ಕರಿಮಣಿ ಮಾಲಿಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ ಪ್ರಿಯಾ, ಅಶೋಕ್. ಸೀತಾರಾಮ ಸೀರಿಯಲ್ ಪ್ರಿಯರು ಏನು ಹೇಳಿದ್ರು ನೋಡಿ...
ಕಳೆದ 3-4 ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕನದ್ದೇ ಹವಾ. ಏನಿಲ್ಲ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ ಎಂದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರೀಲ್ಸ್ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು. ಇದೀಗ ಮತ್ತೆ 25 ವರ್ಷಗಳ ಬಳಿಕ ಹಲ್ಚಲ್ ಸೃಷ್ಟಿಸುತ್ತಿದೆ.
ಇದಾಗಲೇ ಹಲವಾರು ನಟ-ನಟಿಯರೂ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದೀಗ ಸೀತಾರಾಮ ಸೀರಿಯಲ್ ಖ್ಯಾತಿಯ ಪ್ರಿಯಾ ಮತ್ತು ಅಶೋಕ್ ಕೂಡ ರೀಲ್ಸ್ ಮಾಡಿದ್ದಾರೆ. ಸೀತಾರಾಮ ಸೀರಿಯಲ್‌ನಲ್ಲಿ ಈ ಜೋಡಿಯ ಅದ್ಧೂರಿ ಮದುವೆಯಾಗಿದೆ. ಅಸಲಿ ಮದುವೆಗೆ ಖರ್ಚು ಮಾಡುವಂತೆ ಭರ್ಜರಿ ಸೆಟ್ ಹಾಕಿ ಮದುವೆ ಮಾಡಲಾಗಿದೆ. ಎಷ್ಟೋ ಮಂದಿ ಇದು ರಿಯಲ್ ಮದುವೆನೇ ಎಂದು ಅಂದುಕೊಂಡವರೂ ಇದ್ದಾರೆ. ಸಾಮಾನ್ಯವಾಗಿ ಸೀರಿಯಲ್ಗಳಲ್ಲಿ ನಾಯಕ- ನಾಯಕಿಯರ ನಟನೆ ಎಷ್ಟು ನೈಜವಾಗಿರುತ್ತದೆ ಎಂದರೆ ರಿಯಲ್ ಲೈಫ್ನಲ್ಲಿಯೂ ಇವರೇ ಜೋಡಿಯಾಗಲಿ, ಇವರೇ ಮದ್ವೆಯಾಗಲಿ ಎಂದೆಲ್ಲಾ ಅದೆಷ್ಟೋ ಅಭಿಮಾನಿಗಳು ಅಂದುಕೊಳ್ಳುವುದು ಉಂಟು.
ನಟಿ ಶ್ರೀದೇವಿಯ ನಿಗೂಢ ಸಾವಿಗೆ ಈಗೇನಿದು ಟ್ವಿಸ್ಟ್? ರಹಸ್ಯವಾಗಿದ್ದ ತಂಗಿ ಶ್ರೀಲತಾ ಹೆಸರು ಮುನ್ನೆಲೆಗೆ!
ಇದೀಗ ಅಶೋಕ್ ಮತ್ತು ಪ್ರಿಯಾ ರೀಲ್ಸ್ ಮಾಡಿದ್ದಾರೆ. ಸೀರಿಯಲ್‌ನಲ್ಲಿ ಕಟ್ಟಿರುವ ಕರಿಮಣಿಯನ್ನು ತೋರಿಸಿರುವ ಪ್ರಿಯಾ ಅವರು, ನೀನಲ್ಲ ನೀನಲ್ಲ ಕರಿಮಣಿ ಮಾಲಿಕ ನೀನಲ್ಲ ಎಂದು ಹೇಳಿದ್ದಾರೆ. ಹಿಂದಕ್ಕೆ ಅಶೋಕ್ ಬಂದು ಡ್ಯಾನ್ಸ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.
ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ. ಅಂದಹಾಗೆ ಮೇಘನಾ ಶಂಕರಪ್ಪ ಹಾಗೂ ಅಶೋಕ್ ಶರ್ಮಾ ಸೀತಾರಾಮ ಸೀರಿಯಲ್‌ನಲ್ಲಿ ಪ್ರಿಯಾ ಹಾಗೂ ಅಶೋಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇಘನಾ ಭರತನಾಟ್ಯ ಕಲಾವಿದೆ, ನಟಿ, ನಿರೂಪಕಿಯಾಗಿದ್ದರೆ, ಅಶೋಕ್ ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ.
ಭಾರಿ ತೂಕದ ವ್ಯಕ್ತಿ ಮೈಮೇಲೆ ಮಲಗಿರುವಾಗ.... ಇಂಟಿಮೇಟ್ ದೃಶ್ಯಗಳ ಕುರಿತು ನಟಿ ದಿವ್ಯಾ ಹೇಳಿದ್ದೇನು?