UAE weekend change: ಯುಎಇನಲ್ಲಿ ಇನ್ನು ಶುಕ್ರವಾರ ಮಧ್ಯಾಹ್ನವರೆಗೆ ಮಾತ್ರ ಕೆಲಸ, ಮಿಕ್ಕೆಲ್ಲ ದಿನ ವಾರದ ರಜೆ

By Suvarna News  |  First Published Dec 7, 2021, 4:53 PM IST
  • ಯುಎಇ ವಾರಾಂತ್ಯ ಇನ್ಮುಂದೆ ಶನಿವಾರ, ಭಾನುವಾರ
  • ನಾಲ್ಕೂವರೆ ದಿನ ಮಾತ್ರ ಕೆಲಸ ಮಾಡಲು ಆದೇಶ
  • "ರಾಷ್ಟ್ರೀಯ ಕೆಲಸದ ವಾರ" ಜನವರಿಯಿಂದ ಜಾರಿ
     

ದುಬೈ (ಡಿ.7): ಸಂಯುಕ್ತ ಅರಬ್ ಗಣರಾಜ್ಯವು (United Arab Emirates) ತನ್ನ ಕೆಲಸವನ್ನು ವಾರದ ಬದಲಾಗಿ ನಾಲ್ಕೂವರೆ ದಿನಗಳಿಗೆ ಕಡಿತಗೊಳಿಸಲು ತೀರ್ಮಾನಿಸಿದೆ. ಮತ್ತು ಶುಕ್ರವಾರ, ಶನಿವಾರ ಮತ್ತು ಭಾನುವಾರವನ್ನು ವಾರಾಂತ್ಯ ಎಂದು ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ರಾಷ್ಟ್ರೀಯ ಕೆಲಸದ ವಾರ" ಜನವರಿಯಿಂದ ಸರ್ಕಾರಿ ಸಂಸ್ಥೆಗಳಿಗೆ ಕಡ್ಡಾಯವಾಗಲಿದೆ ಮತ್ತು ಕೆಲಸದ ಜೀವನ ಸಮತೋಲನ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಗುರಿಯನ್ನು ಈ ಬದಲಾವಣೆ ಹೊಂದಿದೆ. ಐದು ದಿನಗಳಿಂದ ಕಡಿಮೆ ವಾರದ ಕೆಲಸ ಮಾಡಲು ಅವಕಾಶ ನೀಡಿದ ವಿಶ್ವದ ಏಕೈಕ ರಾಷ್ಟ್ರ ಯುಎಇ ಎಂದು ಅಲ್ಲಿನ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಶುಕ್ರವಾರ ಮಧ್ಯಾಹ್ನ ಶನಿವಾರ ಮತ್ತು ಭಾನುವಾರ ವಾರಾಂತ್ಯವನ್ನು ಹೊಂದಿರುವ ಏಕೈಕ ಗಲ್ಫ್ ರಾಷ್ಟ್ರ UAE ಆಗಲಿದ್ದು,  ಅರಬ್ ಅಲ್ಲದ ಪ್ರಪಂಚದ ಇತರ ದೇಶಗಳ ಸಾಲಿಗೆ ಸೇರುತ್ತದೆ. ವಾರಾಂತ್ಯವು ಶುಕ್ರವಾರ ಮಧ್ಯಾಹ್ನದಿಂದ ಪ್ರಾರಂಭವಾಗುತ್ತದೆ. ಇದು ಮುಸ್ಲಿಂ ದೇಶಗಳಲ್ಲಿ ಪ್ರಾರ್ಥನೆಯ ಸಮಯವಾಗಿದೆ. 

Latest Videos

undefined

ಪಾಶ್ಚಿಮಾತ್ಯ ಶೈಲಿಯ ವಾರಾಂತ್ಯ ಪದ್ದತಿಯು ಅನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ.  ಹಿಂದಿನ ಬ್ರಿಟೀಷ್ ಆಡಳಿತವು ಈ ಶೈಲಿಯನ್ನು ಜಾರಿಗೆ ತಂದಿತ್ತು. UAEಯಲ್ಲಿ 2006 ರವರೆಗೆ ಗುರುವಾರ-ಶುಕ್ರವಾರ ವಾರಾಂತ್ಯ ಇತ್ತು. ನಂತರ ಖಾಸಗಿ ವಲಯವನ್ನು ಅನುಸರಿಸಿ ಶುಕ್ರವಾರ ಮತ್ತು ಶನಿವಾರಗಳಿಗೆ ಸ್ಥಳಾಂತರಗೊಂಡಿತು.

ಈ ಹೊಸ ವ್ಯವಸ್ಥೆಯು ಯುಎಇಯ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ. ಇಷ್ಟು ವರ್ಷಗಳ ನಂತರ ಶುಕ್ರವಾರ-ಶನಿವಾರದ ವಾರಾಂತ್ಯಕ್ಕೆ ನಾನು ಒಗ್ಗಿಕೊಂಡಿದ್ದರೂ, ಈ ಬದಲಾವಣೆಯನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಹಲವು ಮಂದಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

WFH EMPLOYEES: ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಕಾನೂನು

ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿಯ ಅಂಚಿನಲ್ಲಿರುವ ಯು.ಎ.ಇ. ಯ ನೆರೆ ದೇಶಗಳೆಂದರೆ ಒಮಾನ್ ಮತ್ತು ಸೌದಿ ಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳೆಂದರೆ ಅಬುಧಾಬಿ, ಅಜ್ಮಾನ್, ಷಾರ್ಜಾ, ದುಬೈ, ರಾಸ್-ಅಲ್-ಖೈಮಾ, ಫುಜೈರಾ ಮತ್ತು ಉಮ್ಮ್-ಅಲ್-ಖುಮೈನ್. 1970ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ.

ದುಬೈ ಪ್ರವಾಸದ ಪ್ರತಿಫಲ: ಯುಎಇ ಉದ್ಯಮಿಗಳಿಂದ ಕರ್ನಾಟಕದಲ್ಲಿ ಭಾರೀ ಹೂಡಿಕೆ

1971ರ ವರೆಗೆ ಈ ದೇಶಗಳು ಬ್ರಿಟನ್ನಿನ ಆಡಳಿತದಲ್ಲಿತ್ತು. ಆವಾಗ ಇವನ್ನು ಟ್ರೂಷಿಯಲ್ ದೇಶಗಳೆಂದು ಕರೆಯಲಾಗುತ್ತಿತ್ತು. 1971ರ ಬಳೀಕ ಇವು ಸರ್ವತಂತ್ರ ಸ್ವತಂತ್ರ ದೇಶಗಳಾಗಿ ಒಕ್ಕೂಟ ರಚಿಸಿಕೊಂಡವು. ಈ ಏಳು ಅರಬ್ ದೇಶಗಳು ಪ್ರತ್ಯೇಕವಾಗಿ ತಮ್ಮದೇ ಆದ ದೊರೆಯ ಆಡಳಿತಕ್ಕೆ ಒಳಪಟ್ಟಿರುತ್ತದೆ. ಈ ದೊರೆ ಆ ದೇಶದ ಒಳಾಡಳಿತವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾನೆ. ಏಳು ದೇಶಗಳ ಏಳುಮಂದಿ ದೊರೆಗಳು ಸೇರಿ ಒಬ್ಬ ಅಧ್ಯಕ್ಷನನ್ನು ಆರಿಸುತ್ತವೆ. ಈ ಒಕ್ಕೂಟದ ಸಂಯುಕ್ತ ರಕ್ಷಣೆ, ವಿದೇಶಿ ನೀತಿ ಮುಂತಾದವು ಅಧ್ಯಕ್ಷನ ಅಧೀನಕ್ಕೆ ಸೇರಿರುತ್ತವೆ. 25 ಮಂದಿ ಮಂತ್ರಿಗಳ ಸಭೆ ಈ ದೇಶಾಡಳಿತವನ್ನು ಗಮನಿಸುತ್ತದೆ .

ಇದು ಇಪ್ಪತ್ತನೆಯ ಶತಮಾನದ ಮಧ್ಯ ಭಾಗದವರೆಗೂ ಹಿಂದುಳಿದಿತ್ತು. ಮೀನುಗಾರಿಕೆಯೊಂದೇ ಮುಖ್ಯ ಉದ್ಯೋಗ ಎನಿಸಿಕೊಂಡಿತ್ತು. ಆ ಶತಮಾನದ ಉತ್ತರಾರ್ಧದಲ್ಲಿ ತೈಲ ನಿಕ್ಷೇಪ ಪತ್ತೆಯಾದ ಮೇಲೆ ಸಂಪದ್ಭರಿತ ದೇಶವಾಯಿತು. ನಗರ, ಆಧುನಿಕ ಕೈಗಾರಿಕೆಗಳು ಬೆಳೆದವು. ಜನ ತೈಲ ಉದ್ದಿಮೆಗಳಲ್ಲಿ ಕೆಲಸಮಾಡಲು ಆರಂಭಿಸಿ ಉದ್ಯೋಗ ಹೆಚ್ಚಿತು. 1970ರ ವೇಳೆಗೆ ಇದು ಪ್ರಪಂಚದ ಅಧಿಕ ವರಮಾನ ಪಡೆಯುವ ದೇಶಗಳ  ಪಟ್ಟಿಗೆ ಸೇರಿಕೊಂಡಿತು.

click me!