ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿ ಮಾಜಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ತಾನು ಈಗಾಗಲೇ ಮರುಮದುವೆಯಾಗಿದ್ದೇನೆ ಮತ್ತು ಆದ್ದರಿಂದ ಮೇಲ್ಮನವಿಯನ್ನು ಬಾಕಿ ಇರಿಸಿಕೊಳ್ಳುವಲ್ಲಿ ಯಾವುದೇ ಉದ್ದೇಶ ಪೂರೈಸಲಾಗುವುದಿಲ್ಲ ಎಂದು ಮಹಿಳೆ ವಾದಿಸಿದ್ದರು.
ಮುಂಬೈ (ಏಪ್ರಿಲ್ 19, 2023): ಹಿಂದೂ ವಿವಾಹ ಕಾಯ್ದೆ 1955ರ ಆದೇಶದಂತೆ ಮೇಲ್ಮನವಿ ಅವಧಿ ಮುಗಿಯುವವರೆಗೂ ಕಾಯದೆ ಮರುಮದುವೆಯಾದ ಮಹಿಳೆಯೊಬ್ಬರಿಗೆ ಸಂಕಷ್ಟ ಎದುರಾಗಿದೆ. ಆಕೆಯ ವಿಚ್ಛೇದನದ ತೀರ್ಪಿನ ಮೇಲಿನ ತಡೆಯಾಜ್ಞೆಯನ್ನು ತೆರವು ಮಾಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೋರ್ಟ್ ಆದೇಶ ನೀಡಿದ ದಿನಾಂಕದಿಂದ 90 ದಿನಗಳ ಅವಧಿಯವರೆಗೆ ಸಮಯವಿದೆ.
ಆದರೆ, ತಾನು ಎರಡನೇ ಮದುವೆಯಾಗಿದ್ದು ಎರಡನೇ ಪತಿಯೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಗಂಡನ ಮೇಲ್ಮನವಿಯನ್ನು ವಜಾಗೊಳಿಸುವಂತೆ ಮಹಿಳೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ, 2019 ರಲ್ಲಿ ಕೌಟುಂಬಿಕ ನ್ಯಾಯಾಲಯವು ಅಂಗೀಕರಿಸಿದ ವಿಚ್ಛೇದನದ ತೀರ್ಪಿನ ಮೇಲೆ ನೀಡಲಾದ ತಡೆಯಾಜ್ಞೆಯನ್ನು ತೆರವು ಮಾಡಲು ನ್ಯಾಯಮೂರ್ತಿಗಳಾದ ಆರ್‌ಡಿ ಧನುಕಾ ಮತ್ತು ಮಿಲಿಂದ್ ಸಾಥಾಯೆ ಅವರ ಪೀಠ ನಿರಾಕರಿಸಿದೆ.
ಇದನ್ನು ಓದಿ: ತಾಳಿ ಕಟ್ಟಲು ಪೆರೋಲ್: ಅಪರಾಧಿ ಮದ್ವೆಯಾಗಲು ಕೋರ್ಟ್ ಮೊರೆ ಹೋದ ಮಹಿಳೆ; ಹೈಕೋರ್ಟ್‌ನಿಂದ ಶಾದಿ ಭಾಗ್ಯ
ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿ ಮಾಜಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ತಾನು ಈಗಾಗಲೇ ಮರುಮದುವೆಯಾಗಿದ್ದೇನೆ ಮತ್ತು ಆದ್ದರಿಂದ ಮೇಲ್ಮನವಿಯನ್ನು ಬಾಕಿ ಇರಿಸಿಕೊಳ್ಳುವಲ್ಲಿ ಯಾವುದೇ ಉದ್ದೇಶ ಪೂರೈಸಲಾಗುವುದಿಲ್ಲ ಎಂದು ಮಹಿಳೆ ವಾದಿಸಿದ್ದರು.
"ಕಾನೂನಿನ ಮಿತಿಮೀರಿದ ನಿಬಂಧನೆ"
"ಈ ಮಧ್ಯಂತರ ಅರ್ಜಿಯು ಅರ್ಜಿದಾರರಲ್ಲಿ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಈ ರೀತಿಯ ಕಷ್ಟಕರವಾದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಕಾನೂನಿನ ನಿಬಂಧನೆಗಳನ್ನು ಅತಿಕ್ರಮಿಸಲು ಪ್ರಯತ್ನಿಸುತ್ತದೆ. ಇದರಿಂದಾಗಿ ಬಾಕಿ ಉಳಿದಿರುವ ಪ್ರಕ್ರಿಯೆಗಳು ನಿರುಪಯುಕ್ತವಾಗುತ್ತವೆ. ಪ್ರಸ್ತುತ ಪ್ರಕರಣದಲ್ಲಿ, ವಿಚ್ಛೇದನ ಪ್ರಕ್ರಿಯೆಯಿಂದ ಉಂಟಾಗುವ ವೈವಾಹಿಕ ವಿವಾದದಲ್ಲಿ ಹೆಂಡತಿಯಿಂದ ಅಂತಹ ಪ್ರಯತ್ನವನ್ನು ಮಾಡಲಾಗಿದೆ’’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್
ಪ್ರಕರಣದ ಹಿನ್ನೆಲೆ..
ದಂಪತಿ ಆಗಸ್ಟ್ 2006 ರಲ್ಲಿ ವಿವಾಹವಾದರು ಮತ್ತು ಮೇ 2008 ರಲ್ಲಿ ಒಬ್ಬ ಮಗ ಜನಿಸಿದ್ದಾನೆ. ಆದರೆ, ಗಂಡನ ಕ್ರೂರ ವರ್ತನೆಯ ಆರೋಪ ಮಾಡಿ ಮಹಿಳೆ ತನ್ನ ಪತಿಯ ಮನೆಯನ್ನು ತೊರೆದರು ಮತ್ತು ವಿಚ್ಛೇದನ ಹಾಗೂ ಮಕ್ಕಳ ಪಾಲನೆಗಾಗಿ ಅರ್ಜಿ ಸಲ್ಲಿಸಿದರು. ಜುಲೈ 12, 2019 ರಂದು ಕೌಟುಂಬಿಕ ನ್ಯಾಯಾಲಯ ಈ ದಂಪತಿಗೆ ವಿಚ್ಛೇದನ ನೀಡಿತು ಮತ್ತು ಮಗುವಿನ ಪಾಲನೆಯ ಅವಕಾಶವನ್ನು ಆಕೆಗೆ ನೀಡಿತು. ಅಲ್ಲದೆ, ವಾರಾಂತ್ಯದಲ್ಲಿ ಪತಿ ಮಗುವನ್ನು ನೋಡುವ ಅವಕಾಶವನ್ನೂ ನೀಡಿತ್ತು. ಇನ್ನು, ಈ ಆದೇಶದ ಮೇಲ್ಮನವಿಗಾಗಿ 90 ದಿನಗಳ ಅವಧಿಯು ಅಕ್ಟೋಬರ್ 11, 2019 ರಂದು ಮುಕ್ತಾಯಗೊಳ್ಳಬೇಕಾಗಿತ್ತು.
ಆದರೆ, ಈ ಅವಧಿ ಮುಕ್ತಾಯಕ್ಕೂ ಮುನ್ನವೇ ಅಂದರೆ ಅಕ್ಟೋಬರ್ 6, 2019 ರಂದು, ಆಕೆ ಭಾರತೀಯ ಮೂಲದ ಜರ್ಮನ್ ಪ್ರಜೆಯನ್ನು ವಿವಾಹವಾದರು. ಹಾಗೂ, ತನಗೆ
ಪತಿ ಸಲ್ಲಿಸಿರುವ ಮೇಲ್ಮನವಿ ಬಗ್ಗೆ ತನಗೆ ತಿಳಿದಿರಲಿಲ್ಲ. ಅಕ್ಟೋಬರ್ 9, 2019 ರಂದು ಮೇಲ್ಮನವಿ ಪತ್ರಗಳನ್ನು ನೀಡಲಾಯಿತು ಎಂದು ಅವಲತ್ತುಕೊಂಡಿದ್ದಾರೆ. ಅಕ್ಟೋಬರ್ 11, 2019 ರಂದು ವಿಚಾರಣೆಯ ಸಂದರ್ಭದಲ್ಲಿ, ಪತಿ ಸಲ್ಲಿಸಿದ ಮೇಲ್ಮನವಿಯ ಬಗ್ಗೆ ತನಗೆ ತಿಳಿದಿರಲಿಲ್ಲ ಮತ್ತು ಮರುಮದುವೆಯಾಗಿದ್ದೇನೆ ಎಂದು ಅವರು ಹೈಕೋರ್ಟ್‌ಗೆ ತಿಳಿಸಿದರು.
ಆದರೂ, ವಿಚ್ಛೇದನದ ತೀರ್ಪಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತು ಮತ್ತು ಮಗುವನ್ನು ದೇಶದಿಂದ ಹೊರಗೆ ಕರೆದೊಯ್ಯದಂತೆ ನಿರ್ಬಂಧಿಸಿದೆ.
ಇದನ್ನೂ ಓದಿ: ಮತ್ತೊಂದು ಮರ್ಯಾದಾ ಹತ್ಯೆ: ಹೆತ್ತ ತಾಯಿ, ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ!
ಪತಿ ಪರ ವಾದ ಮಂಡಿಸಿದ ವಕೀಲರು, ಮಹಿಳೆಯು ತೀರ್ಪಿನ ದಿನಾಂಕದಿಂದ 90 ದಿನಗಳು ಆಗುವ ಮೊದಲೇ ತರಾತುರಿಯಲ್ಲಿ ಮದುವೆಯಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ, ಪತಿಗೆ ಗೊತ್ತಿಲ್ಲದೆ ತಕ್ಷಣವೇ ಮಗುವಿನ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ಮೂಲಕ ಮಗುವನ್ನು ತಂದೆ ನೋಡದಂತೆ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆ ಆಕೆಯ ನಡವಳಿಕೆಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಎಂದು ವಕೀಲರು ಒತ್ತಾಯಿಸಿದರು.
ಈ ವಾದಕ್ಕೆ ಒಪ್ಪಿದ ಹೈಕೋರ್ಟ್, ಮೇಲ್ಮನವಿ ಅವಧಿ ಮುಗಿಯುವವರೆಗೂ ಪತ್ನಿ ಕಾಯದೆ ಮರುಮದುವೆಯಾಗಿದ್ದಾಳೆ ಮತ್ತು "ಕಾನೂನಿಗೆ ವಿರುದ್ಧವಾಗಿ ಅಪಾಯಕ್ಕೆ ಸಿಲುಕಿದ್ದಾರೆ" ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಒಟ್ಟಾರೆ, ವಿಚ್ಛೇದನದ ತೀರ್ಪಿನ ಮೇಲಿನ ತಡೆಯನ್ನು ತೆರವು ಮಾಡಲು ಹೈಕೋರ್ಟ್ ನಿರಾಕರಿಸಿದ್ದು, ಪತಿಯ ಮೇಲ್ಮನವಿಯ ವಿಚಾರಣೆಯನ್ನು ತ್ವರಿತಗೊಳಿಸಿತು.
ಇದನ್ನೂ ಓದಿ: 25 ವರ್ಷಗಳಿಂದ ಮನೆಗೆಲಸ ಮಾಡಿದ ಮಾಜಿ ಪತ್ನಿಗೆ 1.75 ಕೋಟಿ ರೂ. ಪಾವತಿಗೆ ಕೋರ್ಟ್ ಆದೇಶ