ಅನುಮಾನಕ್ಕೆಡೆ ಮಾಡಿದ ಜೆಡಿಎಸ್ ವರಿಷ್ಟ ದೇವೇಗೌಡ ಹೇಳಿಕೆ

By Kannadaprabha NewsFirst Published Jul 16, 2018, 7:41 AM IST
Highlights

ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹೇಳಿಕೆ ಇದೀಘ ಅನುಮಾನಕ್ಕೆ  ಎಡೆ ಮಾಡಿಕೊಟ್ಟಿದೆ. ತೃತೀಯ ರಂಗ ರಚನೆ ಬಗ್ಗೆ ತಾವು ಕೈ ಹಾಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಎನ್‌ಡಿಯೇತರ ನಾಯಕರ ಉತ್ಸಾಹದಿಂದ ಪಾಲ್ಗೊಂಡದ್ದನ್ನು ಗಮನಿಸಿ ದಾಗ ದೇಶದಲ್ಲಿ ತೃತೀಯ ರಂಗ ರಚನೆ ಯಾಗುವ ಸೂಚನೆಗಳು ದೊರೆತಿದ್ದವು. ಆದರೆ ತದನಂತರದ ಬೆಳವಣಿಗೆಗಳು, ಮುಖಂಡರ ಹೇಳಿಕೆಗಳನ್ನು ಗಮನಿಸಿದಾಗ ಇಂತಹ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. 

ಇದೀಗ ಜೆಡಿಎಸ್ ವರಿಷ್ಠರಾ ಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ, ತೃತೀಯ ರಂಗ ನಿರ್ಮಾಣದ ಪ್ರಯತ್ನಕ್ಕೆ ನಾನು ಕೈಹಾಕಿಲ್ಲ ಮತ್ತು ಇದು ಮುಂದಿನ ಚುನಾವಣೆಗೆ ತೃತೀಯ ರಂಗದ ಸಿದ್ಧತೆ ಬಗ್ಗೆ ನನಗೆ ವಿಶ್ವಾಸವಿಲ್ಲ ಎಂದು ಹೇಳಿರುವುದು ಈ ಅನುಮಾನಗಳು ಮತ್ತಷ್ಟು ಬಲಗೊಳ್ಳಲು ಕಾರಣವಾಗಿದೆ.

ಭಾನುವಾರ ಬೆಳಗಾವಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ರಾಜ್ಯಗಳ ಸನ್ನಿವೇಶ ವಿಭಿನ್ನವಾಗಿದ್ದು, ಅದು ತೃತೀಯರಂಗ ನಿರ್ಮಾಣಕ್ಕೆ ಪೂರಕವಾಗಿದೆ ಎಂದೆನಿಸುತ್ತಿಲ್ಲ ಎಂದು  ಅಭಿಪ್ರಾಯಪಟ್ಟರು.

ದೇಶಾದ್ಯಂತ ಆರೆಸ್ಸೆಸ್, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ. ಅದಕ್ಕೆ ಪರ್ಯಾಯವಾಗಿ ಎನ್‌ಡಿಎ ಹೊರತಾದ ಪಕ್ಷಗಳ ನಾಯಕರು ಪ್ರಮಾಣವಚನ ಸ್ವೀಕರಿಸುವ ವೇಳೆ ಪಾಲ್ಗೊಂಡಿದ್ದರು. ಆರಂಭದಲ್ಲಿ  ಎಲ್ಲರೂ ತೃತೀಯ ರಂಗ ರಚನೆಗೆ ಭರವಸೆ ನೀಡಿದ್ದರು. ನಂತರದಲ್ಲಿ ಆಯಾ ರಾಜ್ಯಗಳ ಪರಿಸ್ಥಿತಿ ಆಧರಿಸಿ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಚಂದ್ರಶೇಖರರಾವ್, ನವೀನ ಪಟ್ನಾಯಕ್, ಮಮತಾ ಬ್ಯಾನರ್ಜಿ ಎಲ್ಲರೂ ತಂತಮ್ಮ ರಾಜ್ಯಗಳಲ್ಲಿ ಪ್ರಭಾವಿಗಳು. ಹೀಗಾಗಿ ಹೊಂದಾಣಿಕೆಗೆ ಆಸಕ್ತಿ ತೋರಲಿಲ್ಲ ಎಂದರು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಸಭೆ ನಡೆಸಿ ತಲಾ 40:40 ಸೀಟು ಹಂಚಿಕೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಕಾಂಗ್ರೆಸ್ ಕೂಡ ಕೆಲವು ಸೀಟುಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕೂಡ ಹೊಂದಾಣಿಕೆ ಕುರಿತು ಇನ್ನೂ ಮಾತುಕತೆ ಆರಂಭವಾಗಬೇಕಿದ್ದು, ನಂತರದಲ್ಲಿ ಸೀಟುಗಳ ಹೊಂದಾಣಿಕೆ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದರು. 

ಇದೇವೇಳೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ರಾಜ್ಯದಲ್ಲಿ 10 ಲೋಕಸಭಾ ಸ್ಥಾನ ಬಿಟ್ಟುಕೊಡುವ ಕುರಿತು ಹೇಳಿಕೆ ನೀಡಿದ್ದಾರೆ. ಆದರೆ ಅದು ಅವರ ವೈಯಕ್ತಿಕ ಹೇಳಿಕೆಯೇ ಹೊರತು ಕಾಂಗ್ರೆಸ್ ಹೈಕಮಾಂಡ್ ಹೇಳಿಕೆಯಲ್ಲ ಎಂದು ತಿಳಿದುಕೊಂಡಿದ್ದೇನೆ ಎಂದು ಅಭಿ ಪ್ರಾಯಪಟ್ಟರು.

click me!