ಒಮ್ಮೆ ಗಂಡ-ಹೆಂಡ್ತಿ ಸಂಬಂಧ ಮುರಿದರೆ ಕಟ್ಟೋದು ಕಷ್ಟ, ಸರಿ ಮಾಡಲು ಹೀಗೂ ಯತ್ನಿಸಬಹುದು!

By Suvarna News  |  First Published Apr 19, 2023, 11:22 AM IST

ಸಂಬಂಧದಲ್ಲಿ ಒಮ್ಮೆ ನಂಬಿಕೆ ದ್ರೋಹವಾದ್ರೆ ಮತ್ತೊಮ್ಮೆ ಅವರ ವಿಶ್ವಾಸ ಗಳಿಸೋದು ಸುಲಭವಲ್ಲ. ನೀವೆಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ನಿರಾಸೆ ನಿಮಗಾಗಬಹುದು. ಆದ್ರೆ ಕೆಲವೊಂದು ಟ್ರಿಕ್ಸ್ ಫಾಲೋ ಮಾಡಿದ್ರೆ ನೀವು ಮುರಿದ ಸಂಬಂಧವನ್ನು ಮತ್ತೆ ಜೋಡಿಸಬಹುದು.
 


ಸಂಬಂಧ ಯಾವುದೇ ಇರಲಿ ಅದ್ರಲ್ಲಿ ನಂಬಿಕೆ, ವಿಶ್ವಾಸ ಮುಖ್ಯವಾಗುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡ್ರೆ ಅದನ್ನು ಮರಳಿ ಪಡೆಯೋದು ಸುಲಭವಲ್ಲ. ಯಾವುದೋ ಕಾರಣಕ್ಕೆ ಆಪ್ತರ ನಂಬಿಕೆಯ ಮೇಲೆ ಹೊಡೆತ ನೀಡಿರುತ್ತೇವೆ. ಆದ್ರೆ ಆ ಸಂಬಂಧದಿಂದ ಹೊರಗೆ ಹೋಗುವ ಮನಸ್ಸು ನಮಗಿರೋದಿಲ್ಲ. ಸಂಬಂಧವನ್ನು ಮತ್ತೆ ಗಟ್ಟಿಗೊಳಿಸುವ, ದೀರ್ಘಕಾಲ ಉಳಿಸುವ ಬಯಕೆ ನಮಗಿರುತ್ತದೆ. ಕಳೆದುಕೊಂಡ ನಂಬಿಕೆ, ವಿಶ್ವಾಸವನ್ನು ಮತ್ತೆ ಪಡೆಯೋದು ಸುಲಭದ ಕೆಲಸವಲ್ಲ. ಅದಕ್ಕೆ ನಾವು ಮೊದಲು ಅಣಿಯಾಗಬೇಕು. ಸಂಬಂಧ ಮೊದಲಿನಂತಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆ ತಿಳಿದಿರಬೇಕು. ಮತ್ತೊಮ್ಮೆ ನಂಬಿಕೆ ಗಳಿಸುವುದ ಕಷ್ಟವಾದ್ರೂ ಅಸಾಧ್ಯವಲ್ಲ. ನೀವೂ ನಿಮ್ಮ ಸಂಗಾತಿ ನಂಬಿಕೆ ಗಳಿಸಲು ಬಯಸಿದ್ದರೆ ಕೆಲ ಟಿಪ್ಸ್ ಫಾಲೋ ಮಾಡಿ.

ತಪ್ಪು ಒಪ್ಪಿಕೊಳ್ಳೋದು ಮುಖ್ಯ: ಒಂದು ಸಂಬಂಧ (Relationship) ಹಾಳಾಗ್ತಿದೆ ಅಂದ್ರೆ ಅದಕ್ಕೆ ಇಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಕಾರಣವಾಗಿರ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ನಂತರ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ತಪ್ಪು ನಿಮ್ಮಿಂದ ಆಗಿದೆ ಎಂದಾದ್ರೆ ಅದನ್ನು ಮೊದಲು ಒಪ್ಪಿಕೊಳ್ಳಿ. ನೀವು ನಿಮ್ಮವರ ಮುಂದೆ ತಪ್ಪು (Wrong)  ಒಪ್ಪಿಕೊಂಡಾಗ ಅವರು ಗಿಲ್ಟ್ ಫೀಲ್ ಮಾಡ್ತಾರೆ. ನನ್ನಿಂದಲೂ ಅರ್ಧ ತಪ್ಪಾಗಿದೆ ಎನ್ನುವ ಮೂಲಕ ನಿಮ್ಮ ಹತ್ತಿರ ಬರ್ತಾರೆ. ತಪ್ಪನ್ನು ಮತ್ತೆ ಮಾಡುವುದಿಲ್ಲವೆನ್ನುವ ಭರವಸೆ ನೀಡಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಮುರಿದು ಹೋದ ಸಂಬಂಧವನ್ನು ಮರುಜೋಡಣೆ ಮಾಡುವಾಗ ಸಾಕಷ್ಟು ಪ್ರಯತ್ನ ಮುಖ್ಯವಾಗುತ್ತದೆ. ನೀವೂ ನಿಮ್ಮ ಸಂಗಾತಿಗೆ ಎರಡನೇ ಅವಕಾಶ ನೀಡಿದ್ರೆ ಮಾತ್ರ ಇದು ಸಾಧ್ಯವಾಗುತ್ತದೆ.

Tap to resize

Latest Videos

ಬೆಕ್ಕು ಅಪಶಕುನ ಅಂತಾರೆ, ಈ ದಂಪತಿ ಲೈಫಲ್ಲೂ ಮಾರ್ಜಾಲದಿಂದಾಯ್ತು ಡಿವೋರ್ಸ್!

ನಿಮ್ಮ ನ್ಯೂನ್ಯತೆಯಿಂದ ಹೊರ ಬನ್ನಿ : ನಿಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿಯಿದ್ದಾನೆ ಎಂದಾಗ ಅಥವಾ ನೀವು ಯಾವುದೋ ವಿಷ್ಯಕ್ಕೆ ಸುಳ್ಳು ಹೇಳ್ತಿದ್ದೀರಿ ಎಂದಾಗ ಅದನ್ನು ಒಪ್ಪಿಕೊಳ್ಳಿ. ನಿಮ್ಮ ಸಮಸ್ಯೆಯನ್ನು ನಿಮ್ಮವರ ಮುಂದೆ ಹೇಳಿ. ನಿಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿದಾಗ ಎಲ್ಲ ಸಂಬಂಧಗಳನ್ನು ಸುಲಭವಾಗಿ ನಿಭಾಯಿಸಬಹುದು. ನಿಮ್ಮ ನ್ಯೂನ್ಯತೆಗೆ ನೀವೇ ಜವಾಬ್ದಾರರು. ಹಾಗಾಗಿ ಮೊದಲು ನಿಮ್ಮನ್ನು ತಿದ್ದಿಕೊಂಡು ನಂತ್ರ  ಬೇರೆಯವರನ್ನು ತಿದ್ದುವ ಪ್ರಯತ್ನ ನಡೆಸಿ.

ಇಲ್ಲಿ ನೀವು ಮಾತ್ರ ಮುಖ್ಯವಲ್ಲ : ಬಹುತೇಕ ಜನರು ತಮ್ಮ ಆದ್ಯತೆಗೆ ಮಾತ್ರ ಮಹತ್ವ ನೀಡುತ್ತಾರೆ. ತಮ್ಮ ಜೊತೆಗಿರುವ ವ್ಯಕ್ತಿಗೆ ಏನು ಬೇಕು ಎಂಬುದನ್ನು ತಿಳಿಯಲು ಹೋಗೋದಿಲ್ಲ. ನೀವು ಸಂಬಂಧದಲ್ಲಿದ್ದು, ನಿಮ್ಮ ಸಂಗಾತಿ ವಿಶ್ವಾಸವನ್ನು ಮತ್ತೆ ಗಳಿಸಲು ಪ್ರಯತ್ನಿಸುತ್ತೀರಿ ಎಂದಾದ್ರೆ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ಅವರ ಸ್ಥಾನದಲ್ಲಿ ನಿಲ್ಲಿಸಿ ನೋಡಿ.

ಮೇಷದಿಂದ ಸಿಂಹದವರೆಗೆ; ಈ ರಾಶಿಯ ಒಡಹುಟ್ಟಿದವರನ್ನು ಹೊಂದಲು ಪುಣ್ಯ ಮಾಡಿರಬೇಕು!

ಒಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸಿ : ಇಬ್ಬರು ಒಟ್ಟಿಗೆ ಇದ್ದಾಗ ಪರಸ್ಪರ ಅರ್ಥವಾಗುತ್ತೀರಿ. ಬರೀ ಮಾತು ಮಾತ್ರವಲ್ಲ ನಿಮ್ಮ ನಡವಳಿಕೆ, ವರ್ತನೆಗಳಿಂದ ನಿಮ್ಮ ಸಂಗಾತಿ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಿಂದೆ ಮಾಡಿದಂತೆ ಸಂಗಾತಿಗೆ ಸಮಯ ನೀಡದೆ ಯಡವಟ್ಟು ಮಾಡಿಕೊಳ್ಳಬೇಡಿ. ಸಂಬಂಧ ಮತ್ತೆ ನಂಬಿಕೆ, ವಿಶ್ವಾಸ (Confidence) ದಿಂದ ಇರಬೇಕೆಂದ್ರೆ ನಿಮ್ಮ ಕೆಲಸದ ಮಧ್ಯೆ ಸಂಗಾತಿಗೆ ಸಮಯ ನೀಡಿ, ಅವರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಆದ್ರೆ ಯಾವುದೇ ಕಾರಣಕ್ಕೂ ಇದ್ರಲ್ಲಿ ನಾಟಕ ಬೇಡ. ಅವರನ್ನು ಮೆಚ್ಚಿಸುವುದಕ್ಕೋಸ್ಕರ ನಾಟಕವಾಡಬೇಡಿ.

ಮೂರನೇಯವರ ಮಾತಿಗೆ ಕಿವಿಗೊಡಬೇಡಿ : ಪ್ರತಿಯೊಬ್ಬ ವ್ಯಕ್ತಿ ಅಕ್ಕಪಕ್ಕ ಅನೇಕ ಜನರಿರುತ್ತಾರೆ. ನೀವು ಒಂದು ಹೇಳಿದ್ರೆ ಅವರು ನಾಲ್ಕು ಮಾತನಾಡ್ತಾರೆ. ಅನೇಕ ಬಾರಿ ನಿಮ್ಮಿಬ್ಬರ ಸಂಬಂಧ ಹಾಳಾಗಲು ಅವರೇ ಕಾರಣವಾಗಿರ್ತಾರೆ. ಸಂಬಂಧವನ್ನು ಮತ್ತೆ ಬೆಸೆಯುವ ಸಮಯದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಬೇರೆ ವ್ಯಕ್ತಿ ತೋರಿಸಿದ ದಾರಿಯಲ್ಲಿ ನಡೆಯುವ ಬದಲು ನಿಮ್ಮ ಸ್ವಂತ ಬುದ್ದಿ ಉಪಯೋಗಿಸಿ ಕೆಲಸ ಮಾಡಿ. 
 

click me!