ಲ್ಯಾಂಡಿಂಗ್‌ ವೇಳೆ ಚಂದ್ರನ ಮೇಲೆ 2 ಟನ್‌ ಧೂಳೆಬ್ಬಿಸಿದ್ದ ವಿಕ್ರಮ್‌ ಲ್ಯಾಂಡರ್‌

By Santosh NaikFirst Published Oct 27, 2023, 6:41 PM IST
Highlights

ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವ ಸಮಯದಲ್ಲಿ ಅಂದಾಜು 2 ಟನ್‌ಗಳಷ್ಟು ಧೂಳನ್ನು ಎಬ್ಬಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದು ಚಂದ್ರನ ಮೇಲೆ ಅತ್ಯಂತ ಪ್ರಕಾಶಮಾನವಾದ ಸ್ಥಳವನ್ನು ನಿರ್ಮಾಣ ಮಾಡಿದ್ದು ಮಾತ್ರಲ್ಲದೆ, 108 ಚದರ ಮೀಟರ್‌ಗಳವರೆಗೆ ಈ ಧೂಳು ವ್ಯಾಪಿಸಿದೆ ಎಂದು ಅಂದಾಜಿಸಿದೆ.

ಬೆಂಗಳೂರು (ಅ.27): ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ ವೇಳೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಸಮಯದಲ್ಲಿ ಅಂದಾಜು 2.06 ಟನ್‌ಗಳಷ್ಟು ಚಂದ್ರನ ಮಣ್ಣು ಅಥವಾ ಧೂಳನ್ನು ಎಬ್ಬಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರಿಂದಾಗಿ ವಿಕ್ರಮ್‌ ಲ್ಯಾಂಡರ್‌ ಇದ್ದ ವಲಯದಲ್ಲಿ ದೊಡ್ಡ ಮಟ್ಟದ ಪ್ರಕಾಶಮಾನವಾದ ಪ್ರಭಾವಲಯ ನಿರ್ಮಾಣವಾಗಿತ್ತು. ಶಿವಶಕ್ತಿ ಪಾಯಿಂಟ್‌ನಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವಾಗ ಎದ್ದಿರುವ ಧೂಳಿನ ಮೋಡವು ಸುಮಾರು 108.4 ಚದರ ಮೀಟರ್‌ ಪ್ರದೇಶದ್ಲಿ ಹರಡಿತ್ತು ಎಂದು ಇಸ್ರೋ ತಿಳಿಸಿದೆ. ಈ ಪ್ರಕಾಶಮಾನವಾದ ಪ್ರಭಾವಲಯ ಲ್ಯಾಂಡರ್ ಸುತ್ತಲೂ ಪ್ರಕಾಶಮಾನವಾದ ತೇಪೆಯಂತೆ ಕಾಣಿಸಿಕೊಂಡಿರುವ ದಾಖಲೆಯನ್ನು ಇಸ್ರೋ ಹಂಚಿಕೊಂಡಿದೆ. ಭಾರತದ ಚಂದ್ರಯಾನ-3 ಮಿಷನ್ ಮೂಲಕ ಚಂದ್ರನಿಗೆ ಕಳುಹಿಸಲಾದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಿತು. ಇದರ ನಂತರ ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ತಾಪಮಾನ ಮತ್ತು ಖನಿಜಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈಗಾಗಲೇ ಭೂಮಿಗೆ ಕಳುಹಿಸಿದೆ.

ವಿಕ್ರಮ್ ಹೆಸರಿನ ಲ್ಯಾಂಡರ್ ಮಾಡ್ಯೂಲ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶಿವ ಶಕ್ತಿ ಪಾಯಿಂಟ್‌ ಮುಟ್ಟಿತ್ತು.  ಆ ಮೂಲಕ ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ಹಾಗೂ ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಭಾರತ ಭಾಜನವಾಯಿತು.

ಇಳಿಯುವ ಪ್ರಕ್ರಿಯೆ ಆರಂಭವಾದಂತೆ, ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಅದ್ಭುತವಾದ 'ಎಜೆಕ್ಟಾ ಹಾಲೋ' ಅನ್ನು ನಿರ್ಮಾಣ ಮಾಡಿತು. ಈ ವಿದ್ಯಮಾನವನ್ನು ಇಸ್ರೋದ ಒಂದು ಭಾಗವಾದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿಗಳು ಸೆರೆಹಿಡಿದು ವಿಶ್ಲೇಷಿಸಿದ್ದಾರೆ. ಅವರ ಸಂಶೋಧನೆಗಳ ಪ್ರಕಾರ, ಸುಮಾರು 2.06 ಟನ್‌ಗಳಷ್ಟು ಚಂದ್ರನ ಎಪಿರೆಗೋಲಿತ್ (ಚಂದ್ರನ ಧೂಳು) ನಿರ್ಮಾಣವಾಗಿದ್ದು, ಇದು ಲ್ಯಾಂಡಿಂಗ್ ಸೈಟ್‌ನ ಸುತ್ತಲಿನ 108.4 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಕವಾಗಿ ಬಿದ್ದಿತ್ತು.

ಚಂದ್ರಯಾನ-2ನ ಮುಂದವರಿದ ಭಾಗವಾಗಿ ಚಂದ್ರಯಾನ-3 ನಡೆದಿತ್ತು. ಈ ಬಾರ ಭಾರತ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಅನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿತ್ತು. ಚಂದ್ರಯಾನ-2 ಆರ್ಬಿಟರ್‌ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾದಿಂದ (OHRC) ಲ್ಯಾಂಡಿಂಗ್ ಪೂರ್ವ ಮತ್ತು ನಂತರದ ಹೆಚ್ಚಿನ ರೆಸಲ್ಯೂಶನ್ ಚಿತ್ರಣವನ್ನು ವಿಜ್ಞಾನಿಗಳು ಹೋಲಿಕೆ ಮಾಡಿ ನೋಡಿದ್ದಾರೆ.. ಲ್ಯಾಂಡಿಂಗ್ ಈವೆಂಟ್‌ಗೆ ಗಂಟೆಗಳ ಮೊದಲು ಮತ್ತು ನಂತರ ಚಿತ್ರಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಇದು ಈ 'ಎಜೆಕ್ಟಾ ಹಾಲೋ' ಲ್ಯಾಂಡರ್ ಅನ್ನು ಸುತ್ತುವರೆದಿರುವ ಅನಿಯಮಿತ ಪ್ರಕಾಶಮಾನವಾದ ಪ್ಯಾಚ್‌ನಂತೆ ಗೋಚರಿಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್‌ ಲ್ಯಾಂಡಿಂಗ್‌ ಸಾಧಿಸುವುದು, ಚಂದ್ರನ ಮೇಲೆ ರೋವರ್‌ನ ಚಲನಶೀಲತೆಯನ್ನು ಪ್ರದರ್ಶಿಸುವುದು ಮತ್ತು ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಮಿಷನ್ ಉದ್ದೇಶಗಳಾಗಿದ್ದವು.

ವಿಕ್ರಂ ಮತ್ತು ಪ್ರಗ್ಯಾನ್‌ಗೆ ಆಕಾಶಕಾಯದ ಅಪಾಯ, ಇಸ್ರೋ ವಿಜ್ಞಾನಿಗಳ ಕಳವಳ

'ಎಜೆಕ್ಟಾ ಹಾಲೋ' ವಿದ್ಯಮಾನದ ವಿವರವಾದ ವಿಶ್ಲೇಷಣೆಯನ್ನು ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. "OHRC ಚಿತ್ರಣವನ್ನು ಬಳಸಿಕೊಂಡು ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸುತ್ತಲೂ ಚಂದ್ರನ ಮೇಲ್ಮೈಯಲ್ಲಿ ಎಜೆಕ್ಟಾ ಹಾಲೋ ಗುಣಲಕ್ಷಣಗಳು" ಎಂಬ ಶೀರ್ಷಿಕೆಯ ಅಧ್ಯಯನವು ಚಂದ್ರನ ಮೇಲ್ಮೈಯಲ್ಲಿ ಚಂದ್ರನ ಇಳಿಯುವಿಕೆಯ ಪ್ರಭಾವದ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನೀಡಿದೆ.

ಚಂದ್ರಯಾನ-3ಕ್ಕಿಂತ ಮೂರು ಪಟ್ಟು ದೂರ ಕ್ರಮಿಸಿದ ಆದಿತ್ಯ ಎಲ್‌-1, ಇಸ್ರೋ ಮಾಹಿತಿ!

click me!