ಏಷ್ಯಾಕಪ್ ವೇಳೆ ಭುಗಿಲೆದ್ದಿದೆ ಸ್ಫಾಟ್ ಫಿಕ್ಸಿಂಗ್ -ತನಿಖೆಗೆ ಆದೇಶಿಸಿದ ಐಸಿಸಿ

By Web DeskFirst Published Sep 24, 2018, 6:26 PM IST
Highlights

ಕ್ರಿಕೆಟ್ ಆಟವನ್ನ ಕಳ್ಳಾಟದಿಂದ ದೂರವಿಡಲು ಐಸಿಸಿ ಸಾಕಷ್ಟು ಕ್ರಮಗಳನ್ನ ಜಾರಿಗೆ ತಂದಿದೆ. ಈಗಾಗಲೇ ಕಳ್ಳಾಟ ಆಡಿ ಕ್ರಿಕೆಟಿಗರು ತಮ್ಮ ಕರಿಯರ್ ಹಾಳು ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಏಷ್ಯಾಕಪ್ ಟೂರ್ನಿ ವೇಳೆ ಸ್ಫಾಟ್ ಫಿಕ್ಸಿಂಗ್ ಭೂತ ಭುಗಿಲೆದ್ದಿರುವ ಕುರಿತು ಐಸಿಸಿ ತನಿಖಗೆ ಸೂಚಿಸಿದೆ. 

ದುಬೈ(ಸೆ.24): ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದೆ. ಸದ್ಯ ಸೂಪರ್ 4 ಹಂತದ ಪಂದ್ಯಗಳು ನಡೆಯುತ್ತಿದೆ. ಆದರೆ ಟೂರ್ನಿ ನಡೆಯುತ್ತಿರುವಾಗಲೇ ಬುಕ್ಕಿಗಳು ಸ್ಫಾಟ್ ಫಿಕ್ಸಿಂಗ್ ಭೂತ ಮತ್ತೆ ಭುಗಿಲೆದ್ದಿದೆ.

ಏಷ್ಯಾಕಪ್ ಟೂರ್ನಿ ವೇಳೆ ಅಫ್ಘಾನಿಸ್ತಾನ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್‌ರನ್ನ ಬುಕ್ಕಿಗಳು ಸಂಪರ್ಕಿಸಿದ್ದಾರೆ. ಇಷ್ಟೇ ಅಲ್ಲ ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿರುವ ಚೊಚ್ಚಲ ಅಫ್ಘಾನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಫಾಟ್ ಫಿಕ್ಸಿಂಗ್ ನಡೆಸುವಂತೆ ಆಮಿಷ ಒಡ್ಡಿದ್ದಾರೆ. 

ಬುಕ್ಕಿ ಸಂಪರ್ಕಿಸಿದ ಕೂಡಲೇ ಮೊಹಮ್ಮದ್ ಶೆಹಝಾದ್ ಐಸಿಸಿ ಬ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದಾರೆ.  ಏಷ್ಯಾಕಪ್ ಟೂರ್ನಿ ವೇಳೆ ಅಫ್ಘಾನ್ ಕ್ರಿಕೆಟಿಗನನ್ನ ಬುಕ್ಕಿಗಳು ಸಂಪರ್ಕಿಸಿರೋದನ್ನ ಐಸಿಸಿ ಕೂಡ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆಗೆ ಸೂಚಿಸಿದೆ.

click me!