ದಿನೇಶ್ ಕಾರ್ತಿಕ್‌ಗೆ ಇವತ್ತಿನ ಮ್ಯಾಚ್ ತುಂಬಾನೇ ವಿಶೇಷವಾಗಿದೆ. ಯಾಕಂದ್ರೆ, ಈ ಐಪಿಎಲ್ ನಂತರ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಆರ್‌ಸಿಬಿ ಇವತ್ತಿನ ಪಂದ್ಯದಲ್ಲಿ ಸೋತರೆ, ಇದೇ ಅವರ ಕೊನೆಯ ಮ್ಯಾಚ್ ಆಗಲಿದೆ.
ಬೆಂಗಳೂರು(ಮೇ.18): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂದಿನ ಮ್ಯಾಚ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಆಟಗಾರನಿಗೆ ತುಂಬಾನೇ ವಿಶೇಷವಾಗಿದೆ. ಈ ಬಿಗ್ ಮ್ಯಾಚ್‌ನಲ್ಲಿ ಅಬ್ಬರಿಸಿ, RCBಯ ಕಪ್ ಗೆಲುವಿನ ಆಸೆಯನ್ನ ಜೀವಂತವಾಗಿರಿಸಲು ಈ ಆಟಗಾರ ರೆಡಿಯಾಗಿದ್ದಾನೆ. ಅಷ್ಟಕ್ಕೂ ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
ಚೆನ್ನೈ ವಿರುದ್ದವೇ ಅಬ್ಬರಿಸ್ತಾರಾ ಚೆನ್ನೈ ಬಾಯ್..?
ಐಪಿಎಲ್ ರಣರಂಗದಲ್ಲಿ ಆರ್‌ಸಿಬಿ ಸತತ 5 ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಆ ಮೂಲಕ ಸೋಲಿನ ಸುಳಿಯಿಂದ ಫೀನಿಕ್ಸ್‌ನಂತೆ ಮೇಲೆದ್ದು ಬಂದಿದೆ. ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಇದ್ರಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂದಿನ ಮ್ಯಾಚ್ ಆರ್‌ಸಿಬಿ ಆಟಗಾರರಿಗೆ ಡು ಆರ್ ಡೈ ಆಗಿದೆ. ಆದ್ರೆ, ತಂಡದ ಸೀನಿಯರ್ ಪ್ಲೇಯರ್ ದಿನೇಶ್ ಕಾರ್ತಿಕ್‌ಗೆ ಈ ಮ್ಯಾಚ್ ಸಖತ್ ಸ್ಪೆಷಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ರು ಆರ್‌ಸಿಬಿ ಪ್ಲೇ ಆಫ್‌ಗೇರೋದು ಡೌಟ್..! ಇಲ್ಲಿದೆ ಹೊಸ ಅಪ್ಡೇಟ್
ಯೆಸ್, ದಿನೇಶ್ ಕಾರ್ತಿಕ್‌ಗೆ ಇವತ್ತಿನ ಮ್ಯಾಚ್ ತುಂಬಾನೇ ವಿಶೇಷವಾಗಿದೆ. ಯಾಕಂದ್ರೆ, ಈ ಐಪಿಎಲ್ ನಂತರ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಆರ್‌ಸಿಬಿ ಇವತ್ತಿನ ಪಂದ್ಯದಲ್ಲಿ ಸೋತರೆ, ಇದೇ ಅವರ ಕೊನೆಯ ಮ್ಯಾಚ್ ಆಗಲಿದೆ. ಇದರಿಂದ ಇಂದು ತವರಿನ ತಂಡದ ವಿರುದ್ಧ ಅಬ್ಬರಿಸಿ, RCBಯನ್ನ ಪ್ಲೇ ಆಫ್‌ಗೆ ಎಂಟ್ರಿ ಕೊಡಿಸಲು DK ಪಣತೊಟ್ಟಿದ್ದಾರೆ.
ಫಸ್ಟ್ ಹಾಫ್ನಲ್ಲಿ RCB ಮಾನ ಕಾಪಾಡಿದ್ದ ದಿನೇಶ್..!
ಈ ಬಾರಿಯ ಐಪಿಎಲ್‌ನ ಫಸ್ಟ್ ಹಾಫ್ನಲ್ಲಿ RCB ಹೀನಾಯ ಪ್ರದರ್ಶನ ನೀಡಿತ್ತು. ಬ್ಯಾಟರ್ಸ್ ರನ್ಗಳಿಸಲು ಪರದಾಡ್ತಿದ್ರೆ, ಬೌಲರ್ಸ್ ವಿಕೆಟ್ ಪಡೆಯ ಲಾಗದೇ ಪರದಾಡ್ತಿದ್ರು. ಆದ್ರೆ, ಡಿಕೆ ಮಾತ್ರ ಕನ್ಸಿಸ್ಟೆಂಟ್ ಆಗಿ ಫರ್ಫಾಮ್ ಮಾಡಿದ್ರು. ಅದ್ಭುತ ಬ್ಯಾಟಿಂಗ್‌ನಿಂದ ತಂಡದ ಮಾನ ಕಾಪಾಡಿದ್ರು. RCB ಗೆದ್ದಿದ್ದ ಏಕೈಕ ಪಂದ್ಯದ ಮ್ಯಾಚ್ ವಿನ್ನರ್ ಕೂಡ ಅವರೇ ಆಗಿದ್ರು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡಿಕೆ ಜಸ್ಟ್, 10 ಎಸೆತಗಳಲ್ಲಿ 3 ಫೋರ್ ಮತ್ತು 2 ಸಿಕ್ಸರ್ ಸಹಿತ 28 ರನ್ ಚಚ್ಚಿದ್ರು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
CSK ಎದುರಿನ ಹೈವೋಲ್ಟೇಜ್ ಪಂದ್ಯಕ್ಕೆ RCB ಸಂಭಾವ್ಯ ತಂಡ ಪ್ರಕಟ..! ಎರಡು ಮಹತ್ವದ ಬದಲಾವಣೆ..?
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಡಿಕೆ ಜಬರ್ದಸ್ತ್ ಬ್ಯಾಟಿಂಗ್ನಿಂದ ಧೂಳೆಬ್ಬಿಸಿದ್ರು. 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು, 23 ಎಸೆತಗಳಲ್ಲಿ 5 ಫೋರ್ 4 ಸಿಕ್ಸರ್ ಸಹಿತ ಅಜೇಯ 53 ರನ್ ಸಿಡಿಸಿ, ತಂಡದ ಸ್ಕೋರ್ 190ರ ಗಡಿ ದಾಟುವಂತೆ ಮಾಡಿದ್ರು.
ಡಿಕೆ ಅಬ್ಬರಿಸಿದ್ರೆ ಡು ಪ್ಲೆಸಿ ಪಡೆಗೆ ಗೆಲುವು ಪಕ್ಕಾ..!
ಯೆಸ್, ಡಿಕೆ ಅಬ್ಬರಿಸಿದ್ರೆ ಗೆಲುವು ಪಕ್ಕಾ RCBಯದ್ದೇ. ಈ ಹಿಂದೆ ಹಲವು ಬಾರಿ ಡಿಕೆ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ, ಅದು 2018ರ ನಿದಾಹಾಸ್ ಟ್ರೋಫಿ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಇನ್ನಿಂಗ್ಸ್. ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ 168 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ, ಸೋಲಿನ ಸುಳಿಗೆ ಸಿಲುಕಿತ್ತು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡಿಕೆ, ಕೇವಲ 8 ಎಸೆತಗಳಲ್ಲಿ 29 ರನ್ ಬಾರಿಸಿದ್ರು. ಅದರಲ್ಲೂ ಕೊನೆಯ ಬಾಲ್‌ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ, ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ರು.
ಅದೇನೆ ಇರಲಿ ಇವತ್ತು ಡಿಕೆ ಆರ್ಭಟಿಸಲಿ, RCBಯ ಗೆಲುವಿನಲ್ಲಿ ಮಿಂಚಲಿ. ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್