ಮುಂದೇನು ಮಾಡಲಿ? ಬೆಳಗ್ಗೆ 5 ಗಂಟೆಗೆ ಬಂದ ಇಮೇಲ್‌ಗೆ ಕಾರು ಕಂಪನಿ ನಿರ್ದೇಶಕ ಕಂಗಾಲು!

By Chethan Kumar  |  First Published Nov 22, 2024, 1:25 PM IST

ಬೆಳಗಿನ ಜಾವ 5 ಗಂಟೆ. ಪ್ರತಿಷ್ಠಿತ ಜನರಲ್ ಮೋಟಾರ್ ಆಟೋಮೊಬೈಲ್ ಕಂಪನಿಯ ಸಹಾಯಕ ನಿರ್ದೇಶಕರಿಗೊಂದು ಇಮೇಲ್ ಬಂದಿದೆ. ತೆರೆದು ನೋಡಿದ ನಿರ್ದೇಶಕರು ಕಂಗಾಲಾಗಿದ್ದಾರೆ. ಮುಂದೇನು ಮಾಡಲಿ ಎಂದು ತಲೆಮೇಲೆ ಕೈಯಿಟ್ಟು ಕುಳಿತಿದ್ದಾರೆ.
 


ಫ್ಲೋರಿಡಾ(ನ.22) ಪ್ರತಿಷ್ಠಿತ ಜನರಲ್ ಮೋಟಾರ್ ಆಟೋಮೊಬೈಲ್ ಕಂಪನಿಯ ಕಾಂಪಿಟೀಟರ್ ಇಂಟಲಿಜೆನ್ಸ್ ವಿಭಾಗದ ಸಹಾಯ ನಿರ್ದೇಶಕರೇ ಕಂಗಾಲಾಗಿದ್ದಾರೆ. ಕಾರಣ ಒಂದು ಇಮೇಲ್. ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಕಂಪನಿ ಒಂದು ಇಮೇಲ್ ಕಳುಹಿಸಿದೆ. ತೆರೆದು ನೋಡಿದರೆ 4.59ರ ವರೆಗೆ ಜನರಲ್ ಮೋಟಾರ್ ಕಂಪನಿಯ ಸಹಾಯ ನಿರ್ದೇಶಕರೇ ನೆಮ್ಮದಿಯಿಂದ ಇದ್ದರು. ಆದರೆ 5 ಗಂಟೆಗೆ ಬಂದ ಇಮೇಲ್ ಕಂಗಾಲಾಗುವಂತೆ ಮಾಡಿದೆ. ಇದು ಮುಖ್ಯ ಕಾರಣ 5 ಗಂಟೆಗೆ ಸಹಾಯಕ ನಿರ್ದೇಶಕ ಆ್ಯಡಮ್ ಬರ್ನಾರ್ಡ್ ಉದ್ಯೋಕ ಕಳೆದುಕೊಂಡಿದ್ದರು. 

ಜನರಲ್ ಮೋಟಾರ್ ಕಂಪನಿ ಬರೋಬ್ಬರಿ 1,000 ಉದ್ಯೋಗ ಕಡಿತ ಮಾಡಿದೆ. ಈ ಉದ್ಯೋಗ ಕಡಿತದಲ್ಲಿ ಕಾಂಪಿಟೀಟರ್ ಇಂಟಲಿಜೆನ್ಸ್ ವಿಭಾಗದಲ್ಲಿ ಸಹಾಯ ನಿರ್ದೇಶಕರಾಗಿದ್ದ ಆ್ಯಡಮ್ ಬರ್ನಾರ್ಡ್ ಕೂಡ ಸೇರಿದ್ದಾರೆ. ಬರೋಬ್ಬರಿ 38 ವರ್ಷಗಳ ಅನುಭವ ಇರುವ ಕಂಪನಿಯ ಸಾಹಾಯ ನಿರ್ದೇಶಕರನ್ನು ಈ ರೀತಿ ಉದ್ಯೋಗ ಕಡಿತಕ್ಕೆ ಗುರಿಯಾಗಿಸುವುದು ಸರಿಯಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. 

Latest Videos

undefined

ಬಿಎಂಡಬ್ಲ್ಯು TO ಟೊಯೊಟಾ, ವಿಶ್ವದ ಟಾಪ್‌ 10 ದೈತ್ಯ ಕಾರು ತಯಾರಿಕಾ ಕಂಪನಿಗಳು!

ತಮಗೆ ಆಗಿರುವ ಆಘಾತವನ್ನು ಆ್ಯಡಮ್ ಬರ್ನಾರ್ಡ್ ಹಂಚಿಕೊಂಡಿದ್ದಾರೆ. ಬೆಳಗ್ಗೆ ಬೇಗನೆ ಎದ್ದು ಕಚೇರಿಗೆ ತೆರಳಲು ತಯಾರಿ ಆರಂಭಿಸಿದ ಬರ್ನಾರ್ಡ್‌ ಮೊಬೈಲ್‌ಗೆ ಇಮೇಲ್ ನೋಟಿಫಿಕೇಶನ್ ಬಂದಿದೆ. 5.07 ಗಂಟೆಗೆ ಬಂದ ಇಮೇಲ್ ನೋಟಿಫಿಕೇಶನ್ ಎನು ಎಂದು ಓಪನ್ ಮಾಡಿ ನೋಡಿದ್ದಾರೆ. ಕಂಪನಿಯಿಂದ ಬಂದಿರುವ ಇಮೇಲ್. ಸರಿ ಏನು ಎಂದು ನೋಡಿದರೆ, ವೆಚ್ಚ ನಿರ್ವಹಣೆಯಿಂದ ಕಂಪನಿ ಉದ್ಯೋಗ ಕಡಿತ ಮಾಡುತ್ತಿದೆ. ಇಷ್ಟು ವರ್ಷ ಕಂಪನಿಗೆ ಸೇವೆ ಸಲ್ಲಿಸಿರುವುದಕ್ಕೆ ಧನ್ಯವಾದ ಎಂದು ಬರೆದಿತ್ತು ಎಂದು ಬರ್ನಾಡ್ ಹೇಳಿದ್ದಾರೆ. ಇಷ್ಟು ವರ್ಷ ಕಂಪನಿಗಾಗಿಶ್ರಮಿಸಿದ ನನಗೆ ಈ ರೀತಿಯ ಸೆಂಡ್ ಆಫ್ ನೀಡಿದ್ದಾರೆ. ನಾನು ಮುಂದೇನು ಮಾಡಲಿ ಎಂದು ಬರ್ನಾರ್ಡ್ ನೋವು ತೋಡಿಕೊಂಡಿದ್ದಾರೆ.

1986ರಿಂದ ಜನರಲ್ ಮೋಟಾರ್ ಕಂಪನಿಯಲ್ಲಿ ಆ್ಯಡಮ್ ಬರ್ನಾರ್ಡ್ ಕೆಲಸ ಮಾಡುತ್ತಿದ್ದಾರೆ. ಆನಾಲಿಸ್ಟ್ ಆಗಿ ಸೇರಿಕೊಂಡು ಹಲವು ಪ್ರಮುಖ ಜವಾಬ್ದಾರಿಗಲನ್ನು ಬರ್ನಾರ್ಡ್ ನಿರ್ವಹಿಸಿದ್ದಾರೆ. ಇದರ ನಡುವೆ ಹಲವು ಕಂಪನಿಗಳ ಆಫರ್ ಬಂದರೂ ಎಲ್ಲವನ್ನೂ ತಿರಸ್ಕರಿಸಿ ಜನರಲ್ ಮೋಟಾರ್ ಕಂಪನಿಯಲ್ಲೇ ಉಳಿದುಕೊಂಡಿದ್ದರು. ಇದೀಗ ಏಕಾಏಕಿ ಬರ್ನಾರ್ಡ್ ಕೆಲಸ ಕಳೆದುಕೊಂಡಿದ್ದಾರೆ. ಕಳೆದ 17 ವರ್ಷಗಳಿಂದ ಜನರಲ್ ಮೋಟಾರ್ ಕಂಪನಿಯ ಕಾಂಪಿಟೀಟರ್ ಇಂಟಲಿಜೆನ್ಸ್ ವಿಂಗ್ ಸಹಾಯಕ ನಿರ್ದೇಶಕಾಗಿದ್ದರು. ಈ ಮೂಲಕ ಪ್ರತಿಸ್ಪರ್ಧಿಗಳ ಕಾರ್ಯತಂತ್ರ, ಕಾರುಗಳ ಬಿಡುಗಡೆ ಸೇರದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಜನರಲ್ ಮೋಟಾರ್ ಅಭಿವೃದ್ಧಿಗೆ ಶ್ರಮಿಸಿದ್ದರು.

ಈ ಕುರಿತು ನೋವು ತೋಡಿಕೊಂಡಿರುವ ಆ್ಯಡಮ್ ಬರ್ನಾರ್ಡ್ ಈ ವಯಸ್ಸಿನಲ್ಲಿ ಮತ್ತೊಂದು ಕೆಲಸ ಹುಡುಕಬೇಕಾದ ಪರಿಸ್ಥಿತಿ ಬಂದೊದಗುತ್ತೆ ಅನ್ನೋದು ಊಹಿಸರಿಲ್ಲ. ನಾನೀನ ಹೊಸ ಉದ್ಯೋಗ, ಹೊಸ ಸವಾಲಿಗೆ ತೆರೆದುಕೊಳ್ಳುತ್ತಿದ್ದೇನೆ. ನಿಮ್ಮ ನೆರವು ಬೇಕಿದೆ. ಆಟೋ ಇಂಡಸ್ಟ್ರೀಯನ್ನು ನಾನು ಪ್ರೀತಿಸುತ್ತೇನೆ. ಇದೇ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುತ್ತೇನೆ ಎಂದು ಆ್ಯಡಮ್ ಹೇಳಿದ್ದಾರೆ. 

ಕಂಪನಿಯ ಈ ನಡೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಹಲವರು ಜನರಲ್ ಮೋಟಾರ್ ಕಂಪನಿಯನ್ನು ಟೀಕಿಸಿದ್ದಾರೆ. 38 ವರ್ಷಗಳ ವರೆಗೆ ಕಂಪನಿಗಾಗಿ ದುಡಿದಿದ್ದಾರೆ. ನಿಷ್ಠೆಯಿಂದ ಸೇವೆ ಸಲ್ಲಿಸಿದ ಹಿರಿಯ ಉದ್ಯೋಗಿಯನ್ನು ಈ ರೀತಿ ಕಿತ್ತೆಸೆಯುುದು ಸರಿಯಲ್ಲ. ಬೆಳಗಿನ 5 ಗಂಟೆಗೆ ಇಮೇಲ್ ಕಳುಹಿಸುವುದು ಯಾವ ವೃತ್ತಿಪರತೆ? ಎಂದು ಪ್ರಶ್ನಿಸಿದ್ದಾರೆ.  ಟೀಕೆಗಳು ಹೆಚ್ಚಾಗುತ್ತಿದ್ದಂತೆ ಜನರಲ್ ಮೋಟಾರ್ ಕಂಪನಿ, ಈ ಉದ್ಯೋಗ ಕಡಿತ, ಕಂಪನಿ ಪರಿಣಾಮಕಾರಿಯ ನಿರ್ವಹಣೆ ಹಾಗೂ ಕಾರ್ಯಾಚರಣೆಗಾಗಿ ಎಂದಿದೆ. 
 

click me!