ಕಲಬುರಗಿಯ ಸರ್ದಾರ ವಲ್ಲಭಭಾಯಿ ಪಟೇಲ್ ಸರ್ಕಲ್‌ನಿಂದ ಡಿಸಿ ಕಚೇರಿವರೆಗೆ ಮಣಿಕಂಠ ರಾಠೋಡ್ ಬೆಂಬಲಿಗರ ಬೃಹತ್ ಪ್ರತಿಭಟನೆ
ಕಲಬುರಗಿ(ಡಿ.07): ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹತ್ಯೆ ಸಂಚಿನಲ್ಲಿ ಚಿತ್ತಾಪುರ ಕೈ ಶಾಸಕ ಪ್ರಿಯಾಂಕ್ ಖರ್ಗೆ ಶ್ಯಾಮೀಲಾಗಿದ್ದಾರೆಂದು ಆರೋಪಿಸಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬೆಂಬಲಿಗರು ಮಂಗಳವಾರ ಕಲಬುರಗಿಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಎರಡು ಪಿಸ್ತೂಲ್ ಮತ್ತು 30 ಜೀವಂತ ಗುಂಡು ಖರೀದಿ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗ, ಪಾಲಿಕೆ ಮಾಜಿ ಸದಸ್ಯ, ರಾಜು ಕಪನೂರ್ ಇವರನ್ನು ಯಡ್ರಾಮಿ ಪೊಲೀಸರು ಬಂಧಿಸಿದ್ದಾರೆ. ಕಪನೂರ್ ನಾಡ ಪಿಸೂಲ್ ಖರೀದಿಸಿದ್ದೇ ಮಣಿಕಂಠ ಹತ್ಯೆಗಾಗಿ, ಈ ಹತ್ಯೆ ಸಂಚಿನಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರವೂ ಇದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ತಕ್ಷಣ ಪೊಲೀಸರು ಪ್ರಿಯಾಂಕ್ ಬಂಧಿಸುವಂತೆ ಆಗ್ರಹಿಸಿದರು.
undefined
ಡಿ.10ಕ್ಕೆ ಕಲಬುರಗಿಯಲ್ಲಿ ಖರ್ಗೆ ಅಭಿನಂದನಾ ಸಮಾರಂಭ: ಈಶ್ವರ ಖಂಡ್ರೆ
ಸೆ.9ರಂದು ಚಿತ್ತಾಪುರದ ವಾಡಿಯಲ್ಲಿ ನಡೆದಂತಹ ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿ ಬಿಜೆಪಿ ನಾಯಕರಿಗೆ ಓಡಾಡಲೂ ಸಹ ಬಿಡೋದಿಲ್ಲವೆಂದು ಧಮಕಿ ಹಾಕಿರುವ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಪ್ರಿಯಾಂಕ್ ಬಲಗೈ ಬಂಟ ರಾಜು ಕಪನೂರ್ ಅಕ್ರಮ ಪಿಸ್ತೂಲ್ ಖರೀದಿಸಿದ್ದಾರೆ. ಯಡ್ರಾಮಿ ಪೊಲೀಸರು ಆರೋಪಿಯ ಹೆಳಿಕೆಯನ್ನಾಧರಿಸಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕಪನೂರ್ ಬಂಧಿಸಿದ್ದಾರೆ. ಈ ಸಂಚಿನ ಹಿಂದಿರುವ ಕಾಣದ ಕೈ ಪ್ರಿಯಾಂಕ್ ಖರ್ಗೆ ಆಗಿದ್ದು ಇವರನ್ನೂ ಬಂಧಿಸಬೇಕೆಂದು ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಬೊಮ್ಮಾಯಿಯಿವರಿಗೆ ಮನವಿ ಸಲ್ಲಿಸಿದರು.
ರಾಜು ಕಪನೂರ ಮೇಲಿನ ರೌಡಿ ಶೀಟ್ ರದ್ದು ಮಾಡಲು ಹಾಗೂ ಆತನ ಗಡಿಪಾರು ಮಾಡುವ ಪೊಲೀಸ್ ಕ್ರಮವನ್ನು ತಡೆಯುವಲ್ಲಿ ಪ್ರಿಯಾಂಕ್ ಒತ್ತಡ ಹೇರಿದ್ದಾರೆ. ಇದು ಗುಪ್ತಚರ ಇಲಾಖೆಯವರೇ ಮಾಹಿತಿ ನೀಡಿದ್ದು ಬಹಿರಂಗವಾಗಿದೆ. ಇವೆಲ್ಲ ನೋಡಿದರೆ ಪ್ರಿಯಾಂಕ್ ನೇರವಾಗಿಯೇ ಮಣಿಕಂಠ ಹತ್ಯೆ ಸಂಚಿನಲ್ಲಿದ್ದಾರೆಂದು ಗೊತ್ತಾಗುತ್ತದೆ. ಅವರನ್ನು ಬಂಧಿಸಬೇಕು. ಸದರಿ ಪ್ರಕರಣದ ತನಿಖೆ ಸಿಐಡಿ ಅಥವಾ ಸಿಬಿಐಗೆ ಒಪ್ಪಿಸಬೇಕು, ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಿಯಾಂಕ್ ಖರ್ಗೆ ಬಂಧಿಸಬೇಕು ಎಂದು ಆಗ್ರಹಿಸಿದರು.
ಅಶ್ವಥ್ ರಾಠೋಡ, ಅಯ್ಯಪ್ಪ ಪವಾರ್, ಮಹೇಶ ಬಾಳಿ, ಶ್ರೀಕಾಂತ ಸುಲೇಗಾಂವ್, ಈರಣ್ಣ ಹಡಪದ, ರಾಜು ಮುಕ್ಕಣ್ಣ, ಮನೋಹರ ಪವಾರ್, ರವಿಕುಮಾರ್ ಚವ್ಹಾಣ್, ರಾಷ್ಟ್ರೀಯ ಬಂಜಾರಾ ಕ3ಆಂತಿ ದಳದ ಪದಾಧಿಕಾರಿಗಳು, ಬಸವರಾಜ ಖೇಣಿ, ಕರವೇ ಜಿಲ್ಲಾಧ್ಯಕ್ಷ ರವಿ ಮುದ್ನಾಳ್ ಸೇರಿದಂತೆ ಅನೇಕರು ಇದ್ದರು.