ಆರ್‌ಸಿಬಿ ತಂಡ ಚಹಾಲ್ ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಇನ್‌ಸೈಡ್ ಸ್ಟೋರಿ ಬಿಚ್ಚಿಟ್ಟ ಮೈಕ್ ಹಸನ್!

By Suvarna News  |  First Published Apr 23, 2024, 7:56 PM IST

ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಸೋತು ಕಂಗಾಲಾಗಿದೆ. ಆರ್‌ಸಿಬಿ ಕೈಬಿಟ್ಟ ಚಹಾಲ್ ರಾಜಸ್ಥಾನ ತಂಡದ ಸೂಪರ್ ಸ್ಟಾರ್ ಆಗಿದ್ದಾರೆ. ಚಹಾಲ್ ತಂಡದಲ್ಲಿರಬೇಕಿತ್ತು ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಆರ್‌ಸಿಬಿ ತಂಡದ ಗರಿಷ್ಠ ವಿಕೆಟ್ ಟೇಕರ್ ಆಗಿದ್ದ ಚಹಾಲ್‌ನನ್ನು ತಂಡ ರಿಟೈನ್ ಮಾಡಿಕೊಳ್ಳಲಿಲ್ಲ. ಹರಾಜಿನಲ್ಲಿ ಖರೀದಿಸಲೂ ಇಲ್ಲ. ಇದಕ್ಕೆ ಕಾರಣನ್ನೂ ಮೈಕ್ ಹಸನ್ ಬಿಚ್ಚಿಟ್ಟಿದ್ದಾರೆ.
 


ಮುಂಬೈ(ಏ.23) ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರಿಸ್ಥಿತಿ ನೋಡಿ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ತಂಡದಲ್ಲಿ ಬ್ಯಾಲೆನ್ಸ್ ಇಲ್ಲ, ಉತ್ತಮ ಬೌಲರ್ ಇಲ್ಲ, ಸ್ಪಿನ್ನರ್ ಇಲ್ಲ ಸೇರಿದಂತೆ ಅಭಿಮಾನಿಗಳು ಸಮಸ್ಯೆಗಳ ಪಟ್ಟಿಯನ್ನೇ ಮಾಡಿದ್ದಾರೆ. ಈ ಪೈಕಿ ಐಪಿಎಲ್ 2024 ಟೂರ್ನಿಯ ಇದುವರಿಗೆ ಗರಿಷ್ಠ ವಿಕೆಟ್ ಟೇಕರ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಹಾಲ್‌ನ ಆರ್‌ಸಿಬಿ ಕೈಬಿಟ್ಟಿದ್ದೇ ದೊಡ್ಡ ತಪ್ಪು ಅನ್ನೋ ಅಭಿಪ್ರಾಯಗಳಿವೆ. ಈ ಕುರಿತು ಆರ್‌ಸಿಬಿ ಮಾಜಿ ನಿರ್ದೇಶಕ ಮೈಕ್ ಹಸನ್ ಕಾರಣ ಹೇಳಿದ್ದಾರೆ. ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್‌ಸಿಬಿ ಸೂಚಿಸಿತ್ತು. ಇತ್ತ ಹರಾಜಿನಲ್ಲಿ ಖರೀದಿಸಲೂ ನಮಗೆ ಸಾಧ್ಯವಾಗಿಲ್ಲ ಎಂದು ಹಸನ್ ಹೇಳಿದ್ದಾರೆ

 ಚಹಾಲ್ ರಿಟೈನ್ ಮಾಡಿಕೊಳ್ಳಲಾಗುತ್ತಿಲ್ಲ ಅನ್ನುವಾಗ ಚಡಪಡಿಸಿದ್ದೆ, ಇತ್ತ ಹರಾಜಿನಲ್ಲಿ ಖರೀದಿಸಲು ಸಾಧ್ಯವಾಗಿಲ್ಲ ಎಂದಾಗ ಬೇಸರವಾಗಿತ್ತು. ಟಿ20 ಮಾದರಿಯಲ್ಲಿ ಚಹಾಲ್ ಉತ್ತಮ ಸ್ಪಿನ್ನರ್. ಆರ್‌ಸಿಬಿ ಗರಿಷ್ಠ ವಿಕೆಟ್ ಕಬಳಿಸಿದ್ದ ಚಹಾಲ್ ತಂಡಕ್ಕೆ ಪ್ರಮುಖ ಬ್ರೇಕ್ ನೀಡಿದ ಆಟಗಾರ. ಹೀಗಾಗಿ ಚಹಾಲ್ ತಂಡಕ್ಕೆ ಅತ್ಯವಶ್ಯಕವಾಗಿತ್ತು ಎಂದು ಹಸನ್ ಹೇಳಿದ್ದಾರೆ. ತಂಡದಲ್ಲಿ ಆಟಾಗರರ ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಫ್ರಾಂಚೈಸಿ ಮೂವರನ್ನು ಉಳಿಸಿಕೊಳ್ಳಲು ಸೂಚಿಸಿತ್ತು ಎಂದಿದ್ದಾರೆ.

Latest Videos

undefined

ವಿವಾದಾತ್ಮಕ ತೀರ್ಪು, ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್, ಶೇ.50 ರಷ್ಟು ದಂಡ!

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಉಳಿಸಿಕೊಳ್ಳಲಾಯಿತು. ಇದರಿಂದ 4 ಕೋಟಿ ರೂಪಾಯಿ ಉಳಿಯಲಿದೆ. ಇದರಿಂದ ಆರ್‌ಸಿಬಿ ಹೆಚ್ಚಿನ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡು ಚಹಾಲ್ ಹಾಗೂ ಹರ್ಷಲ್ ಪಟೇಲ್‌ನ ಖರೀದಿಸಲು ಪ್ಲಾನ್ ಮಾಡಿದ್ದೇವು. ಆದರೆ ಹರಾಜಿನಲ್ಲಿ ಇಬ್ಬರು ಆಟಗಾರರಿಗೆ ಭಾರಿ ಬೇಡಿಕೆ ಇತ್ತು. ಇತ್ತ ನಿಯಮದ ಹಣದಲ್ಲಿ ಖರೀದಿ ಸಾಧ್ಯವಾಗಿಲ್ಲ ಎಂದು ಮೈಕ್ ಹಸೆನ್ ಹೇಳಿದ್ದಾರೆ.

ಚಹಾಲ್ ಹೆಸರು ಹರಾಜಿನಲ್ಲಿ ಅಂತ್ಯದಲ್ಲಿ ಬಂದಿತ್ತು. ಅಷ್ಟರಲ್ಲೇ ಆರ್‌ಸಿಬಿ ವಾನಿಂಡು ಹಸರಂಗ ಖರೀದಿ ಮಾಡಿತ್ತು. ದುಬಾರಿಯಾದರೂ ಆರ್‌ಸಿಬಿ ಖರೀದಿ ಚಹಾಲ್ ಖರೀದಿಗೆ ಹೊಡೆತ ನೀಡಿತು ಎಂದು ಹಸನ್ ಹೇಳಿದ್ದಾರೆ. ಹಸರಂಗ ಉತ್ತಮ ಸ್ಪಿನ್ ಬೌಲರ್. ಆಧರೆ ಐಪಿಎಲ್ ಕಂಡೀಷನ್, ಇಂಡಿಯನ್ ಪಿಚ್, ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆ ಚಹಾಲ್‌ಗೆ ತಿಳಿದಿದೆ. ಹೀಗಾಗಿ ಚಹಾಲ್ ಹಚ್ಚು ಪರಿಣಾಮಕಾರಿ ಎಂದು ಮೈಕ್ ಹಸನ್ ಹೇಳಿದ್ದಾರೆ.

ಯಾವಾಗಲೂ ಸೀರಿಯಸ್ ಆಗಿರುವ ನರೈನ್ ನಗಿಸಿದ ಕೊಹ್ಲಿ..! ನರೈನ್ ಎರಡನೇ ಪತ್ನಿ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ

ಇದೀಗ ಚಹಾಲ್ ಕೈಬಿಟ್ಟಿರುವ ಆರ್‌ಸಿಬಿ ಪರಿಸ್ಥಿತಿ ಅಂಕಪಟ್ಟಿಯಲ್ಲಿ ಪಾತಾಳದಲ್ಲಿದ್ದರೆ, ಚಹಾಲ್ ಖರೀದಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಅಗ್ರಸ್ಥಾನದಲ್ಲಿದೆ.

click me!