Priyank Kharge  

(Search results - 55)
 • budget blog

  BUSINESS6, Mar 2020, 2:42 PM IST

  'ನಾಮ್‌ಕೇವಾಸ್ತೆ ಬಜೆಟ್, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯ'

  ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371 (ಜೆ) ತಿರಸ್ಕರಿಸುವ ಮೂಲಕ ಅನ್ಯಾಯವೆಸಲಾಗಿತ್ತು. ಮತ್ತೆ ಈಗ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ. 
   

 • yeddyurappa priyank kharge

  Karnataka Districts20, Feb 2020, 3:35 PM IST

  'ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಯಡಿಯೂರಪ್ಪ ಸರ್ಕಾರಕ್ಕೆ ತಾತ್ಸಾರ'

  ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಪೊರೈಸುವಲ್ಲಿ ವಿಫಲ, ತೊಗರಿ ಬೆಂಬಲ ಬೆಲೆಯಲ್ಲಿ 125 ರು. ಕಡಿತ, ಪ್ರತಿ ತೊಗರಿ ಬೆಳೆಗಾರರಿಂದ 20 ಕ್ವಿಂಟಲ್ ತೊಗರಿ ಖರೀದಿಸುವ ವಾಗ್ದಾನ ಈಡೇರಿಸುವಲ್ಲಿ ವಿಫಲ, ಕೆಕೆಆರ್‌ಡಿಬಿಗೆ ಅಧ್ಯಕ್ಷರನ್ನು ನೇಮಿಸುವಲ್ಲಿ ವಿಳಂಬ, ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಲ್ಲಿ ಮಾತು ತಪ್ಪಿರುವುದು, ಇನ್ವೆಸ್ಟ್ ಕರ್ನಾಟಕದ ಕೈಗಾರಿಕ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ, ಶೂನ್ಯ ಬಂಡವಾಳ ಸಾಧನೆ’ ಹಿಂಗಾದ್ರೆ ಕಲ್ಯಾಣ ಕರ್ನಾಟಕದ ಪ್ರಗತಿ ಆದ್ಹಂಗೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕದ ಪ್ರತಿ ಸಿಎಂ ಹುಸಿ ಪ್ರೀತಿ ತಮ್ಮದೇ ಆದಂತಹ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
   

 • Priyank Kharge

  Karnataka Districts27, Jan 2020, 2:22 PM IST

  ಬಿ. ಎಸ್. ಯಡಿಯೂರಪ್ಪ ಅಸಹಾಯಕ ಮುಖ್ಯಮಂತ್ರಿ: ಪ್ರಿಯಾಂಕ್ ಖರ್ಗೆ

  ಯಡಿಯೂರಪ್ಪ ಅಸಹಾಯಕ ಮುಖ್ಯಮಂತ್ರಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.  ರಾವೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್, ಶುದ್ಧ ಕುಡಿಯುವ ನೀರಿನ ಘಟಕ, ಗಂಡು ಮತ್ತು ಹೆಣ್ಣುಮಕ್ಕಳ ಶೌಚಾಲಯ ಹಾಗೂ ಇತರೆ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ, ತುಂಬಾ ಕಷ್ಟಪಟ್ಟು ಬೇರೆ ಪಕ್ಷದ ಶಾಸಕ, ಸಚಿವರನ್ನ ರಾಜೀನಾಮೆ ಕೊಡಿಸಿ ನೂರಾರು ಕೋಟಿ ಖರ್ಚು ಮಾಡಿ ಸಿಎಂ ಆದ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಹೇಳಿದ್ದಾರೆ. 
   

 • undefined

  Karnataka Districts23, Jan 2020, 1:31 PM IST

  'ಸಾಹಿತ್ಯ ಸಮ್ಮೇಳನದಲ್ಲಿ ವಸತಿ ಸೌಲಭ್ಯಕ್ಕೆ ಖಾಸಗಿ ಹೋಟೆಲ್ ಸಹಭಾಗಿತ್ವ ಪಡ್ಕೊಳ್ರಿ'

  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಆಹ್ವಾನಿತರಿಗೆ ಹಾಗೂ ಪ್ರತಿನಿಧಿಗಳ ಅನುಕೂಲಕ್ಕಾಗಿ ವಸತಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಖಾಸಗಿ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಿ ಅಗತ್ಯ ಕೈಗೊಳ್ಳುವಂತೆ ವಸತಿ ಹಾಗೂ ಸಾರಿಗೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 
   

 • deepika padukone chhapaak

  Karnataka Districts11, Jan 2020, 3:23 PM IST

  ಚಪಕ್‌ ಚಿತ್ರಕ್ಕೆ ಬೆಂಬಲ: ಚಿತ್ರಮಂದಿರದ ಎಲ್ಲ ಟಿಕೆಟ್ ಬುಕ್ ಮಾಡಿದ 'ಕೈ' ಶಾಸಕ

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರು ಚಪಕ್‌ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಈ ಚಿತ್ರಕ್ಕೆ ಬೆಂಬಲ ಸೂಚಿಸುವ ಮೂಲಕ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. 
   

 • undefined

  Politics5, Jan 2020, 9:09 AM IST

  ಸಿಎಂ ಯಡಿಯೂರಪ್ಪಗೆ ಪ್ರಿಯಾಂಕ್‌ ಖರ್ಗೆ ಮೆಚ್ಚುಗೆ

  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕಾಗಿರುವ ಮಲತಾಯಿ ಧೋರಣೆಯನ್ನು ಮೋದಿ ಅವರ ಎದುರೇ ಪ್ರಶ್ನಿಸಿರುವುದನ್ನು ರಾಜ್ಯದ ಜನರು ಮೆಚ್ಚುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
   

 • undefined

  Kalaburagi27, Oct 2019, 11:53 AM IST

  ಕೇಂದ್ರದಿಂದ ಮುಂದುವರಿದ ಮಲತಾಯಿ ಧೋರಣೆ: ಪ್ರಿಯಾಂಕ್‌ ಖರ್ಗೆ

  ಕರುನಾಡಿನ ಪಾಲಿಗೆ ಕೇಂದ್ರ ಸರಕಾರವೇ ಇಲ್ಲದಂತಿದೆ ಎಂದು ಅವಕಾಶ ಸಿಕ್ಕಾಗೆಲ್ಲಾ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಸದಾಕಾಲ ಗುಡುಗುವ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಕೇಂದ್ರದ ಪಾಲಿಗೆ ಕರ್ನಾಟಕ ಕೇವಲ ತೆರಿಗೆ ವಸೂಲಾತಿಗಷ್ಟೇ ಸೀಮಿತವಾಗಿದೆ ಎಂದು ತಿವಿದಿದ್ದಾರೆ.
   

 • undefined

  Kalaburagi23, Oct 2019, 1:22 PM IST

  ‘ಬಿಜೆಪಿ ಸರ್ಕಾರದ ಅನ್ಯಾಯ ಯಾರೂ ಪ್ರಶ್ನಿಸುತ್ತಿಲ್ಲ ಎಂದ ಶಾಸಕ’

  ನಾನು ಈ ಕ್ಷೇತ್ರದ ಶಾಸಕನಾಗಿ 2ನೇ ಬಾರಿ ಅಯ್ಕೆಯಾಗಿದ್ದು, ನನ್ನ ಅಧಿಕಾರ ಅವಧಿಯಾದ 6 ವರ್ಷದಲ್ಲಿ ಶಾಸಕನಾಗಿ, ಐಟಿ-ಬಿಟಿ, ಪ್ರವಾಸೊದ್ಯಮ, ಸಮಾಜ ಕಲ್ಯಾಣ ಸಚಿವನಾಗಿ ರಾಜ್ಯಕ್ಕೆ ಮತ್ತು ಕ್ಷೇತ್ರದ ಮತದಾರರ ಗೌರವವನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದೇನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. 

 • umesh yadav mp

  Karnataka Districts2, Oct 2019, 12:31 PM IST

  ಕಲಬುರಗಿಯಲ್ಲಿ ಪ್ರಿಯಾಂಕ್, ಜಾಧವ್ ಜಟಾಪಟಿ

  ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ವಿಚಾರ ಇದೀಗ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ಡಾ.ಉಮೇಶ ಜಾಧವ್ ಮಧ್ಯೆ ವಾಗ್ವಾದಕ್ಕೆ ಕಾರಣವಾದ ಪ್ರಸಂಗಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕೇಂದ್ರ ಸರ್ಕಾರಿ ಸಂಬಂಧಿತ ಯೋಜನೆಗಳ ಪ್ರಗತಿ ಪರಿಶೀಲನೆಯ ದಿಶಾ ಸಭೆ ಸಾಕ್ಷಿಯಾಯ್ತು. 

 • Air India Flight Returned To Igi airport From A Height Of 20,000 Feet after low pressure

  Karnataka Districts2, Oct 2019, 12:05 PM IST

  ನ.1ರಂದೇ ಕಲಬುರಗಿ ನಿಲ್ದಾಣದಿಂದ ವಿಮಾನ ಹಾರುತ್ತಾ?

  ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ದಿನದಂದೆ ಲೋಹದ ಹಕ್ಕಿ ಹಾರುವುದೆ? ಎಂಬ ಪ್ರಶ್ನೆ ಇದೀಗ ಕುತೂಹಲ ಕೆರಳಿಸಿದೆ. ಏಕೆಂದರೆ ಸಿಎಂ ಯಡಿಯೂರಪ್ಪ, ಸಂಸದ ಡಾ.ಉಮೇಶ ಜಾಧವ್‌ ಮೊದಲ್ಗೊಂಡು ಬಿಜೆಪಿ ನಾಯಕರೆಲ್ಲರೂ ನ.1ರಂದೇ ಕಲಬುರಗಿ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
   

 • undefined

  NEWS27, Aug 2019, 9:53 AM IST

  ಸಿಎಂಗಿಂತ ಹೆಚ್ಚು ಡಿಸಿಎಂ ಕೊಟ್ಟ ಬಿಜೆಪಿ

  ರಾಜ್ಯ ಬಿಜೆಪಿಯು ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಉಪಮುಖ್ಯಮಂತ್ರಿಗಳನ್ನು ನೀಡುವ ಮೂಲಕ ಅನನ್ಯ ಸಾಧನೆ ತೋರಿದೆ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. 

 • BJP

  Karnataka Districts20, Aug 2019, 7:30 PM IST

  'ಮಂತ್ರಿಗಿರಿ ಸಿಕ್ಕಿಲ್ಲಂತ ಸಿಟ್ಟಾಗಿ 'ಕೈ' ಕೊಟ್ಟವರು ಈಗೇನಂತಾರೆ'?

  ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಲಬುರಗಿ ಸಂಸದರಾಗಿ ಆಯ್ಕೆಯಾಗಿರುವ ಡಾ. ಉಮೇಶ್ ಜಾಧವ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

 • hyderabad karnataka

  Karnataka Districts20, Aug 2019, 6:26 PM IST

  'ದಿಲ್ಲಿ BJPಗೆ ಕರ್ನಾಟಕ ಬೇಕಿಲ್ಲ, ಬೆಂಗ್ಳೂರು ಬಿಜೆಪಿಗೆ ಹೈದ್ರಾಬಾದ್ ಕರ್ನಾಟಕ ಬ್ಯಾಡ'

  ದಿಲ್ಲಿ ಬಿಜೆಪಿಗೆ ಕರ್ನಾಟಕ ಬೇಕಿಲ್ಲ, ಬೆಂಗಳೂರು ಬಿಜೆಪಿಯವರಿಗೆ ಹೈದ್ರಾಬಾದ್ ಕರ್ನಾಟಕ ಬೇಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

 • undefined

  Karnataka Districts16, May 2019, 10:14 PM IST

  ‘ಜಾಧವ್ ಎಲ್ಲಿದ್ದೀಯಪ್ಪ...ಚಿಂಚನಸೂರ್ ಮತ್ತು  ಗುತ್ತೆದಾರ ಕಳ್ಳೆತ್ತು’

  ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಲೋಕ ಚುನಾವಣೆ ಎದುರಿಸಿರುವ ಡಾ. ಉಮೇಶ್ ಜಾಧವ್ ಮೇಲೆ ವಾಗ್ದಾಳಿ ಮಾಡಿದ್ದಾರೆ.

 • undefined

  NEWS8, May 2019, 12:29 PM IST

  ‘ನನ್ನ ಮಗಳು ಫೇಲಾಗಲು ಕಾಂಗ್ರೆಸ್ಸಿಗರೇ ಕಾರಣ’ : ಉಮೇಶ್ ಜಾಧವ್

  ನನ್ನ ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ನಾಯಕರು ಕಾರಣ. ನನ್ನ ಮೇಲೆ ಕಾಂಗ್ರೆಸ್ಸಿಗರು ಸುಳ್ಳು ಆರೋಪ ಮಾಡುತ್ತಿರುವ ಸಲುವಾಗಿ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.