IPL 2024 ಪ್ಲೇ ಆಫ್ ಲೆಕ್ಕಾಚಾರ, ವರುಣನ ಕೃಪೆಯಿದ್ದರೂ ಆರ್‌ಸಿಬಿಗೆ ನಿರಾಸೆ, ಟಾಸ್ ಗೆದ್ದ ಸಿಎಸ್‌ಕೆ!

By Chethan Kumar  |  First Published May 18, 2024, 7:03 PM IST

ಬೆಂಗಳೂರು ಅಭಿಮಾನಿಗಳು ದೇವರಲ್ಲಿ ಎರಡೆರಡು ಪ್ರಾರ್ಥನೆ ಸಲ್ಲಿಸಿದ್ದಾರೆ. ಆರ್‌ಸಿಬಿ ಗೆದ್ದು ಪ್ಲೇ ಆಫ್ ಪ್ರವೇಶಿಸಲಿ, ಮಳೆ ಬರದೆ ಇರಲಿ ಎಂದು ಬೇಡಿಕೊಂಡಿದ್ದಾರೆ. ಈ ಪೈಕಿ ಮಳೆ ಸದ್ಯಕ್ಕೆ ಕೃಪೆ ತೋರಿದೆ. ಹೀಗಾಗಿ ಟಾಸ್ ಪ್ರಕ್ರಿಯೆ ಮುಗಿದಿದೆ.ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ ಮಾಡಿದೆ.


ಬೆಂಗಳೂರು(ಮೇ.18) ಐಪಿಎಲ್ 2024ರ ಪ್ಲೇ ಆಫ್ ಪ್ರವೇಶಕ್ಕಾಗಿ ಆರ್‌ಸಿಬಿ-ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಲೀಗ್ ಹೋರಾಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದೆ. ಕ್ರೀಡಾಂಗಣದ ಒಳಗಿರುವ ಅಭಿಮಾನಿಗಳಿಗಿಂತ ಕ್ರೀಡಾಂಗಣದ ಹೊರಗಿನ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಎಲ್ಲೆಡೆ ಆರ್‌ಸಿಬಿ ಕೂಗು ಕೇಳಿಸುತ್ತಿದೆ. ಇತ್ತ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಧೋನಿಯ ಕೊನೆಯ ಪಂದ್ಯ ಎಂದು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಇದರ ನಡುವೆ ಮಳೆ ಆತಂಕ. ವರುಣನ ಕೃಪೆಯಿಂದ ಟಾಸ್ ನಡೆದಿದೆ. ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸಬೇಕಿಲ್ಲ. ಕಾರಣ ಮಳೆ ಭೀತಿ ಕಾರಣ ಮೊದಲು ಬ್ಯಾಟಿಂಗ್ ಉತ್ತಮ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. 

ಆರ್‌ಸಿಬಿ ಪ್ಲೇಯಿಂಗ್ 11
ಪಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಕರಣ್ ಶರ್ಮಾ, ಯಶ್ ದಯಾಳ್, ಲ್ಯೂಕಿ ಫರ್ಗ್ಯೂಸನ್, ಮೊಹಮ್ಮದ್ ಸಿರಾಜ್ 

Latest Videos

undefined

RCB vs CSK ಪಂದ್ಯ ರದ್ದಾದರೇ ಯಾರಿಗೆ ಲಾಭ? 5 ಓವರ್ ಪಂದ್ಯ ನಡೆದರೆ ಆರ್‌ಸಿಬಿ ಎಷ್ಟು ರನ್ ಬಾರಿಸಿದ್ರೆ ಪ್ಲೇ ಆಫ್‌ಗೇರುತ್ತೆ? 

ಸಿಎಸ್‌ಕೆ ಪ್ಲೇಯಿಂಗ್ 11
ರಾಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್(ನಾಯಕ), ಡರಿಲ್ ಮಿಚೆಲ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ದೋನಿ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮ್ರಜಿತ್ ಸಿಂಗ್, ಮಹೀಶಾ ತೀಕ್ಷನಾ
 
ಬೆಂಗಳೂರಿನ ಕೆಲೆವೆಡೆ ಮಳೆಯಾಗಿದೆ. ಆದರೆ ಚಿನ್ನಸ್ವಾಮಿ ಸುತ್ತ ಮುತ್ತ ಮೋಡ ಕವಿದ ವಾತಾವರಣವಿದೆ. ಸದ್ಯ ಮಳೆ ವಿಶ್ರಾಂತಿಯಲ್ಲಿದ್ದರೂ, ಪಂದ್ಯದ ನಡುವೆ ಸುರಿಯುವ ಸಾಧ್ಯತೆಗಳು ಗೋಚರಿಸುತ್ತಿದೆ. ಸೋಲಿಗೆ ಸೇಡು, ಪ್ಲೇ ಆಫ್ ಪ್ರವೇಶ, ತವರಿನಲ್ಲಿ ಗೆಲುವು ಹೀಗೆ ಸಾಲು ಸಾಲು ಲೆಕ್ಕಾಚಾರ. 

ಈ ಐಪಿಎಲ್ ಆವೃತ್ತಿಯಲ್ಲೇ ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದೆಡೆ ಧೋನಿಗಾಗಿ ಗೆಲ್ಲಬೇಕು ಅನ್ನೋ ಕೂಗು, ಮತ್ತೊಂದೆ ಸಹಜವಾಗಿ ಆಆರ್‌‌ರ್‌ಸಿಸಿಬಿಬಿ ಕೂಗು. ಮಳೆ ಬಂದರೂ ಬಿಡುವು ನೀಡಿದರೆ ಸಾಕು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಬ್ ಏರ್ ಸಿಸ್ಟಮ್‌ನಿಂದಾಗಿ ಪಂದ್ಯ ಕೆಲವೇ ಕ್ಷಣಗಳಲ್ಲಿ ಪುನರ್ ಆರಂಭಗೊಳ್ಳಲಿದೆ.

 ಬೆಂಗಳೂರಿನಲ್ಲಿಂದು RCB vs CSK ಮಹಾಕದನ; ಗೆದ್ರೆ ಪ್ಲೇ ಆಫ್‌ಗೆ, ಸೋತ್ರೆ ಮನೆಗೆ..! 

ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ. 4ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ 7ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಣೆಬರಹ ಈ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ಇನ್ನುಳಿದ ತಂಡಗಳಾದ, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿದೆ.

click me!