ಡಿಸೆಂಬರ್‌ವರೆಗೆ ವೃದ್ಧರನ್ನು ಮನೆಯಿಂದ ಹೊರ ಬಿಡಬೇಡಿ!

By Suvarna NewsFirst Published Apr 30, 2020, 5:01 PM IST
Highlights

ಜಗತ್ತಿನ ಎಲ್ಲೆಡೆ ಇರುವ ತಜ್ಞರು ಹೇಳುವುದು ಒಂದೇ- ನೀವು ಬೇಕಾದರೆ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಲಾಕ್‌ಡೌನ್‌ ಸಡಿಲ ಮಾಡಿಕೊಳ್ಳಿ. ಆದರೆ ವೃದ್ಧರನ್ನು ಮಾತ್ರ ಐಸೋಲೇಶನ್‌ ಮಾಡಿ ರಕ್ಷಿಸಿಕೊಳ್ಳಿ ಅಂತ. ಭಾರತದಲ್ಲಿ ಕೂಡ ಸರಕಾರ ಮುಂದಿನ ಎರಡು ತಿಂಗಳು ವೃದ್ಧರನ್ನು ಮನೆಯೊಳಗೇ ಸುರಕ್ಷಿತವಾಗಿ ಇಟ್ಟು ನೋಡಿಕೊಳ್ಳಿ ಎನ್ನುತ್ತಿದೆ.

ಕೊರೊನಾ ವೈರಸ್‌ ಹುಡುಕಿ ಹುಡುಕಿ ಆರೋಗ್ಯ ಸಮಸ್ಯೆಗಳಿರುವ ವೃದ್ಧರನ್ನೇ, ಎಪ್ಪತ್ತು ವರ್ಷ ಮೇಲಿನವರನ್ನೇ ಕೊಲ್ಲುತ್ತಿದೆ. ಹಾಗೆಂದು ಯುವಜನರನ್ನು ಸಾಯಿಸುತ್ತಿಲ್ಲ ಎಂದಲ್ಲ. ಬಿಪಿ, ಡಯಾಬಿಟಿಸ್‌, ಹೃದಯ ಸಮಸ್ಯೆಗಳು ಇರುವ ಯುವಕರನ್ನೂ ಇದು ಕೊಲ್ಲುತ್ತಿದೆ. ಆದರೆ ವೃದ್ಧರು ಹೆಚ್ಚಿನ ಅಪಾಯ ಎದುರಿಸುತ್ತಿರುವ ಸಮುದಾಯ. ಹೀಗಾಗಿ ಜಗತ್ತಿನ ಎಲ್ಲೆಡೆ ಇರುವ ತಜ್ಞರು ಹೇಳುವುದು ಒಂದೇ- ನೀವು ಬೇಕಾದರೆ ಆರ್ಥಿಕ ಪುನಶ್ಚೇತನದ ದೃಷ್ಟಿಯಿಂದ ಲಾಕ್‌ಡೌನ್‌ ಸಡಿಲ ಮಾಡಿಕೊಳ್ಳಿ. ಆದರೆ ವೃದ್ಧರನ್ನು ಮಾತ್ರ ಐಸೋಲೇಶನ್‌ ಮಾಡಿ ರಕ್ಷಿಸಿಕೊಳ್ಳಿ ಅಂತ. ಭಾರತದಲ್ಲಿ ಕೂಡ ಸರಕಾರ ಮುಂದಿನ ಎರಡು ತಿಂಗಳು ವೃದ್ಧರನ್ನು ಮನೆಯೊಳಗೇ ಸುರಕ್ಷಿತವಾಗಿ ಇಟ್ಟು ನೋಡಿಕೊಳ್ಳಿ ಎನ್ನುತ್ತಿದೆ. 

- ವೃದ್ಧರು, ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯಲು ಮನೆಯಿಂದ ಹೊರ ಬಂದು ಬ್ಯಾಂಕ್‌, ಪೋಸ್ಟ್‌ ಆಫೀಸಿಗೆ ಹೋಗುತ್ತಿರಬೇಕಾಗುತ್ತದೆ. ಇದನ್ನು ಅವಾಯ್ಡ್‌ ಮಾಡಿ, ವೃದ್ಧರು ಇರುವಲ್ಲೇ ಅವರಿಗೆ ಈ ಸೌಲಭ್ಯಗಳು ದೊರೆಯುವಂತೆ ಮಾಡಲು ಒಂದು ಯೋಜನೆಯನ್ನು ಸರಕಾರ ಹೆಣೆಯುತ್ತಿದೆ. ಅದರಂತೆ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಮನೆ ಬಾಗಿಲಿಗೆ ದೊರೆಯಲಿವೆ.
- ಹಿರಿಯ ನಾಗರಿಕರು ಮಾತ್ರವೇ ಇರುವ ಮನೆಗಳನ್ನು ಗುರುತಿಸುವ ಹೊಣೆಯನ್ನು ಸ್ಥಳೀಯಾಡಳಿತಗಳಿಗೆ ವಹಿಸಲಾಗುವುದು. ಇವರು ಮನೆಯಿಂದ ಹೊರಗೆ ಬರುವ ಅಗತ್ಯ ಇಲ್ಲದಂತೆ ದಿನಸಿ ಮತ್ತಿತರ ಸಾಮಗ್ರಿಗಳನ್ನು ಮನೆಗೇ ಪೂರೈಸುವ ಅಗತ್ಯ ಸೇವೆಯನ್ನು ಒದಗಿಸಲು ಕ್ರಮವನ್ನೂ ಕೈಗೊಳ್ಳಲಾಗುತ್ತದೆ. ಹಿರಿಯ ನಾಗರಿಕರಿಗೇ ಮೀಸಲಾದ ಪ್ರತ್ಯೇಕ ಸಹಾಯವಾಣಿ ಸ್ಥಾಪಿಸುವುದು.
- ಸರಕಾರಿ ಕೆಲಸಗಳಿಗೆ ವೃದ್ಧರು ಹೋಗುವುದು ಅನಿವಾರ್ಯವಾದರೆ, ಅವರಿಗೆ ಮೊದಲ ಆದ್ಯತೆ ನೀಡುವುದು. ಆಸ್ಪತ್ರೆಗಳಲ್ಲಿರುವ ಹಿರಿಯ ವೈದ್ಯರು ಎಮರ್ಜೆನ್ಸಿ ಕೇಸುಗಳನ್ನು ಮಾತ್ರ ಅಟೆಂಡ್‌ ಮಾಡುವ ವ್ಯವಸ್ಥೆ.
- ಪ್ರಯಾಣದ ವೇಳೆ ಅವರಿಗೆ ಪ್ರತ್ಯೇಕ ಆಸನ ಹಾಗೂ ಸುರಕ್ಷತಾ ಕ್ರಮಗಳ ಅನುಸರಣೆ. ತುಂಬ ದೂರದ ಪ್ರಯಾಣಗಳನ್ನು ಅವಾಯ್ಡ್‌ ಮಾಡುವುದು.
- ಮನೆಯಲ್ಲಿರುವವರು ವೃದ್ಧರನ್ನು ಹೆಚ್ಚಿನ ಎಚ್ಚರದಿಂದ ನೋಡಿಕೊಳ್ಳುವುದು. ಅವರಿಗೆ ಪ್ರತ್ಯೇಕ ಕೋಣೆಯನ್ನು ಮೀಸಲಾಗಿಡುವುದು. ಹೊರಗಿನಿಂದ ಬಂದವರು ಅವರನ್ನು ನೇರವಾಗಿ ಸ್ಪರ್ಶಿಸದಂತೆ ವ್ಯವಸ್ಥೆ ಮಾಡಿಕೊಳ್ಳುವುದು. ಮಕ್ಕಳು, ಮೊಮ್ಮಕ್ಕಳು ಮೈಕೈ ತೊಳೆದು ಶುಚಿಯಾದ ಬಳಿಕ ಅವರನ್ನು ಮುಟ್ಟುವಂತೆ ಎಚ್ಚರ.

ಹೊಂದಾಣಿಕೆ ಅಸ್ತ್ರ ಬತ್ತಳಿಕೆಯಲ್ಲಿದ್ರೆ ಲೈಫ್‍ನಲ್ಲಿ ನೋ ವರಿಸ್ 

- ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ನೇರವಾಗಿ ಆಸ್ಪತ್ರೆಗೆ ಹೋಗಬಾರದು. ವೈದ್ಯರಿಂದ ಸೂಕ್ತ ಔಷಧ ಮನೆಯಲ್ಲೇ ಪಡೆಯಬಹುದು. ಮನೆಯಲ್ಲಿ ಇತರರಿಗೆ ಶೀತ ನೆಗಡಿ ಕೆಮ್ಮಿನಂಥ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ವೃದ್ಧರಿಂದ ಸಾಧ್ಯವಾದಷ್ಟು ಅಂತರ ಕಾಪಾಡಿಕೊಳ್ಳಬೇಕು.
- ಹಿರಿಯ ನಾಗರಿಕರು ದಿನವಿಡೀ ಮನೆಯಲ್ಲೇ ಐಸೋಲೇಶನ್‌ನಲ್ಲಿ ಇದ್ದರೂ ಅವರಿಗೆ ಒಂದು ಬಗೆಯ ಖಿನ್ನತೆ ಆರಂಭ ಆಗಬಹುದು. ಇದೂ ಕೂಡ ಅಪಾಯಕರ. ಇದನ್ನು ಹೋಗಲಾಡಿಸಲು ಮನೆಯಲ್ಲಿ ಅವರಿಗೆ ಒಳ್ಳೆಯ ಸಾಹಿತ್ಯ, ಪುಸ್ತಕ, ಸಿನಿಮಾ ಒದಗಿಸಿಕೊಡಬೇಕಾದೀತು. ಮುಂಜಾನೆ ಅಥವಾ ಸಂಜೆ ವಾಕಿಂಗ್‌ ಕರೆದುಕೊಂಡು ಹೋಗಬೇಕಾದೀತು. ಆಗಲೂ ಅವರು ಇತರರ ಜೊತೆ ಸೋಶಿಯಲ್‌ ಡಿಸ್ಟೆನ್ಸ್‌ ಕಾಪಾಡಿಕೊಳ್ಳುವುದು ಅಗತ್ಯವಾದೀತು.

70 ಲಕ್ಷ ಮಹಿಳೆಯರ ಗರ್ಭಕ್ಕೆ ಕಾರಣ ಲಾಕ್ ಡೌನ್! ಯಾವ ದೇಶಗಳಿಗೆ ಆತಂಕ?

- ವೃದ್ಧಾಶ್ರಮಗಳು ಹೆಚ್ಚಿನ ಎಚ್ಚರಿಕೆ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ವೃದ್ಧರೂ ಅವರದೇ ಮೀಸಲು ಜಾಗ ಹೊಂದಿರುವುದು, ಅದನ್ನು ಇನ್ನೊಬ್ಬರು ಬಳಸದಿರುವುದು ಅಗತ್ಯ. ಇವರ ಸಂಬಂಧಿಕರು ಬಂದಾಗ ಅವರನ್ನು ಪ್ರತ್ಯೇಕವಾಗಿ, ಸುರಕ್ಷಿತವಾಗಿ ಭೇಟಿ ಮಾಡುವ ವ್ಯವಸ್ಥೆ. 

"

click me!