ಮಲಯಾಳಂ ನಟಿ ದಿವ್ಯಾ ಪಿಳ್ಳೈ ಅವರು ರೊಮ್ಯಾಂಟಿಕ್ ಮತ್ತು ಲಿಪ್ಲಾಕ್ ದೃಶ್ಯಗಳ ಕುರಿತು ಓಪನ್ ಆಗಿ ಮಾತನಾಡಿದ್ದಾರೆ. ನಟಿ ಹೇಳಿದ್ದೇನು?
ದಿವ್ಯಾ ಪಿಳ್ಳೈ ಮಲಯಾಳಂ ಚಿತ್ರನಟಿ. ಮಲಯಾಳಂ ಹೊರತುಪಡಿಸಿ ತೆಲಗು ಚಿತ್ರಗಳಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟಿವಿ ಕಾರ್ಯಕ್ರಮಗಳಲ್ಲಿಯೂ ಇವರು ಕಾಣಿಸಿಕೊಳ್ಳುತ್ತಾರೆ. 1985 ರಂದು ಕೇರಳದಲ್ಲಿ ಜನಿಸಿದ ನಟಿ ಅಯಾಲ್ ನಜನಲ್ಲ (2015), ಊಝಂ (2016), ಮಾಸ್ಟರ್ ಪೀಸ್ (2017), ಮೈ ಗ್ರೇಟ್ ಗ್ರ್ಯಾಂಡ್ ಫಾದರ್ (2019), ಮಂಗಳವಾರಂ, ಕಾಲಾ ಮತ್ತು ಸೈಮನ್ ಡೇನಿಯಲ್ ಸೇರಿದಂತೆ 26 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೇ ಅವರು ದಿ ವಿಲೇಜ್ ಮತ್ತು ಮಾಸ್ಟರ್‌ಪೀಸ್ ಎಂಬ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಮಂಗಳವಾರಂ ಚಿತ್ರದಿಂದ ಇವರು ತೆಲುಗು ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ. ಈ ಕುರಿತು ಮಾತನಾಡಿದ್ದ ನಟಿ, ಚಿತ್ರದ ಭಾಗವಾಗಿರುವುದಕ್ಕೆ ನನಗೆ ಖುಷಿಯಾಗಿದೆ. ಪ್ರೇಕ್ಷಕರು ನನ್ನ ಅಭಿನಯವನ್ನು ಮೆಚ್ಚಿ ನನ್ನನ್ನು ಸ್ವಾಗತಿಸಿದರು ಎಂದಿದ್ದರು.
ಅಂದಹಾಗೆ ದಿವ್ಯಾ ಪಿಳ್ಳೈ ಅವರು ಮಾಜಿ ಗಗನಸಖಿ ಕೂಡ. ಅವರು ಬಹಳ ಗಮನ ಸೆಳೆದದ್ದು ತೆಲಗುವಿನ ಮಂಗಳವಾರಂ ಚಿತ್ರಕ್ಕಾಗಿ. ಅಲ್ಲಿ ಅವರ ಬಲವಾದ ಪಾತ್ರಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಇದೀಗ ನಟಿ ಚಲನಚಿತ್ರಗಳಲ್ಲಿನ ಲಿಪ್ಲಾಕ್ ಸೇರಿದಂತೆ ಕೆಲವು ಇಂಟಿಮೇಟ್ ದೃಶ್ಯಗಳ ಕುರಿತು ಮಾತನಾಡಿದ್ದಾರೆ. ಯೂಟ್ಯೂಬ್ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನಟಿ ಲಿಪ್ಲಾಕ್ ಸೀನ್ ಮತ್ತು ಇಂಥ ದೃಶ್ಯಗಳನ್ನು ಎಂಜಾಯ್ ಮಾಡುವುದರ ಕುರಿತು ಮಾತನಾಡಿ ಹಲ್ಚಲ್ ಸೃಷ್ಟಿಸಿದ್ದಾರೆ.
ಹನಿಮೂನ್ಗೆ ಹೋಗುವಾಗ ಐಶ್ಗೆ ಮದ್ವೆಯಾಗಿದ್ದು ನೆನಪಾಯ್ತಂತೆ! ಅಂದಿನ ಘಟನೆ ನೆನೆದ ನಟಿ
ಅಷ್ಟಕ್ಕೂ ಅವರು ಈ ವಿಷಯವನ್ನು ಎತ್ತಿರುವುದು ತಮ್ಮ ಮಂಗಳವಾರಂ ಚಿತ್ರದ ಕುರಿತು. ಇಲ್ಲಿ ಇವರು ಜಮೀನ್ದಾರ್ ಪತ್ನಿಯಾಗಿ ನಟಿಸಿದ್ದಾರೆ. ಈ ಚಿತ್ರ ಇವರಿಗೆ ಸಾಕಷ್ಟು ಯಶಸ್ಸನ್ನು ತಂದುಕೊಟ್ಟಿದ್ದೂ ಅಲ್ಲದೇ ಈ ಪಾತ್ರ ಸಕತ್ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಕಾರಣ, ಈ ಚಿತ್ರದಲ್ಲಿ ಇವರು, ತುಂಬಾ ರೊಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರ ಮಾತ್ರವಲ್ಲದೇ ದಿವ್ಯಾ ಈ ಹಿಂದಿನ ಹಲವು ಚಿತ್ರಗಳಲ್ಲಿಯೂ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಮಂಗಳವಾರಂ ಬಳಿಕ ಇವರ ದೃಶ್ಯದ ಕುರಿತು ಪ್ರಶ್ನೆ ಕೇಳಲಾಗಿತ್ತು. ಲಿಪ್ಲಾಕ್ ಸೀನ್ಗಳಲ್ಲಿ ನಟಿಸುವಾಗಿನ ಔಚಿತ್ಯದ ಕುರಿತು ಪ್ರಶ್ನಿಸಲಾಯಿತು.
ಆಗ ನಟಿ, ಶೂಟಿಂಗ್ ಸೆಟ್ನಲ್ಲಿ ರೊಮ್ಯಾನ್ಸ್, ಲಿಪ್ಲಾಕ್ ದೃಶ್ಯಗಳು ಮಾಡುವುದು ತುಂಬಾ ಸುಲಭವಲ್ಲ. ಏಕೆಂದರೆ ಅಲ್ಲಿ ಹಲವರು ನಮ್ಮ ಸುತ್ತಮುತ್ತ ಇರುತ್ತಾರೆ. ಅದಕ್ಕಾಗಿ ಹಲವು ಸಂದರ್ಭಗಳಲ್ಲಿ ಮುಜುಗರವೂ ಆಗುತ್ತದೆ. ಅಷ್ಟೇ ಅಲ್ಲದೇ, ಸುಮಾರು 75-80 ಕೆ.ಜಿ ತೂಕದ ವ್ಯಕ್ತಿ ನಮ್ಮ ಮೇಲೆ ಮಲಗಿದ ಸಂದರ್ಭದಲ್ಲಿ ಕ್ಯಾಮೆರಾ ಎದುರು ರೊಮ್ಯಾಂಟಿಕ್ ಸೀನ್ ಮಾಡು ಎಂದರೆ ಅದನ್ನು ಊಹಿಸಿಕೊಳ್ಳುವುದೇ ಕಷ್ಟ. ಇಂಥ ದೃಶ್ಯಗಳೆಲ್ಲಾ ಕ್ಯಾಮೆರಾ ಮುಂದೆ ತುಂಬಾ ಕಷ್ಟ ಎಂದಿದ್ದಾರೆ. ಇಂಥ ಸಂದರ್ಭಗಳಲ್ಲಿ ಲಿಪ್ಲಾಕ್ ಮಾಡುತ್ತಿದ್ದರೂ ಖುಷಿಯಾಗಲ್ಲ, ಅದು ಎಂಜಾಯ್ಮೆಂಟ್ ಕೊಡಲ್ಲ ಎಂದಿದ್ದಾರೆ. ಇದೇ ವೇಳೆ ರೊಮ್ಯಾನ್ಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಸಾಕಷ್ಟು ವರ್ಕ್ಔಟ್ ಕೂಡ ಮಾಡಬೇಕು ಎಂದಿದ್ದಾರೆ. ನಟನ ಜೊತೆ ಮೊದಲೇ ಇದರ ಬಗ್ಗೆ ಸಾಕಷ್ಟು ಆ್ಯಂಗಲ್ಗಳಲ್ಲಿ ಚರ್ಚಿಸಬೇಕಾಗುತ್ತದೆ ಎಂದಿದ್ದಾರೆ.
ನಟಿ ಶ್ರೀದೇವಿಯ ನಿಗೂಢ ಸಾವಿಗೆ ಈಗೇನಿದು ಟ್ವಿಸ್ಟ್? ರಹಸ್ಯವಾಗಿದ್ದ ತಂಗಿ ಶ್ರೀಲತಾ ಹೆಸರು ಮುನ್ನೆಲೆಗೆ!