ಆರ್ಚರಿಯಲ್ಲಿ ಭಾರತದ 3 ವರ್ಷದ ಬಾಲಕಿ ಗಿನ್ನಿಸ್ ರೆಕಾರ್ಡ್

By Web DeskFirst Published Aug 21, 2018, 4:22 PM IST
Highlights


3 ವರ್ಷ, ಇದು ಆಟವಾಡೋ ವಯಸ್ಸು. ಗುರಿ,ಸಾಧನೆ ಅಂದೆ ಹೆಚ್ಚೇನು ಅರ್ಥವಾಗದ ದಿನಗಳು. ಆದರೆ ಇದಕ್ಕೆ ತದ್ವಿರುದ್ದ ಭಾರತದ 3 ವರ್ಷದ ಈ ಬಾಲಕಿ. ಈಗಲೇ ಕ್ರೀಡೆಯಲ್ಲಿ ಗಿನ್ನಿಸ್ ಬುಕ್ ಸೇರಿಕೊಂಡಿದ್ದಾಳೆ. ಆಕೆಯ ಮುಂದಿನ ಟಾರ್ಗೆಟ್ ಒಲಿಂಪಿಕ್ಸ್.

ಚೆನ್ನೈ(ಆ.21): ಆಕೆ ಇನ್ನು 3 ವರ್ಷದ ಪುಟ್ಟ ಬಾಲಕಿ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಈ ಬಾಲಕಿ ಇದೀಗ ಗಿನ್ನಿಸ್ ರೆಕಾರ್ಡ್ ಬುಕ್ ಸೇರಿದ್ದಾಳೆ. ಚೆನ್ನೈನ ಪುಟ್ಟ ಬಾಲಕಿ ಪಿ ಸಂಜನಾ ಆರ್ಚರಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾಳೆ.

8 ಮೀಟರ್ ದೂರದಿಂದ 1111 ಬಾಣಗಳನ್ನ ಯಶಸ್ವಿಯಾಗಿ ಗುರಿ ಇಟ್ಟಿದ್ದಾಳೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಿದ್ದಾಳೆ.  ಅರ್ಧ ಗಂಟೆಯಲ್ಲಿ ಸಂಜನಾ ಸಾವಿರ ಬಾಣಗಳನ್ನ ಟಾರ್ಗೆಟ್ ಪಾಯಿಂಟ್‌ಗೆ ಹೊಡೆದಿದ್ದಾಳೆ.

ಕಳೆದ ಕೆಲ ತಿಂಗಳುಗಳಲ್ಲಿ ಅಭ್ಯಾಸ ಮಾಡಿದ ಸಂಜನಾ ಇದೀಗ ಗಿನ್ನಿಸ್ ರೆಕಾರ್ಡ್ ಬುಕ್ ಸೇರಿದ್ದಾಳೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನ ಪ್ರತಿನಿಧಿಸುವುದು ಇದೀಗ ಸಂಜನಾ ಮುಂದಿನ ಗುರಿ  ಎಂದು ಕೋಚ್ ಶಿಹಾನ್ ಹುಸ್ಸೈನಿ ಹೇಳಿದ್ದಾರೆ.

click me!