IPL 2024: ರುತುರಾಜ್‌ ಗಾಯಕ್ವಾಡ್‌ ಸೂಪರ್‌ ಸೆಂಚುರಿ, ಲಕ್ನೋಗೆ ಸವಾಲಿನ ಗುರಿ

By Santosh Naik  |  First Published Apr 23, 2024, 9:18 PM IST


ಕೇವಲ 56 ಎಸೆತಗಳಲ್ಲಿ ನಾಯಕ ರುತುರಾಜ್‌ ಗಾಯಕ್ವಾಡ್‌ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ಸವಾಲಿನಮೊತ್ತ ಕಲೆಹಾಕಿದೆ.
 


ಚೆನ್ನೈ (ಏ.23): ನಾಯಕ ರುತುರಾಜ್‌ ಗಾಯಕ್ವಾಡ್‌ ಕೇವಲ 56 ಎಸೆತಗಳಲ್ಲಿ ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2024ರ ಐಪಿಎಲ್‌ನಲ್ಲಿ ಮಂಗಳವಾರ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ರುತುರಾಜ್‌ ಅವರ ಐಪಿಎಲ್‌ನ 2ನೇ ಶತಕ ಇದಾಗಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಭರ್ಜರಿ ನಿರ್ವಹಣೆಯಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ  3 ವಿಕೆಟ್‌ ನಷ್ಟಕ್ಕೆ 210 ರನ್‌ ಕಲೆಹಾಕಿದೆ. ರುತುರಾಜ್‌ ಗಾಯಕ್ವಾಡ್‌ಗೆ ಭರ್ಜರಿ ಸಾಥ್‌ ನೀಡಿ ಶಿವಂ ದುಬೇ ಕೇವಲ 27 ಎಸೆತಗಳಲ್ಲಿ 66 ರನ್‌ ಪೇರಿಸಿದ್ದರಿಂದ ತಂಡ 200 ರನ್‌ ಗಡಿ ದಾಟಲು ಸಾಧ್ಯವಾಯಿತು.  ಕೇವಲ 46 ಎಸೆತಗಳಲ್ಲಿ ಈ ಜೋಡಿ 100 ರನ್‌ಗಳ ಜೊತೆಯಾಟವಾಡಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಮೊದಲ ಓವರ್‌ನಲ್ಲಿಯೇ ನಿರ್ಗಮಿಸಿದರು.  3 ಎಸೆತಗಳಲ್ಲಿ 1 ರನ್‌ ಬಾರಿಸಿದ ಅಜಿಂಕ್ಯ ರಹಾನೆ, ಮ್ಯಾಟ್‌ ಹೆನ್ರಿಗೆ ವಿಕೆಟ್‌ ಒಪ್ಪಿಸಿದರು. ಆ ಬಳಿಕ ರುತುರಾಜ್‌ಗೆ ಜೊತೆಯಾದ ಡೇರಿಲ್‌ ಮಿಚೆಲ್‌ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾದರು. ತಂಡದ ಮೊತ್ತ 49 ರನ್‌ ಆಗುವವರೆಗೂ ಕ್ರೀಸ್‌ನಲ್ಲಿದ್ದ ಈ ಜೋಡಿಯನ್ನು ಯಶ್‌ ಠಾಕೂರ್‌ ಬೇರ್ಪಡಿಸಿದರು. 

49 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ರುತುರಾಜ್‌ಗೆ ಜೊತೆಯಾದ ಅನುಭವಿ ಆಟಗಾರ ರವೀಂದ್ರ ಜಡೇಜಾ ತಂಡದ ಮೊತ್ತವನ್ನು 100ರ ಗಡಿ ದಾಟಿಸುವ್ಲಿ ಯಶಸ್ವಿಯಾದರು. 3ನೇ ವಿಕೆಟ್‌ಗೆ ಈ ಜೋಡಿ 52 ರನ್‌ ಜೊತೆಯಾಟವಾಡಿತು. ಇದರಲ್ಲಿ ರವೀಂದ್ರ ಜಡೇಜಾ ಅವರ ಪಾಲು ಕೇವಲ 16 ರನ್‌. 19 ಎಸೆತ ಎದುರಿಸಿದ ಅವರು 2 ಬೌಂಡರಿ ಸಿಡಿಸಿದ್ದರು. ಜಡೇಜಾ ಔಟಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಇನ್ನಿಂಗ್ಸ್‌ಅನ್ನು ರುತುರಾಜ್‌ ಹಾಗೂ ಶಿವಂ ದುಬೆ ಜೋಡಿ ಆಧರಿಸಿತು.

Tap to resize

Latest Videos

ಕ್ರಿಕೆಟಿಗ ಸಂದೀಪ್ ಶರ್ಮಾ ಪತ್ನಿ ನಮ್ಮ ಬೆಂಗಳೂರಿನವರು..! ಓದಿದ್ದು ಇದೇ ಕಾಲೇಜ್

ಒಂದೆಡೆ ರುತುರಾಜ್‌ ತಮ್ಮ ಅಬ್ಬರದ ಆಟದ ಮೂಲಕ ರನ್‌ ಪೇರಿಸಿದರೆ, ಅವರಿಗೆ ಶಿವಂ ದುಬೆ ಕೂಡ ಉತ್ತಮ ಸಾಥ್‌ ನೀಡಿದರು. 27 ಎಸೆತ ಎದುರಿಸಿದ ಶಿವಂ ದುಬೆ 7 ಸಿಕ್ಸರ್‌ ಹಾಗೂ 3 ಬೌಂಡರಿ ಮೂಲಕ 66 ರನ್‌ ಚಚ್ಚಿದರು. ರುತುರಾಜ್‌ ಬಾರಿಸಿದ ಅಜೇಯ 108 ರನ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಐಪಿಎಲ್‌ನಲ್ಲಿ ಆಟಗಾರನೊಬ್ಬನ 5ನೇ ಗರಿಷ್ಠ ಮೊತ್ತ ಎನಿಸಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುರಳಿ ವಿಜಯ್‌ ಬಾರಿಸಿದ 127 ರನ್‌  ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ವಿರಾಟ್ ಕೊಹ್ಲಿಗೆ 40 ಬಾಲಲ್ಲಿ 100 ಹೊಡೆಯೋ ಸಾಮರ್ಥ್ಯವಿದೆ, ಟಿ20 ವಿಶ್ವಕಪ್‌ನಲ್ಲಿ ಆರಂಭಿಕನಾಗಿ ಆಡಿಸಿ: ದಾದಾ

click me!