ಕುಮಾರ ಬಜೆಟ್‌ನಲ್ಲಿ ಸಾಲ ಮನ್ನಾ ಬಿಟ್ಟು ಬೇರೆನೈತಿ?

First Published Jul 4, 2018, 7:46 PM IST
Highlights

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಮಂಡಿಸಲು ಸಿಎಂ ಕುಮಾರಸ್ವಾಮಿ ಸಿದ್ಧರಾಗಿದ್ದಾರೆ. ಸ್ವರ-ಅಪಸ್ವರಗಳ ನಡುವೆಯೂ ಹೊಸ ಬಜೆಟ್ ಮಂಡನೆಗೆ ವಿಧಾನಸೌಧ ಸಿದ್ಧವಾಗಿದೆ. ಹಾಗಾದರೆ ಈ ಬಾರಿಯ ಬಜೆಟ್ ನ ನಿರೀಕ್ಷೆಗಳು ಏನು? ಸಾಲ ಮನ್ನಾವೊಂದೇ ಆದ್ಯತೆಯಾಗುತ್ತದೆಯಾ? ಯಾವುದಾದರೂ ಹೊಸ ಯೋಜನೆಗಳ ಘೋಷಣೆ ಆಗುತ್ತಾ? ಈ ಎಲ್ಲ ಅಂಶಗಳ ಮೇಲೆ ಒಂದು ವಿಶ್ಲೇಷಣೆ ಇಲ್ಲಿದೆ.

ಬೆಂಗಳೂರು[ಜು.4] ಕುಮಾರಸ್ವಾಮಿ ನಾಳೆ ವಿಧಾನಸೌಧದಲ್ಲಿ ಬಜೆಟ್ ಮಂಡಿಸಲಿದ್ದಾರೆ.  ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಾಲ ಮನ್ನಾ ರೈತರಿಗೆ ದೊರೆಯುವುದು ಪಕ್ಕಾ. ಆದರೆ ಸಾಲ ಮನ್ನಾ ಯಾವ ಯಾವ ಕಂಡಿಶನ್ ಗಳಿಗೆ ಬದ್ಧವಾಗುತ್ತದೆ? ನೋಡಲೇಬೇಕು.

ಬೆಳೆ ಸಾಲ ಮಾತ್ರ ಮನ್ನಾ ಮಾಡುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿದ್ಧರಾಗಿದ್ದಾರೆ. ಸಹಕಾರ ಬ್ಯಾಂಕ್ ಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಬೆಳೆ ಸಾಲ ಮನ್ನಾ ಆಗುವುದು ಪಕ್ಕಾ ಆಗಿದೆ.  ಸುಮಾರು 32 ಸಾವಿರ ಕೋಟಿ ರೂಪಾಯಿ ಬೆಳೆ ಸಾಲದ ಮಾಹಿತಿ ತರಿಸಿಕೊಳ್ಳಲಾಗಿದ್ದು  5 ಎಕರೆ ಒಳಗೆ ಜಮೀನು ಇರುವವರು ಮತ್ತು 2 ಲಕ್ಷ ರೂ. ವರೆಗೆ ಮನ್ನಾ ಗ್ಯಾರಂಟಿ.

ಹೊಸ ಯೋಜನೆಗಳು ಏನೇನು?
ಹಲವು ನೀರಾವರಿ ಯೋಜನೆ ಜಾರಿಗೊಳಿಸಲು ಪ್ಲ್ಯಾನ್ ರೂಪಿಸಲಾಗಿದೆ.  ಬೆಳೆ ಮಾರಾಟ, ಸಂರಕ್ಷಣೆ, ನೀರು ಬಳಕೆ ಸೇರಿ ಸಮಗ್ರ ಕೃಷಿ ನೀತಿಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಕುಮಾರಸ್ವಾಮಿ ಮಹಾತ್ವಾಕಾಂಕ್ಷೆಯ ಇಸ್ರೇಲ್ ಮಾದರಿ ಕೃಷಿ ಪದ್ಧತಿ, ಕೆಂಪೇಗೌಡ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ, ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರಿಗೆ ಮಾಸಾಶನ ಭಾಗ್ಯ ಗರ್ಭಿಣಿಯರು, ಬಾಣಂತಿಯರಿಗೆ 6 ತಿಂಗಳವರೆಗೆ ತಲಾ 6 ಸಾವಿರ ರೂ. 65 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ 6 ಸಾವಿರ ಮಾಸಾಶನ ಘೋಷಿಸುವ ಸಾಧ್ಯತೆಯಿದೆ.

ಮಹಿಳೆಯರ ರಕ್ಷಣೆಗೆ ಸರಕಾರ ಬದ್ಧ:
ಹೆಣ್ಣು ಮಕ್ಕಳ ರಕ್ಷಣೆಗೋಸ್ಕರ ಎಲ್ಲಾ ಠಾಣೆಗಳಲ್ಲೂ ನಿರ್ಭಯ ಕೇಂದ್ರ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಾತಿನಿಧ್ಯ, ಬರಗಾಲದಲ್ಲಿ ಮೇವು ಕೊರತೆ ನೀಗಿಸಲು ಮೇವು ಭದ್ರತೆ ನೀತಿ, ಚರ್ಮ ಕೈಗಾರಿಕೆ ಅಭಿವೃದ್ಧಿ ಹಾಗೂ ಸಂಸ್ಕರಣಾ ಮತ್ತು ಹದಕ್ಕೆ ಕೇಂದ್ರದಂತಹ ಯೋಜನೆಗಳು ಜಾರಿಯಾಗಲಿವೆ.

ಸ್ವಸಹಾಯ ಗುಂಪುಗಳ ಬಲವರ್ಧನೆ:
ಸ್ವಸಹಾಯಗುಂಪುಗಳು, ಸ್ತ್ರೀಶಕ್ತಿಸಂಘಗಳ ಬಲವರ್ಧನೆಗೆ 10 ಲಕ್ಷ ರು. ಸಾಲ ಯೋಜನೆ.  ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು "ಕಾಯಕ" ಹೆಸರಲ್ಲಿ ಸಾಲ ಯೋಜನೆ, ಸಣ್ಣ ಕೈಗಾರಿಕೆ ಸ್ಥಾಪಿಸುವವರಿಗೆ 10 ಲಕ್ಷ ರೂಪಾಯಿ ಸಾಲ ಭಾಗ್ಯ ಸ್ಕೀಂ, ಸಮ್ಮಿಶ್ರ
ಸ್ವಉದ್ಯೋಗ ಕೈಗೊಳ್ಳುವವರಿಗೆ "ಕಾಯಕ" ಹೆಸರಿನಲ್ಲೇ 10ಲಕ್ಷ ಸಾಲ ನೀಡುವ ಯೋಜನೆಯೂ ಕುಮಾರ ಪಟ್ಟಿಯಲ್ಲಿದೆ.

ಕಲಬುರಗಿ ಸೋಲಾರ್ ಜಿಲ್ಲೆ: ಕಲಬುರಗಿ ಜಿಲ್ಲೆಯನ್ನು ಸೋಲಾರ್ ವಿದ್ಯುತ್ ಜಿಲ್ಲೆಯಾಗಿ ಪರಿವರ್ತನೆ, ಸಮ್ಮಿಶ್ರ ಸರ್ಕಾರದ 5 ವರ್ಷ ಅವಧಿಯಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.  ಹನಿ ನೀರಾವರಿ ಪದ್ಧತಿ ಸಮರ್ಪಕ ಜಾರಿಗಾಗಿ ಸೋಲಾರ್ ಶಕ್ತಿ ಬಳಕೆ, ಮನೆ ಬಾಗಿಲಿಗೆ ಉಚಿತ ಔಷಧ ವಿತರಿಸುವ ಹೊಸ ಯೋಜನೆ ಸಾಧ್ಯತೆ, ಮಾಸಿಕ ಆಧಾರದಲ್ಲಿ ಜನರ ಮನೆ ಬಾಗಿಲಿಗೇ ಅವಶ್ಯಕ ಔಷಧಿ ವಿತರಣೆಗೂ ಸಮ್ಮಿಶ್ರ ಸರಕಾರ ಆದ್ಯತೆ ನೀಡಲಿದೆ.

ಬೆಂಗಳೂರಿಗೆ ಏನು ಸಿಗಲಿದೆ? 
ಬೆಂಗಳೂರು ಹೊರವಲಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆ, ಬೆಂಗಳೂರಿಗೆ 5 ಪ್ರತ್ಯೇಕ ಟೌನ್ ಶಿಪ್ ನಿರ್ಮಿಸಲು ಮಾಸ್ಟರ್ ಪ್ಲ್ಯಾನ್, ನನೆಗುದಿಗೆ ಬಿದ್ದಿದ್ದ ಕುಮಾರಸ್ವಾಮಿ ಮಹತ್ವಾಕಾಂಕ್ಷೆ ಟೌನ್ ಶಿಪ್ ಸ್ಕೀಂ, ಕನ್ನಡ ಸಾರಸ್ವತ ಲೋಕದ ಪ್ರಮುಖ ಕೃತಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಗಳು ಘೋಷಣೆಯಾಗಬಹುದು.

ಸಿದ್ದು ಯೋಜನೆಗಳ ಮುಂದುವರಿಕೆ ಪಕ್ಕಾ:
ಸಿದ್ದರಾಮಯ್ಯ ಪ್ರಕಟಿಸಿದ್ದ ಭಾಗ್ಯ ಯೋಜನೆಗಳು ಮುಂದುವರಿಕೆ ಪಕ್ಕಾ ಆಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ ಸೇರಿ ಹಲವು ಸರಣಿ ಕಾರ್ಯಕ್ರಮಗಳು ಕಾಂಗ್ರೆಸ್ ಕಡೆಯಿಂದ ಮುಂದುವರಿಯಲಿವೆ.  ಇಂದಿರಾ ಕ್ಯಾಂಟಿನ್ ಸಹ ಮುಂದುವರಿಯಲಿದ್ಮುಂದು ಕೆಲ ಅನುದಾನ ಕಡಿತ ಮಾಡುವ ಸಾಧ್ದುಯತೆ ಇದೆ.

ಯಾವುದಕ್ಕೆಲ್ಲ ಕತ್ತರಿ?
ವಿಶ್ವವಿದ್ಯಾಲಯಗಳ ವೆಚ್ಚ ಸೇರಿ ಅನುತ್ಪಾದಕ ವಲಯಗಳ ವೆಚ್ಚಕ್ಕೆ ಕತ್ತರಿ ಹಾಕುವ ಸಾಧ್ಯತೆ ಇದೆ.  ಇಂಧನ ವಲಯ ಸೇರಿ ಹಲವು ಉತ್ಪಾದಕ ವಲಯಕ್ಕೆ ಹೆಚ್ಚು ಉತ್ತೇಜನ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

click me!