್ಜಿ(92) ಶನಿವಾರ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಕೋವಿಡ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಭಾರತ ಫುಟ್ಬಾಲ್‌ ತಂಡ ಈವರೆಗೆ 3 ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ್ದು, ಬ್ಯಾನರ್ಜಿ ನಾಯಕತ್ವದಲ್ಲಿ 1956ರಲ್ಲಿ 4ನೇ ಸ್ಥಾನ ಪಡೆದಿದ್ದು ಈವರೆಗಿನ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ.
 

click me!