ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದರ ಬೆನ್ನಲ್ಲಿಯೇ ಈ ಪಂದ್ಯದ ಟಿಕೆಟ್ ಮಾತ್ರ ಯಾರಲ್ಲಿಯೂ ಸಿಗ್ತಿಲ್ಲ.
ಬೆಂಗಳೂರು (ಮೇ.18): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹಲವು ಕಾರಣಗಳಿಗಾಗಿ ಈ ಪಂದ್ಯ ಬಹಳ ಪ್ರಮುಖವಾಗಿದೆ. ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಟೀಮ್‌ನ ಮುಖಾಮುಖಿಯನ್ನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟ ಎಂದೇ ಬಣ್ಣಿಸಲಾಗುತ್ತದೆ. ಇದರ ನಡುವೆ ಇಂದು ನಡೆಯಲಿರುವ ಪಂದ್ಯ ಬರೀ ಮ್ಯಾಚ್ ಅನ್ನೋ ಕಾರಣಕ್ಕೆ ಮುಖ್ಯವಲ್ಲ. ಇದು ನಾಕೌಟ್ ಮ್ಯಾಚ್. ಚೆನ್ನೈ ತಂಡ ಗೆಲುವು ಸಾಧಿಸಿದ್ರೆ ಪ್ಲೇ ಆಫ್ ಹಂತಕ್ಕೆ ಏರುತ್ತದೆ. ಇನ್ನು ಆರ್‌ಸಿಬಿ ತಂಡ ಗೆಲುವು ಸಾಧಿಸೋದ್ರೊಂದಿಗೆ ಚೆನ್ನೈ ತಂಡದ ರನ್‌ರೇಟ್‌ಬೀಟ್ ಮಾಡಿದ್ರೆ ಮುಂದಿನ ಹಂತಕ್ಕೆ ಏರಲಿದೆ. ಅದಲ್ಲದೆ, ವಿಶ್ವದ ದಿಗ್ಗಜ ಆಟಗಾರ ಎಂಎಸ್ ಧೋನಿ ಆಡಲಿರುವ ಬಹುಶಃ ಕೊನೆಯ ವೃತ್ತಿಪರ ಟಿ20 ಪಂದ್ಯ ಇದೂ ಎಂದೂ ಹೇಳಲಾಗುತ್ತಿದೆ. ಅದೇ ಕಾರಣಕ್ಕಾಗಿ ಅಪಾರ ಪ್ರಮಾಣದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಎಲ್ಲದರ ನಡುವೆ ಪಂದ್ಯಕ್ಕೆ ಎದುರಾಗಿರುವುದು ಮಳೆ ಭೀತಿ.
ಭಾರತೀಯ ಹವಾಮಾನ ಇಲಾಖೆ ಕೂಡ ಮೇ. 18 ರಿಂದ 20ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಆದರೆ, ಶನಿವಾರ ಬೆಳಗ್ಗಿನಿಂದ ಬೆಂಗಳೂರಿನಲ್ಲಿ ಬಿಸಿಲಿನ ವಾತಾವರಣವಿದ್ದು, ಮಳೆ ಬರೋದಿಲ್ಲ ಅನ್ನೋದು ಫ್ಯಾನ್ಸ್‌ನ ನಿರೀಕ್ಷೆ ಆಗಿದೆ. ಸಂಜೆಯ ವೇಳೆ ಭಾರೀ ಮಳೆ ಸುರಿಯುವ ನಿರೀಕ್ಷೆ ಇದ್ದರೂ ಈ ಪಂದ್ಯದ ಅಷ್ಟೂ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಎಷ್ಟು ಹಣ ಕೊಡ್ತೇವೆ ಎಂದರೂ ಪಂದ್ಯದ ಟಿಕೆಟ್ ಮಾತ್ರ ಲಭ್ಯವಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನ ಸ್ಟ್ಯಾಂಡ್ ಫುಲ್ ಭರ್ತಿಯಾಗೋ ನಿರೀಕ್ಷೆ ಇದೆ. ಇದರ ನಡುವೆ ಆರ್‌ಸಿಬಿಯ ದೊಡ್ಡ ಅಭಿಮಾನಿ ಕೂಡ ಆಗಿರುವ ಕನ್ನಡದ ನಿರ್ದೇಶಕ ಸಿಂಪಲ್ ಸಿನಿ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
'ಮಳೆ ಬರುತ್ತೆ ಅನ್ನುವ ಕಾರಣಕ್ಕೆ ticket ಸಿಕ್ಕಿ ಕೂಡ ಹೋಗದೆ ಯಾರಾದರೂ ಇದ್ದರೆ ,ದಯವಿಟ್ಟು ತಿಳಿಸಿ .. ಟಿಕೆಟ್ ದರ ದುಡ್ಡು ಕೊಟ್ಟು (ಬ್ಲಾಕ್ ಇಲ್ಲ ). ಮಳೆ ಹಾಗೂ RCB ಆಟಗಾರರನ್ನು ನೋಡಲಿಕ್ಕಾದರೂ ಕ್ರೀಡಾಂಗಣ ಕ್ಕೆ ಹೋಗುವೆ..' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಇವರು ಮಾಡಿರುವ ಪೋಸ್ಟ್‌ಗೆ ಬೇಕಾದಷ್ಟು ಕಾಮೆಂಟ್‌ಗಳೂ ಬಂದಿದ್ದು, ನೋಡಿ ಸರ್, ನಿಮ್ಮ ಪ್ರಭಾವದಿಂದ ಒಂದಾದರೂ ಟಿಕೆಟ್ ಕೊಡಿಸೋಕೆ ಆಗುತ್ತಾ ಟ್ರೈ ಮಾಡಿ ಎಂದಿದ್ದಾರೆ. ಸರ್ ಟಿಕೆಟ್ ಅಂತೂ ಇಲ್ಲ, ನನ್ನ ಬಳಿ ಬಿಎಂಟಿಸಿ ಪಾಸ್ ಇದೆ ಅದನ್ನು ಬೇಕಾದ್ರೆ ಕೊಡ್ತೇನೆ ಎಂದಿದ್ದಾರೆ.
ಧೋನಿ ನಿವೃತ್ತಿ ಸುಳಿವು ಬಿಚ್ಚಿಟ್ಟ ವಿರಾಟ್..! ಬೆಂಗ್ಳೂರಲ್ಲಿಂದು ಮಹಿ-ಕೊಹ್ಲಿ ಕೊನೆ ಮುಖಾಮುಖಿ
ಇಂಥಾ ಮ್ಯಾಚ್‌ನಲ್ಲಿ ಬ್ಲಾಕ್ ಟಿಕೆಟ್ ಸೇಲ್ ಆಗೋದು. ಬ್ಲಾಕ್ ಅಲ್ಲಿ ಖರೀದಿ ಮಾಡಲ್ಲ ಅಂದ್ರೆ ನಿಮಗೆಲ್ಲಿ ಟಿಕೆಟ್ ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಮ್ಯಾಚ್ ನೋಡ್ಬೇಕಾ? ಬೇಡ್ವಾ ಅನ್ನೋದಷ್ಟೇ ಹೇಳಿ. ಇಲ್ಲಿ ಬ್ಲಾಕ್ ಟಿಕೆಟ್ ಅನ್ನೋ ಪ್ರಶ್ನೆನೇ ಬರೋದಿಲ್ಲ. ಇಷ್ಟೆಲ್ಲಾ ಒಳ್ಳೆಯವರಾಗಿ ಏನ್ ಮಾಡ್ತೀರಾ ಎಂದು ಸುನಿಗೆ ಪ್ರಶ್ನೆ ಮಾಡಿದ್ದಾರೆ. ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್ ಬೈಕ್ ರ್ಯಾಲಿ: ಹೈವೋಲ್ಟೇಜ್ ಪಂದ್ಯದ ಮುಂಚಿತವಾಗಿ ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನ ಒಂದು ಸುತ್ತು ಆರ್‌ಸಿಬಿ ಅಭಿಮಾನಿಗಳು ಬೈಕ್ ರ್ಯಾಲಿ ಮಾಡಿದ್ದಾರೆ. ಸುಮಾರು ನೂರಕ್ಕೂ ಅಧಕ ಬೈಕ್‌ಗಳು ಆರ್‌ಸಿಬಿಯ ಫ್ಲ್ಯಾಗ್ ಹಾಕಿಕೊಂಡು ರ್ಯಾಲಿ ಮಾಡಿವೆ.
ಬೆಂಗಳೂರಿನಲ್ಲಿಂದು RCB vs CSK ಮಹಾಕದನ; ಗೆದ್ರೆ ಪ್ಲೇ ಆಫ್‌ಗೆ, ಸೋತ್ರೆ ಮನೆಗೆ..!