4 ದಶಕಗಳಿಗೂ ಮೊದಲೇ ಚಂದ್ರನ ಮೇಲೆ ಕಾಲಿರಿಸಿದ ಏಕೈಕ ಭಾರತೀಯ ಪ್ರಜೆ ಎಂದು ಗುರುತಿಸಿಕೊಂಡಿರುವ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಕೂಡ ಚಂದ್ರಯಾನ 3ಯ ಯಶಸ್ಸನ್ನು ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಮಾಧ್ಯಮವೊಂದು ಸಂದರ್ಶನ ಮಾಡಿದ್ದು, ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರು: ಚಂದ್ರಯಾನ 3 ನೌಕೆ ಚಂದ್ರ ದಕ್ಷಿಣ ಧ್ರುವದ ಮೇಲಿಳಿಯಲು ಕ್ಷಣಗಣನೆ ಆರಂಭವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಸುಮಾರು 4 ದಶಕಗಳಿಗೂ ಮೊದಲೇ ಚಂದ್ರನ ಮೇಲೆ ಕಾಲಿರಿಸಿದ ಏಕೈಕ ಭಾರತೀಯ ಪ್ರಜೆ ಎಂದು ಗುರುತಿಸಿಕೊಂಡಿರುವ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಕೂಡ ಚಂದ್ರಯಾನ 3ಯ ಯಶಸ್ಸನ್ನು ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಮಾಧ್ಯಮವೊಂದು ಸಂದರ್ಶನ ಮಾಡಿದ್ದು, ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಅಂಗ್ಲ ವೆಬ್‌ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಭಾರತೀಯ ವಾಯುಪಡೆಯ (Airforce)ಮಾಜಿ ಪೈಲಟ್ ಅಶೋಕ ಚಕ್ರ (Ashoka chakra) ಪುರಸ್ಕೃತ ರಾಕೇಶ್ ಶರ್ಮಾ (Rakesh Sharma) ಅವರು ಭಾರತದ ಚಂದ್ರಯಾನ 3 ಯಶಸ್ವಿಯಾಗುತ್ತದೆ. ಭಾರತ ಖಂಡಿತವಾಗಿಯೂ ಇಂದೇ(ಆಗಸ್ಟ್ 23) ಯಶಸ್ಸು ಸಾಧಿಸುತ್ತದೆ. ಖಂಡಿತವಾಗಿಯೂ ಇಂದು ನಾವು ಚಂದ್ರನಲ್ಲಿರುತ್ತೇವೆ ಎಂದು ಹೇಳಿದ್ದಾರೆ. ಭಾರತದ ಬಾಹ್ಯಾಕಾಶ ಸಂಶೋಧನೆ (Space Research) ಹಾಗೂ ಪ್ರಯಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು ಇಂದು ಭಾರತದ ಶಕ್ತಿ ನಾವೀನ್ಯತೆಯಿಂದ ಕೂಡಿದೆ. ಇದು ಇತರ ಬಾಹ್ಯಾಕಾಶ ಸಂಸ್ಥೆಗಳಿಗೆ ಸರಿ ಸಮಾನವಾಗಿ ಕುಳಿತುಕೊಳ್ಳಬಲ್ಲ ಸ್ಥಾನವನ್ನು ಗಳಿಸಿದ್ದು, ಬಾಹ್ಯಾಕಾಶ ನೀತಿಯ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
undefined
ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra singh) ಅವರು ಇತ್ತೀಚೆಗೆ ನಮ್ಮದೇ ಸ್ಪೇಸ್ ಸೆಂಟರ್‌ನಿಂದ ಉಪಗ್ರಹ ಉಡಾವಣೆ, ಭೂ ವೀಕ್ಷಣೆ, ಉಪಗ್ರಹ ಸಂವಹನ, ಹವಾಮಾನ, ಬಾಹ್ಯಾಕಾಶ (Space Program) ಕಾರ್ಯಕ್ರಮಗಳನ್ನು ನಿರ್ವಹಿಸುವ ಸಾಮರ್ಥ್ಯ ಸೇರಿದಂತೆ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿ ಹೀಗೆ ಎಲ್ಲವನ್ನು ಹೊಂದಿರುವ ಭಾರತ ಬಾಹ್ಯಾಕಾಶ ಯಾನದ ಸ್ಥಾನಮಾನ ಗಳಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆಯಲಿದೆ ಎಂದಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ, ಕಳೆದ ನಾಲ್ಕೈದು ದಶಕಗಳಲ್ಲಿ ಇಸ್ರೋ (ISRO) ಮಾಡುತ್ತಿರುವ ಪ್ರಯಾಣ ಹಾಗೂ ಶ್ರಮದ ಬಗ್ಗೆ ಅವರು ಹೇಳುತ್ತಿದ್ದಾರೆ. ಇದು ನಿಜವಾಗಿಯೂ ಅಧ್ಬುತವಾಗಿದೆ. ತಂತ್ರಜ್ಞಾನದ ಅಲಭ್ಯತೆಯ ನಡುವೆಯೂ ನಾವು ಚಿಕ್ಕ ಮಗುವಿನಂತೆ ಒಂದೊಂದೇ ಸ್ಥಿರವಾದ ಹೆಜ್ಜೆಗಳನ್ನು ಇಟ್ಟಿದ್ದೇವೆ. ಇದರ ಜೊತೆಗೆ ನಾವು ನಮ್ಮ ಮಾನವಸಹಿತ ಗಗನಯಾತ್ರಿಗಳ (Manned Space craft) ನೌಕೆ ಕಳುಹಿಸಲು ತಯಾರಿ ನಡೆಸುತ್ತಿದ್ದೇವೆ. ಇದರ ಜೊತೆಗೆ ನಾವು ವಾಣಿಜ್ಯೋದ್ಯಮವಾಗಿ ಇದನ್ನು ಬಳಸಿಕೊಂಡಿದ್ದು, ಸ್ನೇಹಿತ ರಾಷ್ಟ್ರಗಳ ಉಪಗ್ರಹವನ್ನು ಕಕ್ಷೆಗೆ ಸೇರಿಸುತ್ತಿದ್ದೇವೆ. ನಮ್ಮದೇ ಲಾಂಚರ್ ಇದೆ. ಉಪಗ್ರಹಗಳನ್ನು ಹೇಗೆ ನಡೆಸಬೇಕೆಂದು ನಮಗೆ ತಿಳಿದಿದೆ. ನಾವು ಜಾಗತಿಕ ಬಾಹ್ಯಾಕಾಶ ಶಕ್ತಿಗಳಿಂದ ನಡೆಸಲ್ಪಡುವ ವೈಜ್ಞಾನಿಕ ಕಾರ್ಯಕ್ರಮಗಳ ಭಾಗವಾಗಿದ್ದೇವೆ.
Chandrayaan-3: ಸಾಫ್ಟ್ ಲ್ಯಾಂಡಿಂಗ್ ಲೈವ್‌ಸ್ಟ್ರೀಮ್ ನೋಡೋದೇಗೆ? ಲ್ಯಾಂಡಿಂಗ್ ಸವಾಲಾಗಿರೋಕೆ! ಇಲ್ನೋಡಿ..
ಚಂದ್ರಯಾನ-3 ಮಿಷನ್ ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಇಸ್ರೋದ ಚಿತ್ರಗಳನ್ನು ಪ್ರತಿಯೊಬ್ಬರು ಪರಿಶೀಲಿಸುತ್ತಿದ್ದಾರೆ. ಇದರರ್ಥ ಭಾರತಕ್ಕೆ ಯಶಸ್ಸು ಸಿಗುವುದೇ?
ಖಂಡಿತ ಹೌದು, ಒಂದು ವೇಳೆ ರಷ್ಯಾದ (Russia) ಪ್ರಯತ್ನ ಯಶಸ್ವಿಯಾಗಿದ್ದರೆ, ಅವರು ಒಂದು ಅಥವಾ ಎರಡು ದಿನ ನಮಗಿಂತ ಮುಂಚಿತವಾಗಿ ಇಳಿಯುತ್ತಿದ್ದರು. ದುರದೃಷ್ಟವಶಾತ್, ಅವರ ನೌಕೆ ಚಂದ್ರನ ಮೇಲ್ಮೈಗೆ ಅಪ್ಪಳಿಸಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಕತ್ತಲೆ ಇದ್ದು ನಮಗೆ ಇನ್ನೂ ಎರಡು ದಿನಗಳಿವೆ. ನಾನು ಸಾಕಷ್ಟು ಆತ್ಮವಿಶ್ವಾಸ ಹೊಂದಿದ್ದೇನೆ ಮತ್ತು ಈ ಬಾರಿ ನಾವು ಯಶಸ್ವಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಚೆನ್ನಾಗಿ ತಿಳಿದಿರುವಂತೆ ಹಿಂದಿನ ಚಂದ್ರಯಾನ ಪ್ರಯತ್ನದ ದೋಷಗಳನ್ನು ಇಸ್ರೋ ಆಶಾದಾಯಕವಾಗಿ ಸರಿಪಡಿಸಿದೆ.
ಮೂರು ದಶಕಗಳಿಗೂ ಹೆಚ್ಚು ಕಾಯುವಿಕೆಯ ನಂತರ, 2024 ರಲ್ಲಿ ಮಾನವ ಸಹಿತ ಮಿಷನ್ ಪ್ರಾರಂಭಿಸುವ ಗುರಿ ಹೊಂದಲಾಗಿದೆಯೇ?
ಏಕೆ ಈ 39 ವರ್ಷಗಳ ಸುಧೀರ್ಘ ಅಂತರ ಆಯ್ತು ಎಂಬುದಕ್ಕೆ ಉತ್ತಮ ಕಾರಣವಿದೆ ಎಂದು ನಿಮಗೆ ತಿಳಿದಿದೆ ಎಂದು ಭಾವಿಸುವೆ. ಏಕೆಂದರೆ, ಡಾ ವಿಕ್ರಮ್ ಸಾರಾಭಾಯ್ ಅವರು ರೂಪಿಸಿದ ನೀಲನಕ್ಷೆಯನ್ನು ಆಧರಿಸಿ ಇಸ್ರೋ ಹೆಚ್ಚು ಕೇಂದ್ರೀಕೃತ ಕಾರ್ಯಕ್ರಮವನ್ನು ಮಾಡುತ್ತಿದೆ. ವಿಕ್ರಂ ಸಾರಭಾಯ್ ಅವರು ನಮ್ಮ ದೇಶದ ನಾಗರಿಕರ ಜೀವನವನ್ನು ಸುಧಾರಿಸಲು ಬಾಹ್ಯಾಕಾಶ ತಂತ್ರಜ್ಞಾನದ ಪ್ರಯೋಜನಗಳು ಲಭ್ಯವಾಗಬೇಕು ಎಂದು ಒತ್ತಾಯಿಸಿದರು. ಈ ಸಂಪೂರ್ಣ ಕಾರ್ಯಕ್ರಮವನ್ನು ದೇಶದ ಆರ್ಥಿಕತೆಯನ್ನು ಸುಧಾರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಶಿಕ್ಷಣ, ಆರೋಗ್ಯ, ವಿಪತ್ತು ನಿರ್ವಹಣೆ, ಸಂವಹನ ಸಂಪರ್ಕ, ಹವಾಮಾನ ಮುನ್ಸೂಚನೆಯ ವ್ಯಾಪ್ತಿಯನ್ನು ಇದು ಸುಧಾರಿಸುತ್ತದೆ. ಸಾರಭಾಯ್ ಅವರ ಬ್ಲೂಪ್ರಿಂಟ್‌ನ ಆರಂಭಿಕ ಭಾಗದ ಮೇಲೆ ಇಸ್ರೋ ಗಮನಹರಿಸಿದೆ.
ಉತ್ತರ ಪ್ರದೇಶದ ಎಲ್ಲಾ ಶಾಲೆಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್‌ನ ನೇರಪ್ರಸಾರ!
ಭಾರತವು ಬಹುಪಾಲು ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದರಿಂದ ಇಲ್ಲಿಯವರೆಗೆ ತಲುಪಿದ್ದು ಕಡಿಮೆ ಸಾಧನೆ ಅಲ್ಲ. ಅದಕ್ಕಾಗಿಯೇ ಮಾನವಸಹಿತ ಕಾರ್ಯಕ್ರಮವನ್ನು ಹಿಂದಿಡಲಾಗಿದೆ. ಆದರೆ ಈಗ ಡಾ ವಿಕ್ರಮ್ ಸಾರಾಭಾಯ್ (Vikram sarabhai) ಅವರ ಹೆಚ್ಚಿನ ಗುರಿಗಳನ್ನು ಅರಿತುಕೊಂಡ ನಂತರ, ನಾವು ನಮ್ಮದೇ ಉಪಗ್ರಹಗಳನ್ನು (Satellite)ವಿನ್ಯಾಸಗೊಳಿಸುತ್ತಿದ್ದೇವೆ, ನಾವು ಅವುಗಳನ್ನು ಕಕ್ಷೆಗೆ ಸೇರಿಸುತ್ತಿದ್ದೇವೆ. ನಾವು ಬಾಹ್ಯಾಕಾಶ ನೀತಿಯ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿರುತ್ತೇವೆ ಮತ್ತು ಅದು ಬಾಹ್ಯಾಕಾಶ ಪರಿಶೋಧನೆಗೆ ತುಂಬಾ ಅಗತ್ಯವಾಗಿದೆ.
ಜೂನ್ 2020 ರಲ್ಲಿ ಸರ್ಕಾರವು ಘೋಷಿಸಿದ ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಹೌದು. ಇದು ಆಗುವುದು ಅನಿವಾರ್ಯವಾಗಿತ್ತು ಎಂದು ನಾನು ಭಾವಿಸುತ್ತೇನೆ. ಕಾರಣ, ಈಗ ನಾವು ಉಡಾವಣಾ ಸೇವಾ ಪೂರೈಕೆದಾರರಾಗಿ ನಮ್ಮ ವಿಶ್ವಾಸಾರ್ಹತೆಯನ್ನು ಸ್ಥಾಪಿಸಿದ್ದೇವೆ ಮತ್ತು ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾಕುವುದು ಸೇರಿದಂತೆ ನಾವು ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಬಹಳ ಮಿತವ್ಯಯದಿಂದ ನಡೆಸುತ್ತೇವೆ ಮತ್ತು ಈ ಮಾರುಕಟ್ಟೆಯಲ್ಲಿ ನಾವು ಹೆಚ್ಚು ಸ್ಪರ್ಧಾತ್ಮಕರಾಗಿದ್ದೇವೆ. ನಮ್ಮ ಸೇವೆಗಳನ್ನು ಬಳಸಲು ಹಲವು ಗ್ರಾಹಕರು ಸರದಿಯಲ್ಲಿ ನಿಂತಿದ್ದಾರೆ.
ಭಾರತದ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮವು ಎದುರಿಸುತ್ತಿರುವ ಸವಾಲುಗಳು ಏನು?
ಒಂದು ತರಬೇತಿ ಪಡೆದ ಮಾನವಶಕ್ತಿ. ಈ ಹಿಂದೆ ನಾವು ಪ್ರತಿಭಾ ಪಲಾಯನದಿಂದ ಜನರನ್ನು ಕಳೆದುಕೊಂಡಿದ್ದೇವೆ. ಬಹಳಷ್ಟು ಭಾರತೀಯರು NASA ಗಾಗಿ ಕೆಲಸ ಮಾಡುತ್ತಿದ್ದಾರೆ. ಭವಿಷ್ಯದ ಸಂಶೋಧನಾ ಕಾರ್ಯಕ್ಕಾಗಿ ಸ್ಥಳೀಯ ಪ್ರತಿಭೆಗಳ ನೇಮಕಾತಿಯಾಗಬೇಕಿದೆ. ಕಲಾಂ ಅವರು ಪ್ರಸ್ತಾಪಿಸಿದಂತೆ ಪ್ರತಿಭೆಯನ್ನು ಆಕರ್ಷಿಸುವುದು, ಯುವಕರನ್ನು ಸೆಳೆಯುವುದು, ಅವರ ಕಲ್ಪನೆಯನ್ನು ಬೆಳಗಿಸುವುದು ಬಹಳ ಅವಶ್ಯಕ.