ಅಪ್ಪು ಹೆಸರಲ್ಲಿ ನಟ ಪ್ರಕಾಶ್ ರಾಜ್ ಮಹತ್ವದ ಕಾರ್ಯ; ಆಸ್ಪತ್ರೆಗೆ ಆಂಬ್ಯುಲೆನ್ಸ್ ನೀಡಿದ ನಟ

By Shruiti G KrishnaFirst Published Aug 6, 2022, 4:46 PM IST
Highlights

ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅಪ್ಪು ಹೆಸರಿನಲ್ಲಿ ಮಹತ್ವಕ ಕೆಲಸ ಮಾಡಿದ್ದಾರೆ. ಹೌದು, ನಟ ಪ್ರಕಾಶ್ ರಾಜ್ ಅಪ್ಪ ಹೆಸರಿನಲ್ಲಿ ಅಪ್ಪು ಎಕ್ಸ ಪ್ರೆಸ್ ಎನ್ನವ ಆಂಬ್ಯುಲೆನ್ಸ್ ಅನ್ನು ಮೈಸೂರಿನ ಮಿಷನ್ ಆಸ್ಪತ್ರೆಗೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಮೇಲಿನ ಪ್ರೀತಿಯಿಂದ ಈ ಸೇವೆ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ಮೈಸೂರು ಜಿಲ್ಲೆಗೆ ಈ ಆಂಬ್ಯುಲೆನ್ಸ್ ನೀಡಿದ್ದೇವೆ ಇನ್ಮುಂದೆ 31 ಜಿಲ್ಲೆಯಗಳಿಗೂ ಈ ಸೇವೆ ಮುಂದುವರೆಸಲಿದ್ದೇವೆ ಎಂದು ಪ್ರಕಾಶ್ ರಾಜ್ ಹೇಳಿದರು. 
 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾನವೀಯ ಕೆಲಸಗಳು ಅನೇಕರಿಗೆ ಸ್ಫೂರ್ಥಿಯಾಗಿದೆ. ಅಪ್ಪು ಅಭಿಮಾನಿಗಳು, ಸ್ನೇಹಿತರು ಹಾಗೂ ಆಪ್ತರು ಅಪ್ಪು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಮುಂದುವರೆಸಿದ್ದಾರೆ. ಅಪ್ಪು ಹೆಸರಿನಲ್ಲಿ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅಪ್ಪು ಹೆಸರಿನಲ್ಲಿ ಮಹತ್ವಕ ಕೆಲಸ ಮಾಡಿದ್ದಾರೆ. ಹೌದು, ನಟ ಪ್ರಕಾಶ್ ರಾಜ್ ಅಪ್ಪ ಹೆಸರಿನಲ್ಲಿ ಅಪ್ಪು ಎಕ್ಸ ಪ್ರೆಸ್ ಎನ್ನವ ಆಂಬ್ಯುಲೆನ್ಸ್ ಅನ್ನು ಮೈಸೂರಿನ ಮಿಷನ್ ಆಸ್ಪತ್ರೆಗೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಮೇಲಿನ ಪ್ರೀತಿಯಿಂದ ಈ ಸೇವೆ ಪ್ರಾರಂಭ ಮಾಡಿರುವುದಾಗಿ ಹೇಳಿದ್ದಾರೆ. ಸದ್ಯ ಮೈಸೂರು ಜಿಲ್ಲೆಗೆ ಈ ಆಂಬ್ಯುಲೆನ್ಸ್ ನೀಡಿದ್ದೇವೆ ಇನ್ಮುಂದೆ 31 ಜಿಲ್ಲೆಯಗಳಿಗೂ ಈ ಸೇವೆ ಮುಂದುವರೆಸಲಿದ್ದೇವೆ ಎಂದು ಪ್ರಕಾಶ್ ರಾಜ್ ಹೇಳಿದರು. 

ಇಂದು ಮೈಸೂರಿನಲ್ಲಿ (ಆಗಸ್ಟ್ 6) ನಡೆದ ಕಾರ್ಯಕ್ರಮದಲ್ಲಿ ಅಪ್ಪು ಆ್ಯಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ ಸಹ ಜೊತೆಯಲ್ಲಿದ್ದರು.ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿ ಮಾನಾಡಿದ ನಟ ಪ್ರಕಾಶ್ ರಾಜ್,  'ಎಂದಿಂಗೂ ನಮ್ಮ ಜೊತೆ ಇರುವ ಕಥಾನಯಕ ಅಪ್ಪು. ಅಪ್ಪು ಅಗಲಿದಾಗ ರಾಜ್ಯ ಕಣ್ಣಿರಿಡ್ತು. ಅನಾಥ ಪ್ರಜ್ಞೆ ನಮ್ಮನ್ನು ಕಾಡಿತು.ಕರ್ನಾಟಕದ ಪ್ರತಿಯೊಬ್ಬರಿಗೂ ಸಾಕಷ್ಟು ನೋವಾಯಿತು.ಮಾತು ಹೊರಡದ ಮೌನ ಅಂದ್ರೆ ಅಪ್ಪು.ಅಪ್ಪು ಅವರನ್ನ ಬಾಲ್ಯದಿಂದ ನೋಡಿದ್ದೇನೆ.ಎತ್ತರಕ್ಕೆ ಬೆಳೆದ ವ್ಯಕ್ತಿಯನ್ನ ಕಳೆದುಕೊಂಡು ಸಮಾಜಕ್ಕೆ ಬಹಳ ನಷ್ಟವಾಗಿದೆ'ಎಂದರು. 

ನವೆಂಬರ್ 1ಕ್ಕೆ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಸಿಎಂ ಬೊಮ್ಮಾಯಿ

ಬಳಿಕ 'ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೆ.ಆ ಸಮಯದಲ್ಲಿ ಅಪ್ಪು ಅವರು ಕಾಲ್ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರ ಎಂದರು.ಎರೆಡು ಲಕ್ಷವನ್ನು ನಮ್ಮ ಫೌಂಡೇಶನ್ ಗೆ ಕೊಟ್ರು. ಈ ವಿಚಾರವನ್ನ ಎಲ್ಲಿಯೂ ಹೇಳಿಕೊಳ್ಳಲಿಲ್ಲ.ಅಪ್ಪು ಇದಿದ್ರೆ ಮಾಡುತ್ತಿದ್ದ ಕೆಲಸವನ್ನ ನಾವು ಮುಂದುವರೆಸಿಕೊಂಡು ಹೋಗಬೇಕು.ಬಡವರಿಗೋಸ್ಕರ ಅಂಬ್ಯುಲೆನ್ಸ್ ಕೊಡಲು ನಿರ್ಧರಿಸಿದೆ.ಇದು ಕೇವಲ ಆರಂಭ.32 ಜಿಲ್ಲೆಗಳಲ್ಲಿ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಓಡಾಡಬೇಕು.ಮಿಷನ್ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ.ಅಪ್ಪು ಪ್ರೀತಿಸುವ ಜನರಿಗೆ ಸಹಾಯವಾಗಲಿ.ಅಪ್ಪು ವ್ಯಕ್ತಿತ್ವವನ್ನ, ನಮ್ಮೊಳಗೆ ಬೆಳೆಸಿಕೊಳ್ಳಬೇಕು.ಅಪ್ಪು ಮಾಡಿದ ಕೆಲಸಗಳಿಗೆ ಧನ್ಯವಾದ ಹೇಳುವುದು ಈ ರೀತಿ ಸಮಾಜಿಕ ಮುಖಿ ಕೆಲಸಗಳಿಂದ.ಅಪ್ಪು ಹೆಸರಿನ ಮೂಲಕ ಒಳ್ಳೆಯ ವಾತಾವರಣ ನಿರ್ಮಾಣ ಮಾಡೊಣ ಎಂದು ಹೇಳಿದರು. 

ಅಭಿಮಾನಿಗಳ ಪ್ರೀತಿಗೆ ಕೊನೆಯಿಲ್ಲ; ಅಪ್ಪು ಭಾವಚಿತ್ರ ಹಿಡಿದು ಕಾವಡಿ ಸಲ್ಲಿಸಿದ ಆಂಧ್ರ ಫ್ಯಾನ್ಸ

ಇದೇ ವೇಳೆ ಹಾಜರಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡಿ,'ಸರ್ ಫೋನ್ ಮೂಲಕ ಅಪ್ಪು ಎಕ್ಸಪ್ರೆಸ್ ಶುರು ಮಾಡೋಣ ಅಂದ್ರು.ಆಂಬ್ಯುಲೆನ್ಸ್ ಗೆ ಅಪ್ಪು ಎಕ್ಸ್‌ಪ್ರೆಸ್‌ ಅಂಥ‌ ಹೆಸರಿಟ್ಟಿದ್ದೇವೆ.ಮೈಸೂರಿನಿಂದ ಈ ಕೆಲಸ ಆರಂಭ ಅಗಿದೆ.32 ಜಿಲ್ಲೆಗಳಲ್ಲೂ ಅಪ್ಪು ಎಕ್ಸ್ ಪ್ರೆಸ್ ಓಡಾಡುತ್ತೆ.ಅಪ್ಪು ಅವರು ಜನರ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ.ಅಪ್ಪು ಕೊಟ್ಟಿದ್ದನ್ನ ಎಲ್ಲಿಯೂ ಹೇಳಿಕೊಂಡಿಲ್ಲ.ಬಲಗೈಲ್ಲಿ ಕೊಟ್ಟಿದ್ದು ಎಡಗೈ ಗೊತ್ತಾಗದಂತೆ ಕೆಲಸ ಮಾಡಿದ್ದಾರೆ.
ಸಪ್ಲೈಯರ್ ಒಬ್ರು ನಮ್ಮ ತಂದೆ ಅಪರೇಷನ್ ಗೆ 50 ಸಾವಿರ ಕೊಟ್ಟಿದ್ದಾರೆ ಎಂದು ನೆನಸಿಕೊಂಡು ಕಣ್ಣೀರು ಹಾಕಿದರು.ಅಪ್ಪು ಸರ್ ವ್ಯಕ್ತಿತ್ವವನ್ನ ಎಲ್ಲರಲ್ಲೂ ಕಾಣಲೂ ಈ ರೀತಿ ಮಾಡುತ್ತಿದ್ದೇವೆ.
ಅಪ್ಪು ಅವರ ವ್ಯಕ್ತಿತ್ವ ಇಡೀ ಭಾರತಕ್ಕೆ ಗೊತ್ತಾಗಬೇಕು.ಅಪ್ಪು ಅವರ ಜೊತೆ ಎರೆಡು ಸಿನಿಮಾ ಮಾಡಿದ್ದೇವೆ.ಪುನೀತ್  ಮಾಹನ್ ವ್ಯಕ್ತಿ.ಅಪ್ಪು ನಿಸ್ವಾರ್ಥ ಸೇವೆ ನೀಡಿದ್ದಾರೆ' ಎಂದರು. 

click me!